ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಲಡ್ಡು, ಅವಲಕ್ಕಿ ಡ್ರೈ ಫ್ರೂಟ್ಸ್ ಮಿಕ್ಸ್

Last Updated 11 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮಿಶ್ರ ಲಡ್ಡು

ಬೇಕಾಗುವ ಸಾಮಗ್ರಿಗಳು: ಹುರಿದ ಎಳ್ಳು – ಅರ್ಧ ಕಪ್, ಹುರಿದು,ಸಿಪ್ಪೆ ತೆಗೆದ ಕಡಲೆಕಾಯಿ ಬೀಜ – 1 ಕಪ್, ಹುರಿಗಡಲೆ – 1 ಕಪ್, ಒಣಕೊಬ್ಬರಿತುರಿ – ಅರ್ಧ ಕಪ್, ಬೆಲ್ಲದಪುಡಿ – 3 ಕಪ್, ಏಲಕ್ಕಿ ಪುಡಿ – 1 ಚಮಚ, ತುಪ್ಪ.

ತಯಾರಿಸುವವಿಧಾನ: ಕಡಲೆಕಾಯಿ ಬೀಜ, ಹುರಿಗಡಲೆ, ಒಣಕೊಬ್ಬರಿತುರಿ ಎಲ್ಲವನ್ನೂ ಮಿಕ್ಸಿಯಲ್ಲಿ ತಿರುಗಿಸಿ ಪುಡಿ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿಬಾಣಲೆಯಲ್ಲಿತುಪ್ಪ ಕರಗಿಸಿ ಮೊದಲಿಗೆ ಬೆಲ್ಲದ ಪುಡಿ ಹಾಕಿ. ಬೆಲ್ಲ ಕರಗುತ್ತಲೇ ಪುಡಿ ಮಾಡಿದ ಮಿಶ್ರಣ, ಏಲಕ್ಕಿ ಪುಡಿ ಹಾಕಿ ಒಂದೆರಡು ನಿಮಿಷ ಗೊಟಾಯಿಸಿ. ಅಗತ್ಯವಿದ್ದರೆ ತುಪ್ಪ ಸೇರಿಸಿ. ನಂತರ ಉರಿ ಆರಿಸಿ ಬಿಸಿ ಇರುವಾಗಲೇ ಸಣ್ಣ ಸಣ್ಣ ಉಂಡೆ ಕಟ್ಟಿ.

ಡ್ರೈ ಫ್ರೂಟ್ಸ್ ಹುರಿಹಿಟ್ಟು ಉಂಡೆ

ಬೇಕಾಗುವಸಾಮಗ್ರಿಗಳು: ರಾಗಿ ಹುರಿಹಿಟ್ಟು - 1 ಕಪ್, ಪುಡಿ ಮಾಡಿದ ಬೆಲ್ಲ – ಮುಕ್ಕಾಲು ಕಪ್, ಹಾಲಿನಪುಡಿ – 2 ಚಮಚ, ಒಣದ್ರಾಕ್ಷಿ – 10 ರಿಂದ 15, ಗೋಡಂಬಿ, ಬಾದಾಮಿ ತುಂಡುಗಳ ಮಿಶ್ರಣ, ತುಪ್ಪ

ತಯಾರಿಸುವ ವಿಧಾನ: ಒಂದು ಅಗಲದ ಪಾತ್ರೆಯಲ್ಲಿ ಹುರಿಹಿಟ್ಟು, ಹಾಲಿನ ಪುಡಿ, ಬೆಲ್ಲ, ಒಣಹಣ್ಣುಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ತುಪ್ಪ ಬೆಚ್ಚಗೆ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ಹನಿಸಿಕೊಂಡು ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿ.

ಅವಲಕ್ಕಿ ಡ್ರೈಫ್ರೂಟ್ಸ್‌ ಮಿಕ್ಸ್‌

ಬೇಕಾಗುವಸಾಮಗ್ರಿಗಳು: ಮೀಡಿಯಂ ಅವಲಕ್ಕಿ – 1 ಕಪ್, ಪುಡಿ ಮಾಡಿದ ಬೆಲ್ಲ – ಅರ್ಧ ಕಪ್, ಕತ್ತರಿಸಿದಉತ್ತತ್ತಿ, ಬಾದಾಮಿ, ಗೋಡಂಬಿ, ಅಂಜೂರ, ಒಣಕೊಬ್ಬರಿ ತುರಿ, ಒಣದ್ರಾಕ್ಷಿ ಮಿಶ್ರಣ ಅರ್ಧ ಕಪ್, ಏಲಕ್ಕಿಪುಡಿ ಕಾಲು ಚಮಚ.

ತಯಾರಿಸುವವಿಧಾನ: ಅವಲಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ. ನಂತರ ಬೆಲ್ಲ ಮತ್ತು ಒಣಹಣ್ಣುಗಳನ್ನು ನೆನೆದ ಅವಲಕ್ಕಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಒಂದು ಸುತ್ತು ಕಲೆಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT