ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಮಟನ್ ಘೀ ರೋಸ್ಟ್, ಚಿಕನ್‌ ಪೆಪ್ಪರ್‌ ಡ್ರೈ, ಲೆಮನ್ ಪೆಪ್ಪರ್ ಫಿಶ್

Last Updated 27 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಮಟನ್ ಘೀ ರೋಸ್ಟ್
ಬೇಕಾಗುವ ಸಾಮಗ್ರಿಗಳು: ಮೂಳೆ ಸಹಿತ ಮಟನ್ – 500 ಗ್ರಾಂ,

ನೆನೆಸಿಡಲು: ಮೊಸರು – ಅರ್ಧ ಕಪ್‌, ಅರಿಸಿನ – ಅರ್ಧ ಟೀ ಚಮಚ, ನಿಂಬೆರಸ – 1 ಚಮಚ, ಉಪ್ಪು – ರುಚಿಗೆ

ಘೀ ರೋಸ್ಟ್ ಮಸಾಲೆಗೆ: ಕೆಂಪು ಮೆಣಸು – 6, ಲವಂಗ – 2, ಕಾಳುಮೆಣಸು – 1 ಚಮಚ, ಮೆಂತ್ಯೆ – 1 ಚಮಚ, ಕೊತ್ತಂಬರಿ – 2 ಚಮಚ, ಜೀರಿಗೆ – 1 ಚಮಚ, ಏಲಕ್ಕಿ – 6

ಇತರ ಸಾಮಗ್ರಿಗಳು: ಹುಣಸೆರಸ – 1 ಚಮಚ, ತುಪ್ಪ – 2 ಚಮಚ, ಕರಿಬೇವು – 2, ಬೆಲ್ಲ – 2 ಟೀ ಚಮಚ, ಉಪ್ಪು– ರುಚಿಗೆ

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ನೆನೆಸಿಡಲು ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲೆಸಿ. ಅದಕ್ಕೆ ಮಟನ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ ಕನಿಷ್ಠ ಅರ್ಧ ಗಂಟೆ ನೆನೆಸಿಡಿ. ಪ್ಯಾನ್ ಒಲೆಯ ಮೇಲಿಟ್ಟು ಬಿಸಿಯಾದ ಮೇಲೆ ಕೆಂಪುಮೆಣಸು, ಕಾಳುಮೆಣಸು, ಲವಂಗ, ಮೆಂತ್ಯೆ, ಕೊತ್ತಂಬರಿ ಹಾಗೂ ಜೀರಿಗೆಯನ್ನು ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಅದನ್ನು ತಣ್ಣಗಾಗಲು ಬಿಡಿ. ಅದನ್ನು ಮಿಕ್ಸಿ ಜಾರಿಗೆ ಹಾಕಿ ಅದರೊಂದಿಗೆ ಏಲಕ್ಕಿ, ಹುಣಸೆರಸ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕುಕರ್‌ನಲ್ಲಿ ನೆನೆಸಿಟ್ಟುಕೊಂಡ ಮಟನ್‌ ತುಂಡು ಹಾಗೂ ಕಾಲು ಕಪ್ ನೀರು ಸೇರಿಸಿ 3 ರಿಂದ 4 ವಿಷಲ್ ಕೂಗಿಸಿಕೊಳ್ಳಿ.

ಕಡಾಯಿಯನ್ನು ಮಧ್ಯಮ ಉರಿಯಲ್ಲಿ ಇರಿಸಿಕೊಂಡು ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದ ಮೇಲೆ ಕರಿಬೇವು ಹಾಕಿ ಸಿಡಿಸಿ, ನಂತರ ಘೀ ರೋಸ್ಟ್ ಮಸಾಲೆ ಸೇರಿಸಿ ಮಧ್ಯಮ ಉರಿಯಲ್ಲಿ ಆರು ನಿಮಿಷಗಳ ಕಾಲ ಕುದಿಸಿ. ಅದನ್ನು ಕುಕರ್‌ನಲ್ಲಿ ಬೇಯಿಸಿಕೊಂಡ ಮಟನ್‌ ತುಂಡಿಗೆ ಸೇರಿಸಿ. ಮಸಾಲೆ ಮಂದವಾಗಿರಲಿ. ಅದಕ್ಕೆ ಸ್ವಲ್ಪ ಬೆಲ್ಲ ಹಾಗೂ ಉಪ್ಪು ಸೇರಿಸಿ. ನಂತರ ಮುಚ್ಚಳ ಮುಚ್ಚಿ 8 ರಿಂದ 10 ನಿಮಿಷ ಕುದಿಸಿ. ಈಗ ನಿಮ್ಮ ಮುಂದೆ ರುಚಿಯಾದ ಘೀ ರೋಸ್ಟ್ ರೆಡಿ.

***

ಚಿಕನ್‌ ಪೆಪ್ಪರ್‌ ಡ್ರೈ
ಬೇಕಾಗುವ ಸಾಮಗ್ರಿಗಳು: ಚಿಕನ್‌ – 1/2 ಕೆ.ಜಿ, ಈರುಳ್ಳಿ – 2, ಚಕ್ಕೆ, ಲವಂಗ, ಏಲಕ್ಕಿ ಸ್ವಲ್ಪ, ಕರಿಮೆಣಸು – 2 ಚಮಚ, ಒಣಮೆಣಸು – 1, ಕೊತ್ತಂಬರಿ ಬೀಜ – 2 ಚಮಚ, ಜೀರಿಗೆ – 1 ಚಮಚ, ಸೋಂಪು– 1/2 ಚಮಚ, ಕೊತ್ತಂಬರಿ ಸೊಪ್ಪು, ಎಣ್ಣೆ, ಶುಂಠಿ – ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ, ಅರಿಸಿನ – ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ– ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಒಣಮೆಣಸು, ಕೊತ್ತಂಬರಿ, ಜೀರಿಗೆ ಹಾಕಿ ಸ್ವಲ್ಪ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಕರಿಮೆಣಸನ್ನು ಚೆನ್ನಾಗಿ ಹುರಿದು, ಪ್ರತ್ಯೇಕವಾಗಿ ಪುಡಿ ಮಾಡಿಟ್ಟುಕೊಳ್ಳಿ.

ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಸೋಂಪು ಹಾಕಿ ಚಟಪಟಾಯಿಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಮೊದಲು ರುಬ್ಬಿಟ್ಟುಕೊಂಡಿದ್ದ ಮಸಾಲೆಪುಡಿಯನ್ನು ಸೇರಿಸಿ. ಇದಕ್ಕೆ ಚಿಕನ್‌ ತುಂಡುಗಳನ್ನು ಹಾಕಿ ಬೆರೆಸಿ. ಉಪ್ಪು ಹಾಕಿ ಚಿಕನ್‌ ಬೇಯಲು ಬಿಡಿ. ಚಿಕನ್‌ ಬೆಂದ ನಂತರ ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ನಿಂಬೆರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಚಿಕನ್‌ ಪೆಪ್ಪರ್‌ ಡ್ರೈ ತಯಾರಾಗುತ್ತದೆ.

***

ಲೆಮನ್ ಪೆಪ್ಪರ್ ಫಿಶ್‌
ಬೇಕಾಗುವ ಸಾಮಗ್ರಿಗಳು: ಮೀನು – ಅರ್ಧ ಕೆ.ಜಿ., ಕಾಳುಮೆಣಸು – 1 ಚಮಚ, ಸೋಂಪು – 1/2 ಚಮಚ, ಕರಿಬೇವು – 2 ಎಸಳು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಹಸಿಮೆಣಸು – 2, ಎಣ್ಣೆ – 2 ಚಮಚ, ಗರಂ ಮಸಾಲೆ – ಸ್ವಲ್ಪ

ನೆನೆಸಿಡಲು: ನಿಂಬೆರಸ – 1 ಟೇಬಲ್ ಚಮಚ, ಅರಿಸಿನ – ಚಿಟಿಕೆ, ಖಾರದಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ನೆನೆಸಿಡಲು ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಮೀನಿನ ತುಂಡುಗಳನ್ನು ಸೇರಿಸಿ. ಸೋಂಪು ಹಾಗೂ ಕಾಳುಮೆಣಸಿನ ಹುಡಿಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಪ್ಯಾನ್ ಬಿಸಿ ಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ. ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿ. ಅದಕ್ಕೆ ಕರಿಬೇವು ಸೇರಿಸಿ. ನಂತರ ಮಗುಚಿ ಹಾಕಿ. ಕೊನೆಯಲ್ಲಿ ಗರಂಮಸಾಲೆ ಪುಡಿ ಉದುರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT