ಪುದಿನಪಕೋಡವೂ ಪಲಾವ್‌ ರುಚಿಯೂ

7

ಪುದಿನಪಕೋಡವೂ ಪಲಾವ್‌ ರುಚಿಯೂ

Published:
Updated:
Prajavani

ಲ್ಯಾಟಿನ್ ಭಾಷೆಯಲ್ಲಿ ಜಲದೇವಿ ಎಂದು ಕರೆಯುವ ಪುದಿನ ಸೊಪ್ಪಿಗೆ ಸೊಪ್ಪುಗಳಲ್ಲಿ ಅಗ್ರಸ್ಥಾನ. ಆರೋಗ್ಯದ ದೃಷ್ಟಿಯಿಂದಲೂ ಪುದಿನ ಸೊಪ್ಪಿನ ಸೇವನೆ ಉತ್ತಮ. ಮಧುರ ಸುವಾಸನೆ, ರುಚಿ ಹೊಂದಿರುವ ಪುದಿನ ಸೊಪ್ಪಿನಿಂದ ಶರಬತ್, ಚಟ್ನಿ ಅಲ್ಲದೇ ಇನ್ನೂ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಪುದಿನ ಸೊಪ್ಪಿನ ಖಾದ್ಯಗಳು ಬಾಯಿಗೂ ರುಚಿ, ದೇಹಕ್ಕೂ ಹಿತ ಎನ್ನುತ್ತಾರೆ ಸೀತಾ ಎಸ್‌. ನಾರಾಯಣ  

ಅಂಬೊಡೆ

ಬೇಕಾಗುವ ಸಾಮಗ್ರಿಗಳು: ಕಡ್ಲೇಬೇಳೆ – 1ಕಪ್, ಹೆಚ್ಚಿದ ಈರುಳ್ಳಿ – 1, ಹೆಚ್ಚಿದ ಪುದಿನ ಸೊಪ್ಪು – 1ಕಪ್, ಹೆಚ್ಚಿದ ಹಸಿಮೆಣಸು, ಶುಂಠಿ – ಸ್ವಲ್ಪ, ಉಪ್ಪು ರುಚಿಗೆ (ಬೇಕಿದ್ದಲ್ಲಿ ಹೆಚ್ಚಿದ ಕರಿಬೇವು, ಕೊತ್ತಂಬರಿ, ತುರಿದ ಕಾಯಿತುರಿ) ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ನೆನೆಸಿದ ಕಡ್ಲೆಬೇಳೆ, ಶುಂಠಿ, ಹಸಿಮೆಣಸು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಉಳಿದ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಿ. ಬೇಕಾದ ಅಳತೆಗೆ ತಟ್ಟಿ ಕಾದ ಎಣ್ಣೆಗೆ ಹಾಕಿ ಎರಡೂ ಕಡೆ ಹದವಾಗಿ ಕರಿಯಿರಿ. ಘಮ ಘಮ ಅಂಬೊಡೆ ಸವಿಯಲು ಸಿದ್ಧ.

ಪುದಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ಹುರಿಗಡಲೆ ಅಥವಾ ಹುರಿದ ಕಡ್ಲೆಬೇಳೆ – 1/2ಕಪ್, ಕಾಯಿತುರಿ – 1ಕಪ್, ಹೆಚ್ಚಿದ ಪುದಿನ ಸೊಪ್ಪು – 1ಕಪ್, ಹಸಿಮೆಣಸು – 4ರಿಂದ5, ಶುಂಠಿ – 1ಚೂರು,  ರುಚಿಗೆ – ಉಪ್ಪು, ಹುಣಸೆ ಹಣ್ಣು.

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಇಂಗು

ತಯಾರಿಸುವ ವಿಧಾನ: ಪುದಿನ, ಹಸಿಮೆಣಸು ಸ್ವಲ್ಪ ಎಣ್ಣೆ ಹಾಕಿ ಹುರಿದು ಆರಲು ಬಿಡಿ. ಎಲ್ಲಾ ಪದಾರ್ಥಗಳನ್ನು ಸೇರಿಸಿ ರುಬ್ಬಿ, ಎಣ್ಣೆ, ಸಾಸಿವೆ, ಇಂಗು ಒಗ್ಗರಣೆ ಹಾಕಿ. ಅನ್ನ, ಚಪಾತಿ, ರೊಟ್ಟಿಯೊಂದಿಗೆ ಸವಿಯಿರಿ.

ಊದಲು ಪುದಿನ ಪಲಾವ್

ಬೇಕಾಗುವ ಸಾಮಗ್ರಿಗಳು: ಊದಲು – 1 ಕಪ್, ಹೆಚ್ಚಿದ ಪುದಿನ – 1ಕಪ್, ಹಸಿಮೆಣಸು – 3ರಿಂದ 4, ಹೆಚ್ಚಿದ ಟೊಮೆಟೊ – 1, ಹೆಚ್ಚಿದ ಈರುಳ್ಳಿ – 1, ಬೆಳ್ಳುಳ್ಳಿ 4ರಿಂದ5 ಎಸಳು,  ಹೆಚ್ಚಿದ ತರಕಾರಿ – 2ಕಪ್ (ಬೀನ್ಸ್, ಕ್ಯಾರೆಟ್, ನವಿಲುಕೋಸು, ಬಟಾಣಿ), ಕಾಯಿತುರಿ – 1/2ಕಪ್, ಶುಂಠಿ – 1, ಎಣ್ಣೆ – 2ಚಮಚ, ತುಪ್ಪ – 2ಚಮಚ, ಜೀರಿಗೆ – 1ಚಮಚ.

ತಯಾರಿಸುವ ವಿಧಾನ: ಊದಲು ತೊಳೆದು ನೆನೆಸಿ, ಉದುರಾಗಿ ಬೇಯಿಸಿಕೊಳ್ಳಿ. ಪುದಿನ, ಕಾಯಿತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಜೀರಿಗೆ ರುಬ್ಬಿಕೊಳ್ಳಿ. ಎಣ್ಣೆ, ತುಪ್ಪ, ಜೀರಿಗೆ ಒಗ್ಗರಣೆ ಮಾಡಿ. ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ರುಬ್ಬಿದ ಮಿಶ್ರಣ ತರಕಾರಿ ಹಾಕಿ ಬಾಡಿಸಿ, ಟೊಮೆಟೊ ಹಾಕಿ. ಹೆಚ್ಚು ನೀರು ಹಾಕದೆ ಬೇಯಿಸಿ. ಬೆಂದ ಊದಲು ಹಾಕಿ ಉಪ್ಪು ಹಾಕಿ ಸವಿಯಿರಿ.

ಉಪ್ಪಿಟ್ಟು

ಬೇಕಾಗುವ ಸಾಮಗ್ರಿಗಳು: ಹುರಿದ ಉಪ್ಪಿಟ್ಟಿನ ರವೆ – 1ಕಪ್, ಒಗ್ಗರಣೆಗೆ ಎಣ್ಣೆ – 2ಚಮಚ, ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ – 1/2ಚಮಚ, ಹಸಿಮೆಣಸು – 3, ಹೆಚ್ಚಿದ ಈರುಳ್ಳಿ – 1, ಹೆಚ್ಚಿದ ಟೊಮೆಟೊ – 1, ಅರಿಸಿನ – ಚಿಟಿಕೆ, ಕಾಯಿತುರಿ – 1/2ಕಪ್, ಶುಂಠಿ – ಚೂರು, ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ: ಕಾಯಿತುರಿ, ಹಸಿಮೆಣಸು, ಶುಂಠಿ ಸೇರಿಸಿ ರುಬ್ಬಿಕೊಳ್ಳಿ. ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ, ಈರುಳ್ಳಿ ಹಾಕಿ ಹುರಿದು, ಟೊಮೆಟೊ ಹಾಕಿ ಬಾಡಿಸಿ. ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ 2 ಕಪ್ ನೀರು ಹಾಕಿ ಕುದಿಸಿ. ಹುರಿದ ರವೆ ಹಾಕುತ್ತಾ ಸಣ್ಣ ಉರಿಯಲ್ಲಿ ಬೇಯಿಸಿ, ಕರಿಬೇವು ಕೊತ್ತಂಬರಿ ಉದುರಿಸಿ. ರುಬ್ಬದೇ ಹಾಗೇ ಹಾಕಿಯೂ ಮಾಡಬಹುದು. ಬಿಸಿಯಿರುವಾಗಲೇ ಸವಿಯಿರಿ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !