ಬಾಳೆ-ಹಣ್ಣಷ್ಟೇ ಅಲ್ಲ, ಕಾಯಿಯಿಂದಲೂ ಖಾದ್ಯಗಳು...

7

ಬಾಳೆ-ಹಣ್ಣಷ್ಟೇ ಅಲ್ಲ, ಕಾಯಿಯಿಂದಲೂ ಖಾದ್ಯಗಳು...

Published:
Updated:

ಬಾಳೆಕಾಯಿ ಮಸಾಲೆಪಲ್ಯ 

ಬೇಕಾಗುವ ಸಾಮಗ್ರಿಗಳು 

ಬಾಳೆಕಾಯಿ – 2

ಮೆಣಸಿನಹುಡಿ – 1/2ಚಮಚ

ಗರಂ ಮಸಾಲೆ – 1/2ಚಮಚ

ಅರಿಸಿನ – ಚಿಟಿಕೆ

ಇಂಗು – ಚಿಟಿಕೆ

ಉಪ್ಪು – ರುಚಿಗೆ

ಜೀರಿಗೆ – 1ಚಮಚ

ಕರಿಬೇವು – ಐದಾರು ಎಲೆ

ಎಣ್ಣೆ – 3ಮೂರು ಚಮಚ

ತಯಾರಿಸುವ ವಿಧಾನ: ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ನೀರಿನಲ್ಲಿ ಹಾಕಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಜೀರಿಗೆ–ಕರಿಬೇವುಗಳನ್ನು ಹಾಕಿ. ಅರಿಸಿನ–ಇಂಗನ್ನೂ ಸೇರಿಸಿಕೊಳ್ಳಿ. ನಂತರ ನೀರಿನಿಂದ ತೆಗೆದ ಬಾಳೆಕಾಯಿಯನ್ನು ಅದಕ್ಕೆ ಹಾಕಿ. ಉಪ್ಪು, ಮೆಣಸಿನಹುಡಿ, ಗರಂ ಮಸಾಲೆಯನ್ನು ಹಾಕಿ ಮುಚ್ಚಳ ಮುಚ್ಚಿಡಿ. ಏಳೆಂಟು ನಿಮಿಷದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ನೀರು ಹಾಕುವ ಅಗತ್ಯವಿಲ್ಲ, ಎಣ್ಣೆಯಲ್ಲಿ ಬೇಗ ಬೇಯುತ್ತದೆ. ಈ ಪಲ್ಯ ಅನ್ನ, ಚಪಾತಿಯೊಂದಿಗೆ ಚೆನ್ನಾಗಿರುತ್ತದೆ.

***

ಬಾಳೆಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿಗಳು 

ಬಾಳೆಕಾಯಿ – 4

ಮೊಸರು – 1ಕಪ್‌

ಉಪ್ಪು – ರುಚಿಗೆ

ಹಸಿಮೆಣಸು – 2

ಒಗ್ಗರಣೆಗೆ ಎಣ್ಣೆ – 1ಚಮಚ

ಕಡ್ಲೇಬೇಳೆ – 1ಚಮಚ

ಜೀರಿಗೆ – 1/2ಚಮಚ

ಸಾಸಿವೆ – ಸ್ವಲ್ಪ

ಕರಿಬೇವು – 4ಎಲೆ

ಇಂಗು – ಚಿಟಿಕೆ 

ತಯಾರಿಸುವ ವಿಧಾನ: ಮೊದಲು ಬಾಳೆಕಾಯಿಯನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ ಒಂದು ವಿಸಿಲ್ ಕೂಗಿಸಿಕೊಳ್ಳಿ. ಆರಿದ ಬಳಿಕ ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ನಂತರ ಹಸಿಮೆಣಸು ಕಟ್ ಮಾಡಿ ಹಾಕಿ, ಮೊಸರು, ಉಪ್ಪನ್ನು ಸೇರಿಸಿಕೊಳ್ಳಿ. ನಂತರ ಕಡ್ಲೆಬೇಳೆ, ಜೀರಿಗೆ, ಸಾಸಿವೆ, ಇಂಗು ಹಾಗು ಕರಿಬೇವಿನ ಒಗ್ಗರಣೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ.

***

ಬಾಳೆಕಾಯಿ ದೋಸೆ

ಬೇಕಾಗುವ ಸಾಮಗ್ರಿಗಳು: 

ದೋಸೆ ಅಕ್ಕಿ – 4ಕಪ್

ಬಾಳೆಕಾಯಿ  ಹೆಚ್ಚಿದ್ದು – 4ಕಪ್‌

ಉಪ್ಪು – ರುಚಿಗೆ

ಕಾಯಿತುರಿ – ಸ್ವಲ್ಪ

ತಯಾರಿಸುವ ವಿಧಾನ: ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ನೀರಿನಲ್ಲಿ ಮುಳುಗಿಸಿಡಿ. ನೆನೆಸಿಟ್ಟ ಅಕ್ಕಿಯನ್ನು ತೊಳೆದು, ಬಾಳೆಕಾಯಿಯನ್ನು ಸೇರಿಸಿ. ಕಾಯಿತುರಿ ಹಾಗೂ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಹಿಟ್ಟು ನುಣ್ಣಗೆ ಇರಲಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತೆಳುವಾದ ದೋಸೆಯನ್ನು ತಯಾರಿಸಿಕೊಳ್ಳಿ.

***

ಬಾಳೆಕಾಯಿ ಕಟ್ಲೆಟ್

ಬೇಕಾಗುವ ಸಾಮಗ್ರಿಗಳು: 

ಬಾಳೆಕಾಯಿ – 3

ಶುಂಠಿ– ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ

ಗರಂಮಸಾಲೆ – 1/2ಚಮಚ

ಅರಿಸಿನ – ಚಿಟಿಕೆ

ಕೊತ್ತಂಬರಿ ಸೊಪ್ಪು ಹೆಚ್ಚಿದ್ದು – ಸ್ವಲ್ಪ

ಎಣ್ಣೆ – 4ಚಮಚ

ಉಪ್ಪು – ರುಚಿಗೆ 

ತಯಾರಿಸುವ ವಿಧಾನ: ಬಾಳೆಕಾಯಿಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಆರಿದ ಬಳಿಕ ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಸಿನ, ಉಪ್ಪು ಹಾಗೂ ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪು – ಇಷ್ಟನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕೈಯಲ್ಲಿ ಚಪ್ಪಟೆ ಮಾಡಿಕೊಂಡು ಕಾವಲಿಗೆಯಲ್ಲಿ ಎರಡೂ ಬದಿ ಎಣ್ಣೆ ಹಾಕಿ ಬೇಯಿಸಿ.

***

ಬಾಳೆಕಾಯಿ ಪಕೋಡ

ಬೇಕಾಗುವ ಸಾಮಗ್ರಿಗಳು: 

ಬಾಳೆಕಾಯಿ – 4

ಹಸಿಮೆಣಸು – 2

ಈರುಳ್ಳಿ – 2

ಶುಂಠಿ – ಸ್ವಲ್ಪ

ಗರಂ ಮಸಾಲೆ – ಅರ್ಧ ಚಮಚ

ಜೀರಿಗೆಪುಡಿ  – ಸ್ವಲ್ಪ

ಕೊತ್ತಂಬರಿಸೊಪ್ಪು ಹಾಗೂ ಕರಿಬೇವು – ಸ್ವಲ್ಪ

ಉಪ್ಪು – ರುಚಿಗೆ

ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಬಾಳೆಕಾಯಿಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ಸುಲಿದು ಪುಡಿಮಾಡಿ. ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸು, ಈರುಳ್ಳಿ, ಶುಂಠಿ, ಕೊತ್ತಂಬರಿಸೊಪ್ಪು ಹಾಗೂ ಕರಿಬೇವನ್ನು ಸೇರಿಸಿ. ನಂತರ ಜೀರಿಗೆ ಪುಡಿ, ಇಂಗು, ಗರಂಮಸಾಲೆಗಳನ್ನೂ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ ಉಂಡೆಯಂತೆ ಮಾಡಿ ಎಣ್ಣೆಯಲ್ಲಿ ಕರಿಯಿರಿ. ವಡೆಯಂತೆ ಕೂಡ ಮಾಡಬಹುದು. ಸಂಜೆ ಟೀ, ಕಾಫಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !