ತುಮಕೂರು: ಪ್ರಸ್ತುತ ಯುವ ಸಮೂಹ ಅರ್ಥವಿಲ್ಲದ ಹಾಡು, ಅರ್ಥವಾಗದ ಅನುಕರಣೆ, ಆಚರಣೆಗಳಿಂದ ದಿಕ್ಕಾಪಾಲಾಗಿದೆ. ಮರೆಯಾಗುತ್ತಿರುವ ಜಾನಪದ ಸಂಸ್ಕೃತಿಯನ್ನು ಪುನರ್ ಸ್ಥಾಪಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ್ ಹೇಳಿದರು.

ನಗರದಲ್ಲಿ ಬುಧವಾರ ಅಂತರಂಗ ಸಂಸ್ಕೃತಿ ಚಿಂತನ ಪ್ರತಿಷ್ಠಾನ, ಕೆಎಸ್ಇಎಫ್ ಶಿಕ್ಷಣ ಮಹಾವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಅಂತರಂಗದ ಹಾಡು–ಮಾತು: ಮರಳಿ ಜಾನಪದದ ಕಡೆಗೆ’ ಸಂವಾದ, ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಪರಿಸ್ಥಿತಿ ಮುಂದುವರಿದರೆ ನಮ್ಮ ಎಲ್ಲ ಜನಪದರ ಹಾಡುಗಳು, ಹಳ್ಳಿಗಳ ಆಚರಣೆ ಮೂಲೆಗುಂಪಾಗುತ್ತವೆ. ನಮ್ಮ ತನವನ್ನೇ ಮಾರಿಕೊಳ್ಳುತ್ತೇವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮುಂದಿನ ಪೀಳಿಗೆಗೆ ಜಾನಪದ ಪರಿಚಯಿಸಬೇಕು. ಪೂರ್ವಿಕರ ಆಚಾರ–ವಿಚಾರ ತಿಳಿಸಬೇಕು ಎಂದರು.

ವೈ.ಎನ್.ಶಶಿಕುಮಾರ್, ದಿಶಾ, ಸುಜನ್, ಶೋಭಾ ಅಭಿಲಾಶ್ ತಂಡದಿಂದ ಜಾನಪದ ಗಾಯನ ನಡೆಯಿತು. ಪತ್ರಕರ್ತ ಪಿ.ಡಿ.ಈರಣ್ಣ, ತಮಿಳುನಾಡಿನ ವಿಜಯ ಕಾರ್ಪೋರೇಷನ್ ಲಿಮಿಟೆಡ್ನ ಸಿಇಒ ಬಿ.ಎಂ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಪ್ರತಿಷ್ಠಾನದ ಅಧ್ಯಕ್ಷ ಕೆ.ಜೆ.ಗುರುಸ್ವಾಮಿ, ಪತ್ರಕರ್ತ ಸಾ.ಚಿ.ರಾಜಕುಮಾರ, ಕೆಎಸ್ಇಎಫ್ ಪ್ರಾಂಶುಪಾಲ ಹರೀಶ್, ಪ್ರಾಧ್ಯಾಪಕರಾದ ಕ್ರಾಂತಿಕುಮಾರ್, ಎಸ್.ಎಚ್.ಅರುಣ, ಪಿ.ರಾಮಕೃಷ್ಣ, ಟಿ.ಪಿ.ಕುಮಾರಸ್ವಾಮಿ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-17-1326848576

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.