ಮಾವು... ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದೊಡ್ಡ ವರಿರಲಿ, ಚಿಕ್ಕವರಿರಲಿ ಹಣ್ಣಿನ ಹೋಳು ಬಾಯಿಗಿಡುತ್ತಿದ್ದಂತೆ ಲಾಲಾರಸ ಗ್ರಂಥಿಗಳು ಅರಳುತ್ತವೆ. ಈಚು ಕಾಯಿಯಿಂದ ಹಿಡಿದು ಕಳಿತ ಹಣ್ಣಿನವರೆಗೂ ಭಿನ್ನ ರುಚಿಯನ್ನು ಆವಾಹಿಸಿಕೊಂಡು ತನ್ನ ಘಮಲು ಹೆಚ್ಚಿಸಿಕೊಳ್ಳುವ ಮಾವು ‘ಹಣ್ಣುಗಳ ರಾಜ’ನೇ ಸರಿ.

ಬೇಸಿಗೆಯ ಸುಡು ಬಿಸಿಲು ಅಡಿ ಇಡುತ್ತಿದ್ದಂತೆಯೇ ದೇಹದ ದಾಹ ತಣಿಸಲು ಹಣ್ಣುಗಳ ಭರಾಟೆಯೂ ಶುರುವಾಗುತ್ತದೆ. ಕಲ್ಲಂಗಡಿ, ಕರಬೂಜ, ಅನಾನಸ್, ಕಿತ್ತಳೆ, ದ್ರಾಕ್ಷಿ ಇವೆಲ್ಲವೂ ನೀರಿನಂಶವನ್ನೇ ಮೈದುಂಬಿಕೊಂಡು ದೇಹವನ್ನೂ ತಂಪಾಗಿಸುತ್ತವೆ. ಇವುಗಳ ಹವಾ ಕಡಿಮೆಯಾಗುತ್ತಿದ್ದಂತೆಯೇ ಮಾವಿನ ಆಧಿಪತ್ಯ ಶುರು.

ಮಾವಿನಲ್ಲಿ ಖಾದ್ಯಗಳ ವೈವಿಧ್ಯವೂ ಮೇಲ್ಮುಖವೇ. ಯುಗಾದಿ ಹಬ್ಬದ ಸಮಯದಲ್ಲಿ ಈಚು ಕಾಯಿಯೊಂದಿಗೆ ಖಾದ್ಯಗಳಿಗೆ ಮುನ್ನುಡಿ ಬರೆಯುವ ಮಾವು, ತರಹೇವಾರಿ ಖಾದ್ಯಗಳಲ್ಲಿ ತನ್ನ ಪಾರಮ್ಯ ಮೆರೆಯುತ್ತದೆ. ಮಾವು ವರ್ಷವಿಡೀ ಅಧಿಪತಿಯೇ ಎನ್ನುವುದಕ್ಕೆ ಉಪ್ಪಿನಕಾಯಿ ನಿದರ್ಶನವಾಗಿ ನಿಲ್ಲುತ್ತದೆ. ಬಹುತೇಕರ ಮನೆಗಳಲ್ಲಿ ಈಗಲೂ ವರ್ಷಕ್ಕಾಗುವಷ್ಟು ಮಾವಿನಕಾಯಿ ಉಪ್ಪಿನಕಾಯಿ ಜಾಡಿಯಲ್ಲಿ ಭದ್ರವಾಗಿ ಕುಳಿತಿರುತ್ತದೆ. ಮಲೆನಾಡಿನ ಮನೆಗಳಲ್ಲಿ ಈ ಸಮಯದಲ್ಲಿ ಮಾವಿನಮಿಡಿ ಉಪ್ಪಿನಕಾಯಿಯದ್ದೇ ಸದ್ದು. ಉಪ್ಪಿನ ನೀರು ಖಾರದಲ್ಲಿ ಕಳಿತಷ್ಟೂ ರುಚಿ ಹೆಚ್ಚು.

ವರ್ಷದ ಮಾವಿನಕಾಯಿ ಉಪ್ಪಿನಕಾಯಿ ಕೆಡದಂತೆ ಮಾಡುವುದಕ್ಕೂ ಶ್ರದ್ಧೆ ಬೇಕು. ಪದಾರ್ಥಗಳ ಪ್ರಮಾಣದಲ್ಲಿ, ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಹೋಳು ಮೆತ್ತಗಾಗುತ್ತದೆ. ಹಿಂದೆಲ್ಲ ‘ತಂಗಳುಪೆಟ್ಟಿಗೆ’ ಇಲ್ಲದಿದ್ದರೂ ವರ್ಷದ ಕೊನೆಯಲ್ಲಿ ಸಹ ಉಪ್ಪಿನಕಾಯಿ ತಾಜಾ ಆಗಿಯೇ ಇರುತ್ತಿತ್ತು. ಈಗೆಲ್ಲ ಉಪ್ಪಿನಕಾಯಿ ಫ್ರಿಜ್ನ ಸಾಂಗತ್ಯ ಬಯಸುತ್ತದೆ.ಮಾವಿನಕಾಯಿ ಚಿತ್ರಾನ್ನ, ಗೊಜ್ಜು, ತೊಕ್ಕು, ಸಾಸಿವೆ, ತಂಬುಳಿ, ರಸಂ, ಪಾನಕ, ಸಾಲಡ್, ರಸಾಯನ, ಸೀಕರಣೆ, ಚಟ್ನಿ, ಹಲ್ವಾ, ದೋಸೆ, ಮಾವಿನ ಗುಳಂಬಾ ಇವೆಲ್ಲವೂ ಬಹು ಹಿಂದಿನಿಂದ ಅಡುಗೆ ಮನೆಯ ಖಾಯಂ ಖಾದ್ಯಗಳು. ಇವುಗಳ ಜೊತೆಗೆ ಈಗ ಡಿಸರ್ಟ್, ಪುಡ್ಡಿಂಗ್ ಯುಗ. ಮಕ್ಕಳನ್ನು ಸೆಳೆಯಲು ಆಧುನಿಕ ಅಮ್ಮಂದಿರ ಪ್ರಯೋಗಶೀಲತೆ ಮಾವಿನ ಮೇಲೆ ಢಾಳಾಗೇ ಬಿದ್ದಿದೆ. ಮಾವಿನಿಂದ ಕೇಕ್, ಐಸ್ಕ್ರೀಮ್, ಡಿಸರ್ಟ್ಗಳೂ ಜನನ ಪಡೆದಿವೆ. ಅಂತಹ ಕೆಲವು ಹೊಸ ಖಾದ್ಯಗಳ ರೆಸಿಪಿಗಳು ಇಲ್ಲಿವೆ...

ಮ್ಯಾಂಗೊ ಮಫಿನ್ಸ್

ಕೇಕ್ ಎಂದರೆ ಸಾಕು ಮಕ್ಕಳ ಬಾಯಲ್ಲಿ ನೀರೂರುತ್ತದೆ. ಮಾಮೂಲಿ ಕೇಕ್ ತಿಂದು ಬೇಸರವೆನಿಸಿದರೆ, ಮಾವಿನಹಣ್ಣಿನಲ್ಲಿ ಮನೆಯಲ್ಲೇ ಕಪ್ ಕೇಕ್ ಮಾಡಬಹುದು.

ಏನೇನು ಬೇಕು?: ಅರ್ಧ ಕಪ್ ಹಾಲು, ವಿನೆಗರ್ ಅಥವಾ ನಿಂಬೆರಸ 1 ಟೀ ಚಮಚ, ಒಂದು ಬಟ್ಟಲು ಸಿಪ್ಪೆ ತೆಗೆದ ಮಾವಿನಹಣ್ಣು, 1/2 ಕಪ್ ಸಕ್ಕರೆ, ಕಾಲು ಕಪ್ ಬೆಣ್ಣೆ (ಕರಗಿಸಿದ್ದು), ಕಾಲು ಕಪ್ ಮೈದಾಹಿಟ್ಟು, 1/2 ಟೀ ಚಮಚ ಬೇಕಿಂಗ್ ಸೋಡಾ, ಕಾಲು ಕಪ್ ಹಾಲು, ಪೇಪರ್ ಕಪ್ಗಳು.

ಹೀಗೆ ಮಾಡಿ: ಅರ್ಧ ಕಪ್ ಹಾಲಿಗೆ ಒಂದು ಟೀ ಚಮಚ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಐದು ನಿಮಿಷ ಬಿಡಬೇಕು. ಒಂದು ಮಿಕ್ಸಿಯಲ್ಲಿ ಮಾವಿನಹಣ್ಣು ಹಾಗೂ ಸಕ್ಕರೆಯನ್ನು ಹಾಕಿ ರುಬ್ಬಿಕೊಳ್ಳಬೇಕು. ಬಳಿಕ ಹಾಲಿನ ಮಿಶ್ರಣಕ್ಕೆ ಕರಗಿದ ಬೆಣ್ಣೆ ಹಾಗೂ ಮಾವಿನ ಪೇಸ್ಟ್ ಹಾಕಿ 8– 10 ನಿಮಿಷ ಬಿಡದಂತೆ ಮಿಕ್ಸ್ ಮಾಡಬೇಕು. ಬಳಿಕ ಮೈದಾಹಿಟ್ಟು, ಬೇಕಿಂಗ್ ಸೋಡಾ ಸೇರಿಸಿ ಮಿಕ್ಸ್ ಮಾಡಬೇಕು. ನಂತರ ಹಾಲನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಳ್ಳುತ್ತ ಮಿಶ್ರ ಮಾಡುತ್ತಿದ್ದರೆ ಕೇಕ್ ಬ್ಯಾಟರ್ ಸಿದ್ಧಗೊಳ್ಳುತ್ತದೆ. ಚೆನ್ನಾಗಿ ಮಿಶ್ರ ಮಾಡಿಕೊಂಡಷ್ಟೂ ಕೇಕ್ ಪದರ ಪದರವಾಗಿ ಬರುತ್ತದೆ. ಈ ಬ್ಯಾಟರ್ ಅನ್ನು ಎಣ್ಣೆ ಸವರಿದ ಪೇಪರ್ ಕಪ್ಗಳ ಅರ್ಧ ಭಾಗಕ್ಕೆ ಹಾಕಿಕೊಳ್ಳಬೇಕು. ಬಳಿಕ ಒಂದು ಕುಕ್ಕರ್ನ ತಳಭಾಗದಲ್ಲಿ ಸಣ್ಣ ಸ್ಟ್ಯಾಂಡ್ ಇಟ್ಟು, ಮೇಲೆ ಅಗಲವಾದ ತಟ್ಟೆ ಇಡಬೇಕು. ಅದರ ಮೇಲೆ ಕೇಕ್ ಬ್ಯಾಟರ್ ಹಾಕಿದ ಪೇಪರ್ ಕಪ್ಗಳನ್ನು ಇಟ್ಟು 15– 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಬೇಕು. ತಣ್ಣಗಾದ ಬಳಿಕ ಮ್ಯಾಂಗೊ ಮಫಿನ್ಸ್ ಸವಿಯಲು ಸಿದ್ಧ.

ಮ್ಯಾಂಗೊ ಫಿರ್ನಿ

ಡಿಸರ್ಟ್ ಇಷ್ಟಪಡುವವರು ಮಾವಿನಹಣ್ಣಿನ ಫಿರ್ನಿ ಮಾಡಿ ಸವಿಯಬಹುದು. ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಸಲು ಇದು ಉತ್ತಮ ಖಾದ್ಯ.

ಏನೇನು ಬೇಕು? ಒಂದು ಲೀಟರ್ ಹಾಲು, 2ರಿಂದ 3 ಗಂಟೆ ನೆನೆಸಿದ ಅರ್ಧ ಕಪ್ ಅಕ್ಕಿ, ಮುಕ್ಕಾಲು ಕಪ್ ಸಕ್ಕರೆ, ಕೇಸರಿ ದಳ 8– 10, 1/2 ಚಮಚ ಏಲಕ್ಕಿ ಪುಡಿ, ಒಂದು ಬಟ್ಟಲು ಮಾವಿನಹಣ್ಣಿನ ಪೇಸ್ಟ್.

ಹೀಗೆ ಮಾಡಿ: ಒಂದು ಲೀಟರ್ ಗಟ್ಟಿ ಹಾಲನ್ನು ಕುದಿಯಲು ಇಡಬೇಕು. ನೆನೆಸಿದ ಅಕ್ಕಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪವೇ ನೀರು ಹಾಕಿ ರವೆ ಹದಕ್ಕೆ ರುಬ್ಬಿಕೊಳ್ಳಬೇಕು. ಹಾಲು ಕುದಿಯಲು ಶುರುವಾದ ಬಳಿಕ, ರುಬ್ಬಿಕೊಂಡ ಈ ಅಕ್ಕಿತರಿಯನ್ನು ಹಾಲಿನಲ್ಲಿ ಹಾಕಿ, ಬಿಡದಂತೆ ಕೈಯಾಡಿಸಬೇಕು. ಹಾಲು ಹಾಗೂ ಅಕ್ಕಿ ಮಿಶ್ರಣ ಚೆನ್ನಾಗಿ ಬೆರೆತು ಸ್ವಲ್ಪ ಗಟ್ಟಿ ಹದಕ್ಕೆ ಬರುತ್ತದೆ. ಆಗ ಮುಕ್ಕಾಲು ಕಪ್ ಸಕ್ಕರೆ ಹಾಕಿ ಬಿಡದಂತೆ ಕೈಯಾಡಿಸಬೇಕು. ಬಳಿಕ ಕೇಸರಿ ದಳ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದಕ್ಕೆ ಮಾವಿನಹಣ್ಣಿನ ಪೇಸ್ಟ್ ಹಾಕಿ ಮಿಕ್ಸ್ ಮಾಡಬೇಕು. ಬಳಿಕ ಗ್ಯಾಸ್ ಆಫ್ ಮಾಡಿ, ಕತ್ತರಿಸಿದ ಒಣಹಣ್ಣುಗಳನ್ನು ಸೇರಿಸಿದರೆ ಮ್ಯಾಂಗೊ ಫಿರ್ನಿ ಸವಿಯಲು ಸಿದ್ಧ. 2–3 ಗಂಟೆ ಫ್ರಿಜ್ನಲ್ಲಿ ಇಟ್ಟು ಸವಿದರೆ ಫಿರ್ನಿ ಇನ್ನಷ್ಟು ರುಚಿಯಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.