ತುಮಕೂರು: ಬದುಕಿನಲ್ಲಿ ಕ್ರಿಯಾಶೀಲತೆ ಬೆಳೆಸಿಕೊಂಡು ಹಾಸ್ಯ ಹುಡುಕಬೇಕು. ಎಲ್ಲವನ್ನು ವಕ್ರ ದೃಷ್ಟಿಯಲ್ಲಿ ನೋಡಿದರೆ ಹಾಸ್ಯ ಹುಟ್ಟುತ್ತದೆ. ಆದರೆ ಬದುಕನ್ನು ವಕ್ರವಾಗಿ ನೋಡಿದರೆ ತತ್ವಶಾಸ್ತ್ರ ಹುಟ್ಟುತ್ತದೆ ಎಂದು ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ಅಭಿಪ್ರಾಯಪಟ್ಟರು.

ನಗರದಲ್ಲಿ ಈಚೆಗೆ ನಗೆಮಲ್ಲಿಗೆ ಬಳಗ, ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಿದ್ದ ಮೂರ್ಖರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ನಗೆಮಲ್ಲಿಗೆ ಬಳಗದಿಂದ ಪ್ರತಿ ವರ್ಷ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಪೂರಕವಾಗಿ ಸಾರ್ವಜನಿಕರು ಪರಿಷತ್ತಿನಲ್ಲಿ ದತ್ತಿ ಸ್ಥಾಪನೆ ಮಾಡಬೇಕು’ ಎಂದರು.

ಯೋಗ ಗುರು ಎಂ.ಕೆ.ನಾಗರಾಜರಾವ್ ಅವರಿಗೆ ಗೌಡನಕಟ್ಟೆ ತಿಮ್ಮಯ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವೈ.ಎಸ್.ನಂಜುಂಡಸ್ವಾಮಿ, ಲೇಖಕಿ ಶೈಲಾ ನಾಗರಾಜ್, ವೈದ್ಯ ಜಿ.ನಾಗರಾಜು, ನಗೆ ಬರಹಗಾರ ಮಣ್ಣೆರಾಜು, ನಗೆಮಲ್ಲಿಗೆ ಬಳಗದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪದಾಧಿಕಾರಿಗಳಾದ ಜಿ.ಎನ್.ರಾಧಾಕೃಷ್ಣ, ಅಬ್ಬಿನಹೊಳೆ ಸುರೇಶ್, ವಿಶ್ವನಾಥ್ ಸ್ವದೇಶಿ, ಡಿ.ವಿ.ಶೇಷಾಚಲ, ಗೌ.ತಿ.ರಂಗನಾಥ್, ಗೌ.ತಿ.ವೆಂಕಟಾಚಲ, ಸಂಕೇತ್ ಗುರುದತ್, ದೊಂಬರನಹಳ್ಳಿ ನಾಗರಾಜ್, ವೆನ್ನಲ ಕೃಷ್ಣ ಇತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-17-54951588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.