ಭಾನುವಾರ, ಮಾರ್ಚ್ 29, 2020
19 °C

ಸಿರಿಧಾನ್ಯಗಳ ಸವಿಖಾದ್ಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಜ್ಜೆ ಮಾದಿಲಿ

 ಬೇಕಾಗುವ ಸಾಮಗ್ರಿಗಳು: ಸಜ್ಜೆ ಹಿಟ್ಟು – 1ಕಪ್‌, ಬೆಲ್ಲ – ರುಚಿಗೆ, ಬಾದಾಮಿ – ಸ್ವಲ್ಪ, ಗೋಡಂಬಿ – ಸ್ವಲ್ಪ, ಒಣಕೊಬ್ಬರಿ – ಸ್ವಲ್ಪ, ಉಪ್ಪು – ರುಚಿಗೆ, ಏಲಕ್ಕಿ ಪುಡಿ ಮತ್ತು ಪುಠಾಣಿ

ತಯಾರಿಸುವ ವಿಧಾನ: ಸಜ್ಜೆಹಿಟ್ಟನ್ನು ಹುರಿದು ಅದಕ್ಕೆ ಸ್ವಲ್ಪ ಉಪ್ಪು ಹಾಗೂ ತುಪ್ಪ ಸೇರಿಸಿ ಮಿಶ್ರಣ ಮಾಡಿ ನೀರು ಹಾಕಿ ನಾದಿಕೊಳ್ಳಬೇಕು. ದಪ್ಪ ದಪ್ಪ ಚಪಾತಿ ಲಟ್ಟಿಸಿ, ಚೆನ್ನಾಗಿ ಬೇಯಿಸಬೇಕು. ಆರಿದ ಮೇಲೆ ಚೂರಗಳನ್ನಾಗಿ ಮಾಡಿ ಮಿಕ್ಸಿಗೆ ಹಾಕಬೇಕು. ಈ ಪುಡಿಗೆ ಬೆಲ್ಲ ಕೂಡಿಸಿ ತಿಕ್ಕಬೇಕು. ಏಲಕ್ಕಿಪುಡಿ, ಬಾದಾಮಿ, ಗೋಡಂಬಿ ಚೂರುಗಳನ್ನು ಹಾಕಿ, ಪುಠಾಣಿ ಹಾಗೂ ಒಣಕೊಬ್ಬರಿ ಪುಡಿ ಸೇರಿಸಿ ಮಿಶ್ರಣ ಮಾಡಬೇಕು.

ರಾಗಿ ಉಂಡೆ

ಬೇಕಾಗುವ ಸಾಮಗ್ರಿಗಳು: ರಾಗಿಹಿಟ್ಟು – 2ಕಪ್‌, ಬೆಲ್ಲ – 1,1/2ಕಪ್‌, ತುಪ್ಪ – 1ಕಪ್‌, ಗೋಡಂಬಿ, ದ್ರಾಕ್ಷಿ, ಬಾದಾಮಿ – ಮೂರು ಸೇರಿ 1ಕಪ್‌, ಏಲಕ್ಕಿಪುಡಿ – ಸ್ವಲ್ಪ

ತಯಾರಿಸುವ ವಿಧಾನ: ತುಪ್ಪವನ್ನು ಹಾಕಿ ರಾಗಿಹಿಟ್ಟನ್ನು ಹುರಿಯಬೇಕು. ಆರಿದ ಮೇಲೆ ಬೆಲ್ಲದ ಪುಡಿ ಸೇರಿಸಿ ಮಿಕ್ಸಿಗೆ ಹಾಕಬೇಕು. ನಂತರ ಗೋಡಂಬಿ, ದ್ರಾಕ್ಷಿ, ಬಾದಾಮಿ ಮತ್ತು ಏಲಕ್ಕಿಪುಡಿಯನ್ನು ಹಾಕಿ ಉಂಡೆ ಕಟ್ಟಬೇಕು.

 

ಹಾರಕದ ಪಲಾವ್

ಬೇಕಾಗುವ ಸಾಮಗ್ರಿಗಳು: ಹಾರಕ – 1ಕಪ್‌, ಗಜ್ಜರಿ – 1, ಬೀನ್ಸ್ – 4,  ಆಲೂಗಡ್ಡೆ – 1, ಕ್ಯಾಬೇಜ್‌ – ಸ್ವಲ್ಪ (ಹೆಚ್ಚಿದ್ದು), ಹಸಿಬಟಾಣಿ – 1/4ಕಪ್‌, ಹೂಕೋಸು – ಸ್ವಲ್ಪ (ಹೆಚ್ಚಿದ್ದು) ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಪಲಾವ್ ಮಸಾಲಾ, ಖಾರದ ಪುಡಿ ಮತ್ತು ಉಪ್ಪು.

ತಯಾರಿಸುವ ವಿಧಾನ: ಹಾರಕ (ಒಂದು ಕಪ್) ತೊಳೆದಿಟ್ಟುಕೊಳ್ಳಬೇಕು. ಕ್ಯಾಬೇಜ್‌, ಬೀನ್ಸ್, ಹೂಕೋಸು, ಗಜ್ಜರಿ, ಆಲೂಗಡ್ಡೆಗಳನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಬೇಕು. ಕುಕ್ಕರ್‌ನಲ್ಲಿ ಎಣ್ಣೆ ಕಾಯಿಸಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮತ್ತು ಸಣ್ಣಗೆ ಹೆಚ್ಚಿದ ತರಕಾರಿ ಸೇರಿಸಿ, ಹಾರಕವನ್ನು ಹಾಕಿ ಹುರಿದುಕೊಳ್ಳಬೇಕು.
ನಂತರ ನೀರು ಎರಡೂವರೆ ಕಪ್‌ ನೀರು ಹಾಕಿ, ಪಲಾವ್ ಮಸಾಲೆ, ಖಾರದ ಪುಡಿ, ಉಪ್ಪು ಹಾಕಿ ಎರಡು ಸೀಟಿ ಕೂಗಿಸಬೇಕು. ಹಸಿ ಕೊಬ್ಬರಿತುರಿ, ಕೊತ್ತಂಬರಿಸೊಪ್ಪು, ಲಿಂಬೆರಸ ಸೇರಿಸಿ ಸೇವಿಸಿ.

ಬರಗದ ಕಟ್ಲೆಟ್

ಬೇಕಾಗುವ ಸಾಮಗ್ರಿಗಳು: ಬರಗದ ಹಿಟ್ಟು – 1ಬಟ್ಟಲು, ಗಜ್ಜರಿ, ಎಲೆ ಕೋಸು, ಬೀನ್ಸ್, ಬಟಾಣಿ, ಸ್ವೀಟ್ ಕಾರ್ನ್, ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಗರಂ ಮಸಾಲಾ, ತುಪ್ಪ, ಉಪ್ಪು ಮತ್ತು ರಸ್ಕ್ ಪೌಡರ್

ತಯಾರಿಸುವ ವಿಧಾನ: ಬರಗದ ಹಿಟ್ಟನ್ನು ಹುರಿದುಕೊಳ್ಳಬೇಕು. ತರಕಾರಿಗಳನ್ನು ಸಣ್ಣಗೆ ಹೆಚ್ಚಿ  ಸ್ವಲ್ಪ ಬೇಯಿಸಬೇಕು. ಇವನ್ನು ಹುರಿದ ಹಿಟ್ಟಿಗೆ ಸೇರಿಸಬೇಕು. ಉಪ್ಪು, ಹಸಿ ಮೆಣಸಿನಕಾಯಿ ಪೇಸ್ಟ್, ಗರಂ ಮಸಾಲಾ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಕೂಡಿಸಿ ನಾದಿ, ರಸ್ಕ್ ಪೌಡರ್ ಹಚ್ಚಿ ದುಂಡಗೆ ತಟ್ಟಿ, ತುಪ್ಪ ಹಚ್ಚಿ ಎರಡೂ ಬದಿ ಬೇಯಿಸಬೇಕು.

 

ನವಣಕ್ಕಿ ಉಂಡಿ

 ಬೇಕಾಗುವ ಸಾಮಗ್ರಿಗಳು: ನವಣೆ – 4ಕಪ್‌, ಹೆಸರುಬೇಳೆ – 1ಕಪ್‌, ಖರ್ಜೂರ, ತುಪ್ಪ, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿ.

ತಯಾರಿಸುವ ವಿಧಾನ: 4 ಬಟ್ಟಲು ನವಣಕ್ಕಿಗೆ 1 ಬಟ್ಟಲು ಹೆಸರುಬೇಳೆ ಈ ಪ್ರಮಾಣದಲ್ಲಿ ತೆಗೆದುಕೊಂಡು ಪ್ರತ್ಯೇಕವಾಗಿ ಹುರಿದು, ಎರಡನ್ನೂ ಸೇರಿಸಿ ಹಿಟ್ಟು ಮಾಡಿಸಿಟ್ಟುಕೊಳ್ಳಬೇಕು. ಈ ಹಿಟ್ಟಿಗೆ ಎರಡು ಬಟ್ಟಲು ತುಪ್ಪ ಹಾಕಿ ಹುರಿಯಬೇಕು. ಆರಿದ ಮೇಲೆ ಮೂರು ಬಟ್ಟಲು ಖರ್ಜೂರದ ತುಂಡುಗಳನ್ನು  ಕೂಡಿಸಿ ಮಿಕ್ಸಿಗೆ ಹಾಕಬೇಕು. ಏಲಕ್ಕಿಪುಡಿ, ಬಾದಾಮಿ ಮತ್ತು ಗೋಡಂಬಿ ಚೂರುಗಳನ್ನು ಹಾಗೂ ಒಣದ್ರಾಕ್ಷಿ ಹಾಕಿ, ತಿಕ್ಕಿ, ಉಂಡಿ ಕಟ್ಟಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು