ಮಂಗಳೂರು: ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ 45 ಸಂಚಿಕೆಗಳ ‘ಇಂಡಿಯಾ ಮಾಸ್ಟರ್ ಶೆಫ್ ಜೋಡಿ ಕಾರ್ಯಕ್ರಮ’ದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯವನ್ನು ಪ್ರತಿನಿಧಿಸಿರುವ ಉಪ್ಪಂಗಳ ವೇಣು ಶರ್ಮಾ ಹಾಗೂ ಅವರ ಪುತ್ರಿ ಅವನಿ ಶರ್ಮಾ, ಕರಾಡ ಬ್ರಾಹ್ಮಣ ಅಡುಗೆ ಖಾದ್ಯಗಳಿಂದ ಸುದ್ದಿಯಾಗಿದ್ದಾರೆ..
.ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಮನೆಯಲ್ಲಿ ತಯಾರಿಸಿ ಗರಿಗರಿ ಸಬ್ಬಕ್ಕಿ ಹಪ್ಪಳ.ಟೊಮೆಟೊ ಬಾತ್; ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ.
ಕೇರಳದ ಕಾಸರಗೋಡಿನ ಉಪ್ಪಂಗಳದಿಂದ ಬಂದ 26ರ ಹರೆಯದ ಯುವತಿ ಅವನಿ ಶರ್ಮಾಗೆ ಈ ಶೋನಲ್ಲಿ ಜೊತೆಯಾದವರು ಅವರ ತಂದೆ ವೇಣು ಶರ್ಮಾ. ನಿರ್ವಹಣಾ ಸಲಹೆಗಾರಾಗಿ ಯಶಸ್ವಿಯಾಗಿದ್ದ ತಂದೆ, ಮಗಳ ಅಡುಗೆಯ ಆಸಕ್ತಿಗೆ ಕೈಜೋಡಿಸಿ ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿ 40 ಸಂಚಿಕೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಶೋನ ಅಂತಿಮ ಸಂಚಿಕೆ ಮಾ.6 ಶುಕ್ರವಾರ ಪ್ರಸಾರವಾಗಲಿದೆ.

ಸೀಸನ್ನ ಮೊದಲ ‘ಇಮ್ಯುನಿಟಿ ಪಿನ್’ ಗೆದ್ದ ಬಳಿಕ, ಪ್ರಬಲ ಸ್ಪರ್ಧಿಗಳ ನಡುವೆ, ಅಪ್ಪ-ಮಗಳು ತಯಾರಿಸಿದ ‘ದೀಪ ಆರಾಧನೆ’ ಎಂಬ ಸಿಹಿ ತಿಂಡಿ ತೀರ್ಪುಗಾರರಾದ ರಣವೀರ್ ಬ್ರಾರ್ ಮತ್ತು ವಿಕಾಸ್ ಖನ್ನಾ ಅವರ ಮನ ಗೆದ್ದಿತು. ಬಳಿಕ ವಿವಿಧ ಖಾದ್ಯಗಳ ಮೂಲಕ ಟಿ.ವಿ. ಹಾಗೂ ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಸುದ್ದಿ ಮಾಡಿತು.

ಫೆ.27ರ ಸೆಮಿ-ಫೈನಲ್ ಸುತ್ತಿನಲ್ಲಿ 40ನೇ ಕಂತಿನಲ್ಲಿ, ಪ್ಲೇಟಿಂಗ್ ಮುಗಿಸಲು ಕೇವಲ ಎರಡು ನಿಮಿಷಗಳ ಕಾಲಾವಕಾಶ ಕಡಿಮೆಯಾಗಿ ಇವರು ಶೋದಿಂದ ಹೊರ ಬೀಳಬೇಕಾಯಿತು. ಈ ಹೊತ್ತಿಗೆ ಈ ಸ್ಪರ್ಧಿಗಳು ಏಪ್ರನ್ ಕಳಚಿ ಹೊರಬರುವಾಗ ತೀರ್ಪುಗಾರರು ಕೂಡ ಕಣ್ಣೀರಿಟ್ಟಿದ್ದಾರೆ. ಗ್ರಾಮೀಣ ಸೊಗಡಿನ ಅಡುಗೆಗೆ ಒತ್ತು ನೀಡಿದ ಈ ಅಪ್ಪ ಮಗಳು, ಶಾಖಾಹಾರಿ ಆಡುಗೆ ಮಾಡಿದ ಹಾಗೂ ಕರ್ನಾಟಕ ಮತ್ತು ಕೇರಳವನ್ನು ಪ್ರತಿನಿಧಿಸಿದ ಏಕೈಕ ಜೋಡಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.