ಹೊಸ ವರ್ಷಕ್ಕೆ ಬರ್ಫಿ, ಅನಾನಸ್ ಬಾತ್

ಜಾಮೂನ್ ಬರ್ಫಿ
ಬೇಕಾಗುವ ಸಾಮಗ್ರಿಗಳು: ಜಾಮೂನ್ ಹಿಟ್ಟು – 1 ಕಪ್, ಹಾಲು – 1 ಕಪ್, ತುಪ್ಪ – 1 ಕಪ್, ತೆಂಗಿನಕಾಯಿ ತುರಿ – 1 ಕಪ್, ಸಕ್ಕರೆ – 3 ಕಪ್.
ತಯಾರಿಸುವ ವಿಧಾನ: ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಗಂಟಿಲ್ಲದಂತೆ ಕರಗಿಸಿ. ಗ್ಯಾಸ್ ಅನ್ನು ಮಧ್ಯಮ ಉರಿಯಲ್ಲಿ ಇಟ್ಟು ತಳ ಬಿಡುವವರೆಗೆ ಕಾಯಿಸುತ್ತಾ ಕೈಯಾಡಿಸಬೇಕು. ತುಪ್ಪ ಸವರಿದ ತಟ್ಟೆಗೆ ಸುರಿದು ಚೌಕಾಕಾರದಲ್ಲಿ ಕತ್ತರಿಸಿದರೆ 15 ನಿಮಿಷದಲ್ಲಿ ಬರ್ಫಿ ರೆಡಿ.
***
ಜಾಮೂನ್ ಪಕೋಡ
ಬೇಕಾಗುವ ಸಾಮಗ್ರಿಗಳು: ಜಾಮೂನ್ ಹಿಟ್ಟು – 1 ಕಪ್, ಈರುಳ್ಳಿ – 1 ದೊಡ್ಡದು, ಕೊತ್ತಂಬರಿಸೊಪ್ಪು – ಸ್ವಲ್ಪ, ಹಸಿಮೆಣಸಿನಕಾಯಿ– 2 ಕತ್ತರಿಸಿದ್ದು, ಉಪ್ಪು – 1/4 ಚಮಚ, ಕರಿಯಲು ಎಣ್ಣೆ
ತಯಾರಿಸುವ ವಿಧಾನ: ಜಾಮೂನ್ ಹಿಟ್ಟಿಗೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹದವಾಗಿ ಕಲೆಸಿ. ಚಿಕ್ಕ ಉಂಡೆಗಳನ್ನು ಎಣ್ಣೆಯಲ್ಲಿ ಬಿಟ್ಟು ಸಣ್ಣ ಉರಿಯಲ್ಲಿ ಕರಿದರೆ ರುಚಿಯಾದ ಪಕೋಡ ಕ್ಷಣಮಾತ್ರದಲ್ಲಿ ಸಿದ್ಧವಾಗುತ್ತದೆ.
***
ಸಾಮೆ ಅಕ್ಕಿ ಅನಾನಸ್ ಸಿಹಿ ಬಾತ್
ಬೇಕಾಗುವ ಸಾಮಗ್ರಿಗಳು: ಸಾಮೆ ಅಕ್ಕಿ – 1/2 ಕಪ್, ಸಕ್ಕರೆ – ಒಂದು ಕಾಲು ಕಪ್, ಅನಾನಸ್ ಹಣ್ಣಿನ ತಿರುಳು – 1/4 ಕಪ್, ತುಪ್ಪ – 4 ಚಮಚ, ಗೋಡಂಬಿ, ದ್ರಾಕ್ಷಿ ಸ್ವಲ್ಪ
ತಯಾರಿಸುವ ವಿಧಾನ: ಸಾಮೆ ಅಕ್ಕಿಗೆ ಒಂದು ಅಳತೆಗೆ ಎರಡು ಪಟ್ಟು ನೀರು ಸೇರಿಸಿ ಅನ್ನ ಮಾಡಿಕೊಳ್ಳಬೇಕು. ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ, ಒಂದು ಕುದಿ ಬಂದು ನೊರೆ ಉಂಟಾದಾಗ ಸಾಮೆ ಅನ್ನ, ತುಪ್ಪ ಹಾಕಿ ಸರಿಯಾಗಿ ಕಲೆಸುತ್ತಾ ಇರಬೇಕು. ಮಿಶ್ರಣ ದಪ್ಪವಾಗುತ್ತಿದ್ದಂತೆ, ಅನಾನಸ್ ತಿರುಳು ಸೇರಿಸಿ ಸಣ್ಣ ಉರಿ ಇಟ್ಟು ಚೆನ್ನಾಗಿ ಕೈಯಾಡಿಸಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಕಿದರೆ ಸಿಹಿ ಸಾಮೆ ಬಾತ್ ರೆಡಿ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.