ಮಾರ್ಚ್–ಏಪ್ರಿಲ್ ತಿಂಗಳು ಬಂತೆಂದರೆ ಸಾಕು ಎಲ್ಲರ ಮನೆಗಳ ಅಡುಗೆಮನೆಯಲ್ಲಿ ಮಾವಿನಕಾಯಿ, ಮಾವಿನಹಣ್ಣಿನ ರಾಜ್ಯಭಾರ ಶುರುವಾಗುತ್ತದೆ. ಬಿರು ಬೇಸಿಗೆಯಲ್ಲಿ ಮಾವಿನಕಾಯಿಯಿಂದ ರುಚಿ ರುಚಿಯಾದ ಪದಾರ್ಥಗಳನ್ನು ಮಾಡಿಕೊಂಡು ಸವಿಯುವುದೇ ಒಂದು ಹಬ್ಬ.

ಈ ಬೇಸಿಗೆಯಲ್ಲಿ ಮಾವಿನಕಾಯಿಯನ್ನು ಸವಿಯುವುದರ ಜೊತೆಗೆ ಉಷ್ಣದಿಂದಲೂ ತಪ್ಪಿಸಿಕೊಳ್ಳಲು ಇಲ್ಲಿ ಒಂದು ವಿಭಿನ್ನವಾದ ಹಾಗೂ ರುಚಿಯಾದ ಅಡುಗೆಯ ರೆಸಿಪಿ ನಿಮಗಾಗಿ.

ಬೇಕಾಗುವ ಸಾಮಗ್ರಿ: 1 ತೋತಾಪುರಿ ಮಾವಿನಕಾಯಿ ಹಾಗೂ 1 ಹುಳಿ ಮಾವಿನಕಾಯಿ, 4 ಚಮಚ ಎಣ್ಣೆ, 1 ಚಮಚ ಸಾಸಿವೆ, 2 ಚಮಚ ಮೆಂತ್ಯ, 2 ಚಮಚ ಅಚ್ಚಕಾರದ ಪುಡಿ, 1 ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಬೆಲ್ಲ.

ಮಾಡುವ ವಿಧಾನ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಬೇಕು. ನಂತರ ಸ್ಟವ್ ಹಚ್ಚಿ ಒಂದು ಬಾಣಲೆಗೆ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಮೆಂತ್ಯ ಹಾಕಿ. ಮೆಂತ್ಯ ಹೊಂಬಣ್ಣಕ್ಕೆ ತಿರುಗಿದ ನಂತರ ತುರಿದ ಮಾವಿನಕಾಯಿಯನ್ನು ಹಾಕಿ ಕೈಯಾಡಿಸಿಕೊಳ್ಳಬೇಕು. ಮಾವಿನಕಾಯಿ ಸ್ವಲ್ಪ ಬಾಡಿದ ನಂತರ ಉಪ್ಪು, ಬೆಲ್ಲ, ಅಚ್ಚಕಾರದ ಪುಡಿ, ಇಂಗು ಹಾಕಿ ಸಣ್ಣ ಉರಿಯಲ್ಲಿ ಅದನ್ನು ಚೆನ್ನಾಗಿ ಬೇಯಿಸಬೇಕು. ಬಳಿಕ ಗ್ಯಾಸ್ ಉರಿಯನ್ನು ಆಫ್ ಮಾಡಿ 5ರಿಂದ 10 ನಿಮಿಷ ಅದನ್ನು ಪ್ಲೇಟ್ ಮುಚ್ಚಿ ಇಟ್ಟರೆ ರುಚಿ ರುಚಿಯಾದ, ಸವಿ ಸವಿಯಾದ ಮೆಂತೆ ಮಾವಿನಕಾಯಿ ಮಸಾಲ ಸವಿಯಲು ಸಿದ್ಧವಾಗುತ್ತದೆ.

ಇದನ್ನು ಚಪಾತಿ, ರೊಟ್ಟಿ, ದೋಸೆ ಅಥವಾ ಬಿಸಿ ಬಿಸಿ ಅನ್ನದ ಜೊತೆ ಸೇವಿಸುವುದರಿಂದ ಉತ್ತಮ ರುಚಿ ಸಿಗುತ್ತದೆ. ಹತ್ತರಿಂದ ಹನ್ನೆರಡು ದಿನ ಇದನ್ನು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ಕೂಡ ಸವಿಯಬಹುದು. ಮಾವಿನಕಾಯಿ ಸೀಸನ್ನಲ್ಲಿ ಬ್ಯಾಚುಲರ್ಸ್ಗಳಿಗೆ ಇದು ಹೇಳಿ ಮಾಡಿಸಿದಂತಹ ರೆಸಿಪಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-4-882458612

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.