ಅಂದಕ್ಕೂ, ಆರೋಗ್ಯಕ್ಕೂ ವಾಲ್‌ನಟ್‌

4

ಅಂದಕ್ಕೂ, ಆರೋಗ್ಯಕ್ಕೂ ವಾಲ್‌ನಟ್‌

Published:
Updated:

ಗಾಢ ಗೋಧಿ ಬಣ್ಣ ಹೊಂದಿರುವ ಗಟ್ಟಿಯಾದ ಪದರದ ಒಳಗಡೆ ಇರುವ ವಾಲ್‌ನಟ್ (ಅಕ್ರೋಟ್‌) ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು. ವಾಲ್‌ನಟ್‌ ಅನ್ನು ಚಿಪ್ಪಿನಿಂದ ಹೊರತೆಗೆದಾಗ ಅದು ಒಂದು ರೀತಿ ಸುರುಳಿ ಸುತ್ತಿಕೊಂಡಿರುವ ಮಿದುಳಿನಂತೆಯೇ ಕಾಣುತ್ತದೆ. ಇದರಲ್ಲಿ ಅತಿ ಹೆಚ್ಚು ಪೋಷಕಾಂಶಗಳಿರುವುದರಿಂದ ಶರೀರದ ಅ೦ದ ಹಾಗೂ ಆರೋಗ್ಯಕ್ಕೆ ಸಹಕಾರಿ. ದಿನಾ 3–4 ವಾಲ್‌ನಟ್ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ದೊರಕುತ್ತವೆ.

* ಆ್ಯಂಟಿ ಆಕ್ಸಿಡೆ೦ಟ್‌ಗಳಿಂದ ಸಮೃದ್ಧವಾಗಿರುವ ವಾಲ್‌ನಟ್ ಚರ್ಮದಲ್ಲಿ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ. ಇದರ ತೈಲವನ್ನು ಮುಖಕ್ಕೆ ಹಚ್ಚಿಕೊಳ್ಳುವುದರ ಮೂಲಕ ಮುಪ್ಪಿನ ಲಕ್ಷಣಗಳಿಗೆ ವಿದಾಯ ಹೇಳಬಹುದು.

* ವಾಲ್‌ನಟ್ ತಿನ್ನುವುದರಿಂದ ಚರ್ಮ ಕಲೆರಹಿತವಾಗಿ ಕಾಂತಿಯುಕ್ತವಾಗುತ್ತದೆ. ಇದು ದೇಹದ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಆಮ್ಲಜನಕ ಹಾಗೂ ಪೋಷಕಾ೦ಶಗಳನ್ನು ಶರೀರದ ಪ್ರತಿಯೊ೦ದು ಜೀವಕೋಶಗಳಿಗೂ ತಲುಪಿಸುವ ಕೆಲಸ ಮಾಡುತ್ತದೆ. ಪ್ರತಿ ದಿನ ಉಪಾಹಾರವನ್ನು ಸೇವಿಸುವಾಗ ಮೂರರಿ೦ದ ನಾಲ್ಕು ವಾಲ್‌ನಟ್‌ ಸೇವಿಸಿದಲ್ಲಿ ತ್ವಚೆ ಆರೋಗ್ಯವಾಗುತ್ತದೆ

* ಚರ್ಮಕ್ಕೆ ಸೋಂಕುಗಳಾದಾಗ ವಾಲ್‌ನಟ್‌ ತೈಲ ಹಚ್ಚಿಕೊಂಡರೆ ಬೇಗ ಗುಣವಾಗುತ್ತದೆ. ಕಾಲ್ಬೆರಳುಗಳ ನಡುವೆ ಕಾಣಿಸಿಕೊಳ್ಳುವ ಫ೦ಗಸ್, ಸೊರಿಯಾಸಿಸ್‌ನಂತಹ ಚರ್ಮರೋಗಗಳಿಗೆ ಗುಣಪಡಿಸುತ್ತದೆ 

* ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಇದು ಸೂರ್ಯ ಕಿರಣಗಳಿಂದ ಆಗುವ ಹಾನಿಯಿ೦ದ ತ್ವಚೆಯನ್ನು ರಕ್ಷಿಸುತ್ತದೆ. ಈ ಬೀಜಗಳಲ್ಲಿ ಒಮೇಗಾ-3 ಕೊಬ್ಬು ಹೇರಳವಾಗಿದ್ವಾದು, ಇವು ಜೀವಕೋಶಗಳನ್ನು ಸತ್ವಯುತವನ್ನಾಗಿಸುತ್ತವೆ ಹಾಗೂ ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ

* ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ, ಉತ್ತಮ ಕೊಲೆಸ್ಟ್ರಾಲ್‌ ಅನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುತ್ತದೆ. ಸದಾ ಉತ್ಸಾಹ ಹಾಗೂ ಹುರುಪಿನಿಂದ ಇರುವಂತೆ ಮಾಡುತ್ತದೆ

* ಇದರಲ್ಲಿನ ಪ್ರೊಟೀನ್‌ ಅಂಶ ಮಾಂಸಖಂಡಗಳ ಬೆಳವಣಿಗೆ ಹಾಗೂ ಅದರ ಶಕ್ತಿಯನ್ನು ಹೆಚ್ಚಿಸುತ್ತದೆ. 

* ಮೆಗ್ನೀಶಿಯ೦, ಪ್ರೊಟೀನ್‌, ನಾರಿನ೦ಶ, ಹಾಗೂ ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವುದರಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಹಾಲೂಣಿಸುವ ತಾಯಂದಿರಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. 

* ಕೂದಲ ಬೆಳವಣಿಗೆಗೆ ಅಗತ್ಯವಿರುವ ಬಯೋಟಿನ್ ಅಂಶ ಇದರಲ್ಲಿ ಇರುವುದರಿಂದ ಕೂದಲು ಉದುರುವಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೂದಲು ಕಪ್ಪಗೆ, ದಟ್ಟವಾಗಿ ಹಾಗೂ ಹೊಳೆಯುವಂತೆ ಮಾಡುತ್ತದೆ

* ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಿ, ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !