ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣು– ತರಕಾರಿ ಸ್ಮೂದಿ

Last Updated 11 ಡಿಸೆಂಬರ್ 2020, 19:45 IST
ಅಕ್ಷರ ಗಾತ್ರ

ಅನಾನಸ್‌ ಸ್ಮೂದಿ

ಬೇಕಾಗುವ ಸಾಮಗ್ರಿಗಳು: ಕಿತ್ತಳೆ ರಸ – 3 ಕಪ್‌, ಕ್ಯಾರೆಟ್ ರಸ – 1/4 ಕಪ್‌, ಅನಾನಸ್ ಹಣ್ಣಿನ ಹೋಳು – 1 ಕಪ್‌, ಬಾಳೆಹಣ್ಣು – 1

ತಯಾರಿಸುವ ವಿಧಾನ: ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸಿಹಿ ಬೇಕು ಎನ್ನುವವರು ಜೇನು ತುಪ್ಪ ಸೇರಿಸಿಕೊಳ್ಳಬಹುದು.

ಚಳಿಗಾಲದಲ್ಲಿ ಹಣ್ಣಿನ ಸ್ಮೂದಿಗೆ ಐಸ್ ಸೇರಿಸದೆ ಸೇವಿಸುವುದು ಉತ್ತಮ.

ಕ್ಯಾರೆಟ್ ಹಾಗೂ ಕಿತ್ತಳೆ ಸ್ಮೂದಿ

ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ – 2 (ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ), ಕಿತ್ತಳೆ – 2, ಶುಂಠಿ – ಸಣ್ಣ ತುಂಡು, ಓಟ್ಸ್ – 2 ಚಮಚ, ಐಸ್‌ – 2 ತುಂಡು, ಬೆಲ್ಲ ಅಥವಾ ಜೇನುತುಪ್ಪ – ಅವಶ್ಯವಿದ್ದರೆ.

ತಯಾರಿಸುವ ವಿಧಾನ: ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ಸ್ಮೂದಿಗೆ ನೀರು ಹೆಚ್ಚು ಹಾಕಬಾರದು. ನಿಮಗೆ ಬೇಕಾದ ಹದಕ್ಕೆ ತಕ್ಕಂತೆ ನೀರು ಸೇರಿಸಿ.

ಬಾಳೆಹಣ್ಣಿನ ಸ್ಮೂದಿ

ಬೇಕಾಗುವ ಸಾಮಗ್ರಿಗಳು: ಬಾಳೆಹಣ್ಣು – 2, ಐಸ್‌ ತುಂಡು – 1, ಸಕ್ಕರೆ ರಹಿತ ಬಾದಾಮಿ ಹಾಲು – 3/4 ಕಪ್‌, ಯೋಗ್ಹರ್ಟ್‌ – 1/4 ಕಪ್‌, ಅಗಸೆ ಬೀಜ – 1 ಟೇಬಲ್ ಚಮಚ, ಜೇನು ತುಪ್ಪ – 2 ಚಮಚ.

ತಯಾರಿಸುವ ವಿಧಾನ: ಬಾಳೆಹಣ್ಣನ್ನು ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಅದಕ್ಕೆ ಉಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ರುಚಿಕರ ಬಾಳೆಹಣ್ಣಿನ ಸ್ಮೂದಿ ನಿಮ್ಮ ಮುಂದೆ ಸವಿಯಲು ಸಿದ್ಧವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT