ಚೆಟ್ಟಿನಾಡು ನೆಲದ ಸೊಗಡಿನ ಸವಿರುಚಿ

7

ಚೆಟ್ಟಿನಾಡು ನೆಲದ ಸೊಗಡಿನ ಸವಿರುಚಿ

Published:
Updated:
Deccan Herald

ಸಂಪ್ರಾದಾಯಿಕ ಚೆಟ್ಟಿನಾಡು ಶೈಲಿಯಲ್ಲಿ ತಯಾರಾಗುವ ಆಹಾರ ಪದಾರ್ಥಗಳು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ. ಈ ಶೈಲಿಯ ನಾಟಿ ಕೋಳಿಯ ಸ್ವಾದಿಷ್ಟ ಸಾರು, ತುಸು ಹುಳಿಯಾದ ಮೀನು ಸಾರು, ಸಿಗಡಿ ಮತ್ತು ಏಡಿ ಖಾದ್ಯಗಳ ಸವಿ ನಾಲಿಗೆಯ ರುಚಿ ತಣಿಸುತ್ತದೆ. ಹಿತವಾದ ಖಾರದ ಅನುಭವ ಈ ಆಹಾರ ಪದ್ಧತಿಯ ವೈಶಿಷ್ಟ್ಯ.

ನಗರದ ಶಾಂಗ್ರಿ –ಲಾ
ಹೋಟೆಲ್‌ನಲ್ಲಿ ನಡೆಯುತ್ತಿರುವ ಆಹಾರ ಉತ್ಸವದಲ್ಲಿ ಚೆಟ್ಟಿನಾಡು ನಾಟಿ ಕೋಳಿ ಸಾರು, ಮೀನು ಕೊಳಂಬು (ಸಾರು), ಕೊತ್ತು ಪರೋಟ (ಚಿಕನ್ ಮಿಶ್ರಿತ), ಏಡಿ ಹಾಗೂ ಸಿಗಡಿ ಮಸಾಲೆ, ಇಡಿಯಪ್ಪಂ (ದೋಸೆ), ಇದನ್ನು ಸವಿಯಲು ಬೇಕಾದ ರುಚಿಕಟ್ಟಾದ ತರಕಾರಿ ಮಿಶ್ರಿತ ತೆಂಗಿನ ಕಾಯಿ ರಸ, ಮೂಲಂಗಿ ಮಸಾಲೆ, ಶುಂಠಿ ಮಸಾಲೆ, ತೊಂಡೆಕಾಯಿ ಪಲ್ಯ, ‌ದೊಡ್ಡ ಬಿನ್ಸ್ ‍ಪಲ್ಯ, ಕಪ್ಪು ಅಕ್ಕಿ ಮತ್ತು ಬೆಲ್ಲದಿಂದ ತಯಾರಿಸಿದ ಹಲ್ವ ಮಾದರಿಯ ಸಿಹಿ ತಿನಿಸು (ಆದಿ ಕುಂಬಾಯಂ) ಈ ಆಹಾರ ಉತ್ಸವದ ಪ್ರಮುಖ ಆಕರ್ಷಣೆ.

ಹಳ್ಳಿಗಳಲ್ಲಿ ಸಾಕಣೆ ಮಾಡುವ ನಾಟಿ ಕೋಳಿ ಮತ್ತು ಕೆರೆ, ಹೊಳೆಯಲ್ಲಿ ಸಿಗುವ ಮೀನಷ್ಟೇ ಇಲ್ಲಿ ಬಳಕೆ ಮಾಡಿ ಖಾದ್ಯ ತಯಾರು ಮಾಡಲಾಗುತ್ತದೆ. ಚೆಟ್ಟಿನಾಡು ಪ್ರದೇಶದ ಅಡುಗೆಯಲ್ಲಿ ಬಳಕೆ ಮಾಡುವ ಕೆಲ ಸಂಬಾರು ಪದಾರ್ಥಗಳು, ವಿವಿಧ ರೀತಿಯ ಕಾಳು, ಸೊಪ್ಪುನಿಂದ ತಯಾರಾದ ಮಸಾಲೆ ಘಮ ಈ ಆಹಾರದ ವಿಶೇಷ ಎನ್ನುತ್ತಾರೆ ಬಾಣಿಸಿಗ ಪ್ರಭಾಕರನ್.

ನೆಲದ ಸೊಗಡಿಗೆ ತಕ್ಕಂತೆ ಕೋಳಿ ಸಾರು, ಫ್ರೈನಲ್ಲಿ ಸ್ವಲ್ಪ ಮಟ್ಟಿಗೆ ಖಾರ ಹೊರತುಪಡಿಸಿದರೆ ಬಹುತೇಕ ಪದಾರ್ಥಗಳು ಹಿತ ಅನುಭವ ನೀಡುತ್ತದೆ. ಸಕ್ಕರೆ ಅಂಶವೇ ಇಲ್ಲದೆ ಬೆಲ್ಲದಿಂದ ತಯಾರಾದ ವಿವಿಧ ರೀತಿಯ ಸಿಹಿ ತಿನಿಸುಗಳಂತೂ ಭೋಜನ ಪ್ರಿಯರಿಗೆ ಇಷ್ಟವಾಗುತ್ತದೆ. ಕೊಬ್ಬಿನಾಂಶ ಇಲ್ಲದೆ ಇರುವುದು ಈ ಆಹಾರದ ಮತ್ತೊಂದು ವಿಶೇಷತೆ.

ಗ್ರಾಹಕರಿಗೆ ಬೇರೆ ಬಗೆಯ ಸವಿರುಚಿ ಅನುಭವ ನೀಡಬೇಕೆಂಬ ಉದ್ದೇಶದಿಂದ ಚೆಟ್ಟಿನಾಡು ಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ಮಾಡಿ ಸ್ಥಳೀಯರೊಂದಿಗೆ ಬೆರೆತು, ಪ್ರಾದೇಶಿಕವಾಗಿ ಭಿನ್ನವಾಗಿರುವ ಪದಾರ್ಥಗಳು ಮತ್ತು ಮಸಾಲೆಗಳ ಬಗ್ಗೆ ಅರ್ಥ ಮಾಡಿಕೊಂಡು ಅದನ್ನು ಮೆನುವಿನಲ್ಲಿ ಸೇರಿಸಿ ಸಾಂಪ್ರದಾಯಿಕ ರುಚಿ ಇರುವಂತೆ‌ ನೋಡಿಕೊಳ್ಳಲಾಗಿದೆ ಎಂದು ರೆಸಪಿ ಕುರಿತು ಪ್ರಭಾಕರನ್‌ ಮಾಹಿತಿ ನೀಡಿದರು.

***

* ಸ್ಥಳ: ಅರಮನೆ ರಸ್ತೆ, ಶಾಂ‌ಗ್ರಿ – ಲಾ ಹೋಟೆಲ್ 

* ಸಮಯ: ಮಧ್ಯಾಹ್ನ 12ರಿಂದ 3:30, ರಾತ್ರಿ 7ರಿಂದ 11ಗಂಟೆ

* ಆಹಾರ ಉತ್ಸವ ಕೊನೆ: ಆಗಸ್ಟ್ 15

* ಟೇಬಲ್ ಕಾಯ್ದಿರಿಸಲು: +91 80 4512 6420 , ಅಥವಾ b-cafe.slbl@shangri-la.com

* ಮಧ್ಯಾಹ್ನದ ಊಟ ₹1250+ತೆರಿಗೆ, ರಾತ್ರಿ ಊಟ ₹ 1600 + ತೆರಿಗೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !