ದಸರಾಕ್ಕೆ ಬಂಗಾಳಿ ಸಿಹಿವಿಶೇಷ

7

ದಸರಾಕ್ಕೆ ಬಂಗಾಳಿ ಸಿಹಿವಿಶೇಷ

Published:
Updated:

ಬಂಗಾಳಿ ರಸಗುಲ್ಲಾ ಚೀಸ್ ಕೇಕ್

ಬೇಕಾಗುವ ಸಾಮಗ್ರಿಗಳು: ಮಸ್ಕಾಪೆರ್ ಚೀಸ್ 100 ಗ್ರಾಂ, ಫಿಲಡೆಲ್ಫಿಯಾ ಕ್ರೀಮ್ ಚೀಸ್ 100 ಗ್ರಾಂ, ಅಗಾರ್ ಅಗರ್ 30 ಗ್ರಾಂ, ವಿಪ್ ಕ್ರೀಮ್ 100 ಗ್ರಾಂ, ಮೊಸರು 300 ಗ್ರಾಂ, ರಸಗುಲ್ಲಾ 6. ಚೀಸ್ ಬೇಸ್‌ಗೆ – ಬೆಣ್ಣೆ 50 ಗ್ರಾಂ, ಮಾರಿ ಬಿಸ್ಕೆಟ್ 200 ಗ್ರಾಂ

ಮಾಡುವ ವಿಧಾನ: ಚೀಸ್ ಕೇಕ್ ಕ್ರಸ್ಟ್ ಬೇಸ್ ಮಾಡಲು ಬಿಸ್ಕೆಟ್ ತುಣುಕುಗಳನ್ನು ಬೆಣ್ಣೆಯೊಂದಿಗೆ ಸೇರಿಸಿ ಕರಗಿಸಿ. ನಂತರ ಆಯತಾಕಾರದ ಅಚ್ಚು ತೆಗೆದುಕೊಂಡು ಬಿಸ್ಕೆಟ್ ಕ್ರಸ್ಟ್ ಅನ್ನು ಕೆಳಭಾಗದಲ್ಲಿ ಹೊಂದಿಸಿ ಅದನ್ನು ಕನಿಷ್ಠ 30 ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ. ಒಂದು ಪಾನ್ ನಲ್ಲಿ 30 ಮಿ.ಲೀ ನೀರನ್ನು ಹಾಕಿ, ಅದನ್ನು ಕುದಿಸಿ ಮತ್ತು ಅಗಾರ್-ಅಗರ್ ಅನ್ನು ಸೇರಿಸಿ ಜೆಲ್ಲಿ ತಯಾರಿಸಿಕೊಳ್ಳಿ ಹಾಗೂ ಪ್ರತ್ಯೇಕವಾಗಿ ರಸಗುಲ್ಲಾ ಸಿರಪ್ ಅನ್ನು ಇಟ್ಟುಕೊಳ್ಳಿ.

ಚೀಸ್ ಮತ್ತು ಕೆನೆಗಳನ್ನು ಒಟ್ಟಿಗೆ ಜಾರ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ ಜೆಲ್ಲಿಯನ್ನು ಸೇರಿಸಿ, ಆಮೇಲೆ ಬಿಸ್ಕೆಟ್ ಕ್ರಸ್ಟ್ ಚೆನ್ನಾಗಿ ಬೆರೆಸಿ ಅಚ್ಚಿನ ಮೇಲೆ ಕೆನೆ ಮಿಶ್ರಣವನ್ನು ಸುರಿಯಿರಿ. ನಂತರ ರಸಗುಲ್ಲಾವನ್ನು ಮಿಶ್ರಣಗಳ ಮಧ್ಯದಲ್ಲಿ ಸಾಲಾಗಿ ಅಚ್ಚುಕಟ್ಟಾಗಿ ಜೋಡಿಸಿ ಮತ್ತು ಅದನ್ನು ಸುಮಾರು ಮೂರು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ. ನಂತರ ಹೊರ ತೆಗೆದು ಅದನ್ನು ಅಂದವಾಗಿ ಕತ್ತರಿಸಿ ಬೆಂಗಾಳಿ ರಸಗುಲ್ಲಾ ಚೀಸ್ ಕೇಕ್ ಸವಿಯಿರಿ!


ಮಣಿ ಮೋಹನ್‌ ಪಾಠಕ್‌

ಚಾಕೊ ಗುಲಾಬ್ ಜಾಮುನು ಬ್ರೂಲೆ

ಬೇಕಾಗುವ ಸಾಮಗ್ರಿಗಳು: ಗುಲಾಬ್ ಜಾಮುನು 5, ಹೆವಿ ಕ್ರೀಮ್ 500 ಗ್ರಾಂ, ಮೊಟ್ಟೆ 3, ಡಾರ್ಕ್ ಚಾಕೊಲೇಟ್ 100 ಗ್ರಾಂ, ಸಕ್ಕರೆ 70 ಗ್ರಾಂ

ಮಾಡುವ ವಿಧಾನ: 200 ಮಿಲೀ ಕ್ರೀಮ್ ಕುದಿಯುವ ತನಕ ಬಿಸಿಮಾಡಿ. ಅದಕ್ಕೆ ಚಾಕೊಲೇಟ್ ಸೇರಿಸಿ.ಉಳಿದ ಕೆನೆ ತೆಗೆದುಕೊಂಡು, ಸಕ್ಕರೆ ಸೇರಿಸಿ, ಅದು ಕರಗುವವರೆಗೆ ಮಿಶ್ರಣ ಮಾಡಿ. ಮೊಟ್ಟೆಗಳನ್ನು ಸೇರಿಸಿ ಮತ್ತು ಅದನ್ನು ಮಿಶ್ರಣ ಮಾಡಿ. ಸಿರಾಮಿಕ್ ಬೌಲ್ / ಕಪ್‍ಗಳನ್ನು ತೆಗೆದುಕೊಂಡು ಒಂದು ಗುಲಾಬ್ ಜಾಮುನು ಅನ್ನು ಇರಿಸಿ ಅದರ ಮೇಲೆ ಕ್ರೀಮ್ ಮಿಶ್ರಣವನ್ನು ಸುರಿಯಿರಿ. 25 ನಿಮಿಷಗಳ ಕುದಿಸಿ. ಈಗ ಬ್ರೂಲೆ ರೆಡಿ. ಬ್ರೂಲೆ ಸವಿಯಲು ನೀಡುವ ಮೊದಲು ಅದರ ಮೇಲೆ ಐಸಿಂಗ್ ಶುಗರ್ ಹಾಕಿ ಸವಿಯಲು ನೀಡಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !