ಬಹುತೇಕ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಟೊಮೆಟೊ ಬಳಕೆ ಸಾಮಾನ್ಯ. ಬೆಳಿಗ್ಗೆ ತಿಂಡಿಗೆ ಅನೇಕರು ಸುಲಭವಾಗಿ ತಯಾರಾಗುವ ಟೊಮೆಟೊ ಬಾತ್ ಅನ್ನು ಮಾಡುತ್ತಾರೆ. ಇನ್ನೂ ಕೆಲವರು ತಿಂಡಿಗೆ ಏನು ಮಾಡಬೇಕು. ಮಕ್ಕಳ ಬುತ್ತಿಯ ಊಟಕ್ಕೆ ಏನು ಕೊಡಬೇಕು ಎಂಬ ಗೊಂದಲದಲ್ಲಿರುತ್ತಾರೆ.

ಟೊಮೆಟೊ ಬಳಸಿ ಸುಲಭವಾಗಿ ಟೊಮೆಟೊ ಬಾತ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಟೊಮೆಟೊಬಾತ್ ಮಾಡಲು ಬೇಕಾಗುವ ಸಮಾಗ್ರಿಗಳು
ಕತ್ತರಿಸಿಕೊಂಡ ಟೊಮೆಟೊ–2 ರಿಂದ 3
ಅಕ್ಕಿ – 1 ಲೋಟ
ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಕತ್ತರಿಸಿಕೊಂಡ ಈರುಳ್ಳಿ– 1 ರಿಂದ 2
ಪುದೀನಾ ಸೊಪ್ಪು– ಅರ್ಧ ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ರಿಂದ 2 ಚಮಚ
ಖಾರದ ಪುಡಿ– 1ರಿಂದ 2 ಚಮಚ
ಅರಿಶಿನ ಪುಡಿ– ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಚಕ್ಕೆ, ಲವಂಗ– ಅಗತ್ಯಕ್ಕೆ ತಕ್ಕಷ್ಟು
ಧನಿಯಾ ಪುಡಿ – ಅರ್ಧ ಚಮಚ

ಅಡುಗೆ ಎಣ್ಣೆ– 4ರಿಂದ5 ಚಮಚ

ಸಾಸಿವೆ– ಕಾಲು ಚಮಚ

ಕತ್ತರಿಸಿಕೊಂಡ ಆಲೂಗಡ್ಡೆ– 1 ಕಪ್

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿಕೊಳ್ಳಿ. ಅದು ಬಿಸಿಯಾದ ಬಳಿಕ ಸಾಸಿವೆ, ಈರುಳ್ಳಿ ಚಕ್ಕೆ , ಲವಂಗ ಟೊಮೆಟೊ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಆಲೂಗಡ್ಡೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೊಪ್ಪು, ಧನಿಯಾ ಪುಡಿ, ಅರಿಶಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ 3 ಲೋಟ ನೀರು ಸೇರಿಸಿ ಮಿಶ್ರಣ ಮಾಡಿ. ನಂತರ ತೊಳೆದುಕೊಂಡ ಅಕ್ಕಿ, ಹಾಗೂ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ, ಕುದಿಯಲು ಬಿಡಿ..

ಮಸಾಲೆ ಜೊತೆ ಅಕ್ಕಿಯು ಸರಿಯಾಗಿ ಬೆಂದು ನೀರು ಇಂಗಿದ ಬಳಿಕ ಟೊಮೆಟೊ ಬಾತ್ ಸವಿಯಲು ಸಿದ್ದವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.