ಮುತ್ತಿನ ಒಡವೆ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು. ಈಗ ಉಡುಗೆಯಲ್ಲೂ ಮುತ್ತಿನ ವಿನ್ಯಾಸ ಬಂದಿದ್ದು, ಫ್ಯಾಷನ್ಪ್ರಿಯರ ಮನತಣಿಸುತ್ತಿದೆ. ಫಳಫಳನೆ ಹೊಳೆಯುವ ಮುತ್ತಿನ ಒಡವೆಯ ಜೊತೆಗೆ ಉಡುಗೆಯನ್ನೂ ಮುತ್ತಿನಿಂದಲೇ ತಯಾರಿಸಿದ್ದನ್ನು ಮಹಿಳೆಯರು ಇಷ್ಟಪಡುತ್ತಿದ್ದಾರೆ.

ಪ್ಯಾಂಟ್ ಮೇಲೆ ಧರಿಸುವ ಟಾಪ್ನ ವಿನ್ಯಾಸವು ಮುತ್ತಿನಿಂದ ಕೂಡಿದ್ದು, ಇದು ಈಗ ಟ್ರೆಂಡ್ ಆಗಿದೆ. ಸಿನಿಮಾ ತಾರೆಯರು, ಮಾಡೆಲ್ಗಳು ಹಾಗೂ ಸೆಲೆಬ್ರಿಟಿಗಳು ಮುತ್ತಿನ ಉಡುಗೆಗಳಿಂದ ಕಂಗೊಳಿಸುತ್ತಿದ್ದು, ಮುತ್ತುಪ್ರಿಯರ ಕಣ್ಣುಗಳಲ್ಲಿ ಮಿಂಚಿನ ಸಂಚಾರವಾಗುವಂತೆ ಮಾಡುತ್ತಿದ್ದಾರೆ.

ಹಾಗೆ ನೋಡಿದರೆ, ರಾಜ ಮಹಾರಾಜರ ಕಾಲದಲ್ಲೂ ಮುತ್ತಿನ ಒಡವೆಗೆ ಎಲ್ಲಿಲ್ಲದ ಬೇಡಿಕೆಯಿತ್ತು. ರಾಜ ಮಹಾರಾಜರು ಐದೆಳೆ, ಹತ್ತೆಳೆ ಮುತ್ತಿನ ಸರಗಳಿಗೆ ದೊಡ್ಡ ದೊಡ್ಡ ಹರಳಿನ ಪೆಂಡೆಂಟ್ ಹಾಕಿಕೊಂಡು ಧರಿಸುತ್ತಿದ್ದರು. ಅವರು ಧರಿಸುವ ಪೇಟ, ಕಿರೀಟಗಳಲ್ಲೂ ಮುತ್ತಿನ ಎಳೆಗಳು ಮಿಂಚುತ್ತಿದ್ದವು. ಹಾಗೇ ಉಡುಗೆ, ಶಾಲುಗಳಲ್ಲೂ ಮುತ್ತಿನಿಂದ ಮಾಡಿದ ವಿನ್ಯಾಸಗಳು ಮನಸೆಳೆಯುತ್ತಿದ್ದವು. ಮಹಾರಾಣಿಯರಿಗಂತೂ ಮುತ್ತಿನ ಒಡವೆ, ಉಡುಗೆ ಎಂದರೆ ಅಚ್ಚುಮೆಚ್ಚಾಗಿತ್ತು. ಮುತ್ತಿನ ಸರ, ಮುತ್ತಿನ ಬಳೆ, ಬಾಜೂಬಂದ್, ಸೊಂಟಪಟ್ಟಿ, ಕಾಲ್ಗಜ್ಜೆ, ಕಿವಿಯೋಲೆ ಎಲ್ಲದರಲ್ಲೂ ಹೊಳಪುಳ್ಳ ಮುತ್ತು ಇರುವಂತೆ ನೋಡಿಕೊಳ್ಳುತ್ತಿದ್ದರು. ಇವೆಲ್ಲದರ ಜೊತೆಗೆ ತಾವು ಧರಿಸುತ್ತಿದ್ದ ಸೀರೆಗಳ ಅಂಚಿನಲ್ಲೂ ಮುತ್ತಿನ ವಿನ್ಯಾಸಕ್ಕೆ ಒತ್ತು ಕೊಡುತ್ತಿದ್ದರು. ಇದೇ ಮುಂದೆ ಸಾಮಾನ್ಯ ಮಹಿಳೆಯರಿಗೂ ಮುತ್ತಿನ ಒಡವೆಯಲ್ಲಿ ಆಸಕ್ತಿ ಬರುವಂತೆ ಮಾಡಿತು ಎಂಬುದು ಫ್ಯಾಷನ್ ತಜ್ಞರ ಅಭಿಮತ.

ಈಗಿನ ಮಾಡೆಲಿಂಗ್ ತಾರೆಯರು ರ್ಯಾಂಪ್ ಮೇಲೆ ಕ್ಯಾಟ್ವಾಕ್ ಮಾಡುವಾಗಲೂ ಮುತ್ತಿನ ಸರಮಾಲೆ ಧರಿಸಿ, ಡ್ರೆಸ್ನಲ್ಲೂ ಇದನ್ನೇ ಬಳಕೆ ಮಾಡುತ್ತಾರೆ. ವಿವಿಧ ಗಾತ್ರ, ಬಣ್ಣಗಳಲ್ಲಿ ದೊರೆಯುವ ಮುತ್ತಿನ ಒಡವೆಗಳು ಯುವತಿಯರನ್ನೂ ಸೆಳೆಯುತ್ತಿವೆ.

‘ಮುತ್ತಿನಿಂದ ವಿನ್ಯಾಸ ಮಾಡಿದ ಸೀರೆಯ ಅಂಚು, ಬ್ಲೌಸ್ಗಳು, ಗೌನ್ ಎಲ್ಲವೂ ಈಗ ಫ್ಯಾಷನ್ ಟ್ರೆಂಡ್ ಸೃಷ್ಟಿಸಿವೆ. ಅಚ್ಚಬಿಳಿಯ ಮುತ್ತು, ಕ್ರೀಮ್, ತಿಳಿಗುಲಾಬಿ ಬಣ್ಣದ ಮುತ್ತಿನ ಉಡುಗೆ– ತೊಡುಗೆ ಜೊತೆಗೆ ಬೇಸಿಗೆ ಕಾಲಕ್ಕಾಗಿಯೇ ಇರುವ ಪೇಸ್ಟಲ್ ಕಲರ್ ಮುತ್ತಿನ ಎಥ್ನಿಕ್ ಉಡುಗೆಗಳು ಹಾಗೂ ಇಂಡೊ ವೆಸ್ಟರ್ನ್ ಶೈಲಿಯ ಉಡುಗೆ ಹೆಚ್ಚು ಜನಪ್ರಿಯವಾಗುತ್ತಿವೆ’ ಎಂದು ಹೇಳುತ್ತಾರೆ ಬೆಂಗಳೂರಿನ ಫ್ಯಾಷನ್ ತಜ್ಞೆ ಉಮಾ ಜಯಕುಮಾರ್.

‘ಆಧುನಿಕ, ಸಾಂಪ್ರದಾಯಿಕ ಎರಡೂ ರೀತಿಯ ಮನೋಭಾವದವರಿಗೆ ಸೂಕ್ತವಾಗುವಂತೆ ಈ ಉಡುಗೆಗಳನ್ನು ವಿನ್ಯಾಸ ಮಾಡಿರುವುದರಿಂದ ಯಾರು ಬೇಕಾದರೂ ಇವುಗಳನ್ನು ತೊಟ್ಟು ಸಂಭ್ರಮಿಸಬಹುದು’ ಎಂಬುದು ಇವರ ಅಭಿಪ್ರಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-4-1259046814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.