ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಎನ್ನುವ ಮಾತಿದೆ. ಮಾವನ್ನು ಹಣ್ಣುಗಳ ರಾಜ ಎಂತಲೂ ಕರೆಯುತ್ತಾರೆ. ಆಹಾರ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಾವಿನ ಸರಳ ರೆಸಿಪಿಗಳನ್ನು ನೀಡಿದ್ದಾರೆ ಹರಿ ಸುಂದರ್ ಕೌಶಿಕ್.

ಆಮ್ರಸ್

ಬೇಕಾಗುವ ಸಾಮಗ್ರಿ: ಮಾವಿನಹಣ್ಣು 1, ಸಕ್ಕರೆ 4 ಚಮಚ.

ಮಾಡುವ ವಿಧಾನ: ಮಾವಿನ ಹಣ್ಣಿನ ತಿರುಳನ್ನು ತೆಗೆದು, ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ಪಲ್ಸ್ ಮೋಡ್ನಲ್ಲಿ ಎರಡು ಬಾರಿ ಅರೆದರೆ ಬೆಣ್ಣೆಯಂಥ ಆಮ್ರಸ್ ಸಿದ್ಧ.

ಸಲಾಡ್

ಬೇಕಾಗುವ ಸಾಮಗ್ರಿ: ಮಾವಿನಹಣ್ಣು 1, ಬಾಳೆಹಣ್ಣು 1 ಚಮಚ, ಗೋಡಂಬಿ ದ್ರಾಕ್ಷಿ 10-12, ಜೇನುತುಪ್ಪ 1 ಚಮಚ

ಮಾಡುವ ವಿಧಾನ: ಮಾವಿನಹಣ್ಣನ್ನು ಮತ್ತು ಬಾಳೆಹಣ್ಣನ್ನು ಚಿಕ್ಕ ತುಂಡುಗಳಾಗಿ ಹೆಚ್ಚಿರಿ. ದ್ರಾಕ್ಷಿ,ಗೋಡಂಬಿ ತುಂಡುಗಳು, ಜೇನು ತುಪ್ಪ ಸೇರಿಸಿ ಮಿಶ್ರ ಮಾಡಿರಿ

ಐಸ್ ಕ್ರೀಮ್

ಬೇಕಾಗಿರುವ ಸಾಮಗ್ರಿ: ಮಾವಿನಹಣ್ಣು, ತಾಜಾ ಹಾಲಿನ ಕೆನೆ ಕ್ರೀಮ್ 3 ಚಮಚ , ಕಂಡೆನ್ಸ್ಡ್ ಮಿಲ್ಕ್ 1/2 ಕಪ್.

ಮಾಡುವ ವಿಧಾನ: ಮಾವಿನಹಣ್ಣಿನ ತಿರುಳು, ಕಂಡೆನ್ಸ್ಡ್ , ಹಾಲಿನ ಕೆನೆಯನ್ನು ಚೆನ್ನಾಗಿ ಬೀಟ್ ಮಾಡಿ, ಫ್ರೀಜರ್ ನಲ್ಲಿ 2-3 ಗಂಟೆಯವರೆಗೆ ಇಡಿ. ನಂತರ ಹೊರಗೆ ತೆಗೆದರೆ ಬಾಯಲ್ಲಿ ನೀರೂರಿಸುವ ಐಸ್ ಕ್ರೀಮ್ ಸಿದ್ಧ.

ಮಿಲ್ಕ್ ಶೇಕ್

ಬೇಕಾಗಿರುವ ಸಾಮಗ್ರಿ: ಮಾವಿನಹಣ್ಣು 1, ಸಕ್ಕರೆ 1 ಚಮಚ, ಕಂಡೆನ್ಸ್ಡ್ ಮಿಲ್ಕ್ 1 ಚಮಚ,ಹಾಲು 1/2 ಕಪ್, 2 ಗೋಡಂಬಿ

ಮಾಡುವ ವಿಧಾನ: ಮಾವಿನ ಹಣ್ಣನ ತಿರುಳನ್ನು ಸಣ್ಣದಾಗಿ ಹೆಚ್ಚಿ, ಉಳಿದ ಪದಾರ್ಥಗಳನ್ನು ಸೇರಿಸಿ ಮಿಕ್ಸಿಯಲ್ಲಿ ಅರೆಯಿರಿ. ಕೆನೆಭರಿತ ಮಾವಿನ ಮಿಲ್ಕ್ ಶೇಕ್ ಸಿದ್ಧ.

ಲಸ್ಸಿ

ಬೇಕಾಗಿರುವ ಸಾಮಗ್ರಿ: ಮಾವಿನಹಣ್ಣು 1. ಗಟ್ಟಿ ಮೊಸರು 1 ಕಪ್, ಸಕ್ಕರೆ 4 ಚಮಚ, ಏಲಕ್ಕಿ ಪುಡಿ 1/2 ಚಮಚ.

ಮಾಡುವ ವಿಧಾನ: ಮಾವಿನ ಹಣ್ಣಿನ ಪಲ್ಪ್ ಅನ್ನು ಗಟ್ಟಿ ಮೊಸರು, ಸಕ್ಕರೆ, ಏಲಕ್ಕಿ ಪುಡಿ ಹಾಕಿ ಮಿಕ್ಸಿಯಲ್ಲಿ ಎರಡು ಸುತ್ತು ಅರೆದುಕೊಳ್ಳಿ. ರುಚಿಯಾದ ಮಾವಿನ ಲಸ್ಸಿ ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.