ಮಳೆಗಾಲಕ್ಕೆ ಖಾರ ಖಾರ ಸಾರು

7

ಮಳೆಗಾಲಕ್ಕೆ ಖಾರ ಖಾರ ಸಾರು

Published:
Updated:

 ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಶುಂಠಿ, ಕಾಳುಮೆಣಸು, ಬೆಳ್ಳುಳ್ಳಿ ಮುಂತಾದವುಗಳನ್ನು ಸೇರಿಸಿ ಮಾಡುವ ಸಾರುಗಳಿಂದ ಶೀತ, ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳು ಕಡಿಮೆಯಾಗುತ್ತದೆ. ಅಂತಹ ಸಾರುಗಳನ್ನು ಮಾಡುವ ವಿಧಾನಗಳು ಇಲ್ಲಿವೆ

ಮಳೆಗಾಲ ಆರಂಭವಾಗಿದೆ. ಶೀತ, ನೆಗಡಿ, ಕೆಮ್ಮು ಮುಂತಾದ ತೊಂದರೆಗಳು ಈಗ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಶುಂಠಿ, ಕಾಳುಮೆಣಸು, ಬೆಳ್ಳುಳ್ಳಿ ಮುಂತಾದ ವಸ್ತುಳನ್ನು ಸೇರಿಸಿ ಮಾಡುವ ಸಾರುಗಳಿಂದ ಶೀತ, ನೆಗಡಿ, ಕೆಮ್ಮು ಮುಂತಾದ ತೊಂದರೆಗಳು ಕಡಿಮೆಯಾಗುತ್ತದೆ. ಅಂತಹ ಸಾರುಗಳನ್ನು ಮಾಡುವ ವಿಧಾನಗಳು ಇಲ್ಲಿವೆ: 

ನಿಂಬೆ ರಸಂ
ಬೇಕಾಗುವ ವಸ್ತುಗಳು: 1 ಕಪ್ ತೊಗರಿಬೇಳೆ, 2-3 ಹಸಿಮೆಣಸು, ಚಿಟಿಕೆ ಇಂಗು, 1 ಎಸಳು ಕರಿಬೇವಿನೆಲೆ, 2 ಚಮಚ ಕೊತ್ತಂಬರಿಸೊಪ್ಪು, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, 2-3 ಚಮಚ ನಿಂಬೆರಸ, 2 ಚಮಚ ಬೆಲ್ಲ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ : ತೊಗರಿಬೇಳೆ , ಸ್ವಲ್ಪ ನೀರು, ಅರಸಿನ, ಹಾಕಿ ಕುಕ್ಕರಿನಲ್ಲಿ ಹಾಕಿ ಬೇಯಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಜೀರಿಗೆ, ಇಂಗು, ಹಸಿಮೆಣಸು ಚೂರು ಹಾಕಿ. ಸ್ವಲ್ಪ ಹುರಿದು ಕರಿಬೇವಿನೆಲೆ, ಕೊತ್ತಂಬರಿ ಸೊಪ್ಪು ಹಾಕಿ. ನಂತರ ಒಲೆಯಿಂದ ಕೆಳಗಿಳಿಸಿ. ನಂತರ ನಿಂಬೆರಸ ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಬಿಸಿ ಬಿಸಿ ಸಾರನ್ನು ಅನ್ನದೊಂದಿಗೆ ಸವಿಯಿರಿ.

***

ಕರಿಮೆಣಸು ರಸಂ
ಬೇಕಾಗುವ ವಸ್ತುಗಳು : 2 ಚಮಚ ತುಪ್ಪ, 1 ಚಮಚ ಎಣ್ಣೆ, 1 ಟೇಬಲ್ ಚಮಚ ಕರಿಮೆಣಸು, 1 ಚಮಚ ಜೀರಿಗೆ, 4-5 ಮೆಂತೆ ಕಾಳು, 1/2ಚಮಚ ಸಾಸಿವೆ, 1/2 ಕಪ್ ತೊಗರಿ, 1-2 ಟೊಮೆಟೊ, 1-2 ಬೆಳ್ಳುಳ್ಳಿ ಎಸಳು, 1 ಈರುಳ್ಳಿ, 2 ಕೆಂಪು ಮೆಣಸು, 1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ ಬಿಸಿಯಾದಾಗ ಕರಿಮೆಣಸು, ಜೀರಿಗೆ ಮೆಂತೆ ಕಾಳು ಹಾಕಿ ಹುರಿಯಿರಿ. ತಣ್ಣಗಾದ ಮೇಲೆ ಪುಡಿ ಮಾಡಿ. ಟೊಮೆಟೊ, ತೊಗರಿಬೇಳೆ ಸ್ವಲ್ಪ ನೀರು ಸೇರಿಸಿ ಕುಕ್ಕರಿನಲ್ಲಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ತುಪ್ಪ, ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಬೆಳ್ಳುಳ್ಳಿ ಎಸಳು, ನೀರುಳ್ಳಿ ಹಾಕಿ ಹುರಿದು, ಬೆಯಿಸಿದ ತೊಗರಿಬೇಳೆ, ಟೊಮೆಟೊ, ನೀರು, ಮಾಡಿಟ್ಟ ಪುಡಿ ಹಾಕಿ ಕುದಿಸಿ. ಉಪ್ಪು ಹಾಕಿ. 5-10 ನಿಮಿಷ ಕುದಿದ ನಂತರ ಒಲೆಯಿಂದ ಕೆಳಗಿಳಿಸಿ. ಈಗ ಕರಿಮೆಣಸು ರಸಂ ಅನ್ನದೊಂದೆಗೆ ಸವಿಯಲು ಹಿತವಾಗಿರುತ್ತದೆ.

***
ಹಸಿ ಶುಂಠಿ ರಸಂ

ಬೇಕಾಗುವ ವಸ್ತುಗಳು : 1 ಕಪ್ ತೊಗರಿಬೇಳೆ, 1 ಚಮಚ ರಸಂ ಪುಡಿ, ಚಿಟಿಕಿ ಇಂಗು, ನೆಲ್ಲಿ ಗಾತ್ರದ ಹುಳಿ, 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ, ಸಣ್ಣ ನಿಂಬೆಗಾತ್ರದ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಕೊತ್ತಂಬರಿಸೊಪ್ಪು, ಳಿ ಚಮಚ ಸಾಸಿವೆ, 1 ಎಸಳೂ ಕರಿಬೇವು, 2 ಚಮಚ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಎಣ್ಣೆ.

ಮಾಡುವ ವಿಧಾನ : ಕುಕ್ಕರಿನಲ್ಲಿ ತೊಗರಿಬೇಲೆ ಮತ್ತು ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಬೇಯಿಸಿದ ನೀರು ತೆಗೆದು ಹುಳಿರಸ, ರಸಂಪುಡಿ, ಶುಂಠಿ ಚೂರು, ಬೆಲ್ಲ ಸೇರಿಸಿ 10 ನಿಮಿಷ ಕುದಿಸಿ ನಂತರ ಎಣ್ಣೆಯಲ್ಲಿ ಸಾಸಿವೆ, ಇಂಗು ಕರಿಬೇವು ಸೇರಿಸಿ ಒಗ್ಗರಣೆ ಕೊಡಿ. ಒಲೆಯಿಂದ ಇಳಿಸಿ. ನಿಂಬೆರಸ, ಕೊತ್ತಂಬರಿಸೊಪ್ಪು ಹಾಕಿ. ಶುಂಠಿ ರಸಂ ಅನ್ನಕ್ಕೆ ಬೆರೆಸಿ ತಿನ್ನಲು ರುಚಿಯಾಗಿರುತ್ತದೆ.

 

***
ವೀಳ್ಯದೆಲೆ ರಸಂ

ಬೇಕಾಗುವ ವಸ್ತುಗಳು : 1 ಈರುಳ್ಳಿ, 3-4 ಎಸಳು ಬೆಳ್ಳುಳ್ಳಿ, 1 ಟೊಮೆಟೊ, ಳಿ ಚಮಚ ಹುಳಿ ರಸ, ಳಿ ಚಮಚ ಕಾಳುಮೆಣಸಿನ ಪುಡಿ, 1/2 ಚಮಚ ಜೀರಿಗೆ ಪುಡೀ, ¼ ಚಮಚ ಅರಸಿನ ಪುಡಿ, 1-2 ವೀಳ್ಯದೆಲೆ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಎಣ್ಣೆ.

ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಎಣ್ಣೇ ಹಾಕಿ. ಬಿಸಿಯಾದಾಗ ಈರುಳ್ಳಿ ಚೂರು, ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿದು, ನಂತರ ಟೊಮೆಟೊ ಚೂರು ಹಾಕಿ ಸ್ವಲ್ಪ ಹುರಿದು, ನಂತರ ಹುಳಿ ರಸ, ನೀರು, ಉಪ್ಪು, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಅರಸಿನ ಪುಡಿ, ವೀಳ್ಯದೆಲೆ ಚೂರು ಹಾಕಿ 5 ರಿಂದ 10 ನಿಮಿಷ ಕುದಿಸಿ. ಈಗ ನೆಗಡಿ, ಕೆಮ್ಮು ಗುಣಪಡಿಸುವ ವೀಳ್ಯದೆಲೆ ಸಾರು ಸವಿಯಲು ಸಿದ್ಧ.

 

ಸರಸ್ವತಿ ಯಸ್.ಭಟ್
’ವಿಶ್ರಾಂತಿ’
ಬೊಳುವಾರು ಬೈಲ್
ಪುತ್ತೂರು – 574201(ದ.ಕ)
ಮೊಬೈಲ್ – 9481845400

 

 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !