ಸಂಕ್ರಾಂತಿಗೆ ಬಾದಾಮಿಯ ವಿವಿಧ ಖಾದ್ಯಗಳು

7
Sankranthi auduge

ಸಂಕ್ರಾಂತಿಗೆ ಬಾದಾಮಿಯ ವಿವಿಧ ಖಾದ್ಯಗಳು

Published:
Updated:
Prajavani

ಸುಗ್ಗಿ ಹಬ್ಬ ಸಂಕ್ರಾಂತಿಗಾಗಿ ಶೆಫ್ ಮನೀಷ್ ಮೆಹ್‌ರೋತ್ರಾ ಬಾದಾಮಿಯಿಂದ ಮಾಡಬಹುದಾದ ವಿವಿಧ ಖಾದ್ಯಗಳನ್ನು ಮಾಡುವ ವಿಧಾನವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ.

–––

ಬಾದಾಮಿ–ಗುಲಾಬಿ ಕುಲ್ಫಿ

(ಐದು ಜನರಿಗಾಗುವಷ್ಟು)

ಬೇಕಾಗುವ ಸಾಮಾಗ್ರಿಗಳು: ಕ್ರೀಮ್ ತುಂಬಿದ ಹಾಲು–4 ಕಪ್‌, ಸಕ್ಕರೆ–ಅರ್ಧ ಕಪ್, ಕೇಸರಿ ಎಸಳು –ಕಾಲು ಚಮಚ, ಪುಡಿ ಮಾಡಿದ ಬಾದಾಮಿ–ಅರ್ಧ ಕಪ್, ಒಣಗಿದ ಗುಲಾಬಿ ದಳಗಳು–ಕಾಲು ಕಪ್.

ವಿಧಾನ: ಪ್ಯಾನ್‌ವೊಂದರಲ್ಲಿ ಕ್ರೀಮ್‌ಭರಿತ ಹಾಲನ್ನು ಹಾಕಿ ಸಣ್ಣನೆಯ ಉರಿಯಲ್ಲಿ ಹಾಲು ಗಟ್ಟಿಯಾಗುವವರೆಗೆ ಕುದಿಸಿ. ನಾಲ್ಕು ಕಪ್ ಹಾಲು ಎರಡು ಕಪ್‌ ಆಗುವವರೆಗೆ ಸಣ್ಣ ಉರಿಯಲ್ಲೇ ಕುದಿಸಿ. ನಂತರ ಇದಕ್ಕೆ ಪುಡಿ ಮಾಡಿದ ಬಾದಾಮಿ, ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಸೋಸಿಕೊಳ್ಳಿ. ಇದಕ್ಕೆ ಒಣಗಿದ ಗುಲಾಬಿ ದಳಗಳು ಮತ್ತು ಕೇಸರಿಯ ಎಸಳುಗಳನ್ನು ಮಿಶ್ರಣಮಾಡಿ. 

ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ. ಮಿಶ್ರಣ ಒಂದು ಹಂತಕ್ಕೆ ತಂಪಾದ ಬಳಿಕ, ಅದನ್ನು ಮೌಲ್ಡ್‌ನಿಂದ ಹೊರತೆಗೆದು, ಅದರ ಮೇಲೆ ಹುರಿದ ಬಾದಾಮಿ ತುಣುಕುಗಳನ್ನು ಹರಡಿ. ಈಗ ಬಾದಾಮಿ ಗುಲಾಬಿ ಕುಲ್ಫಿ ಸವಿಯಲು ಸಿದ್ಧ.

----

ಬಾದಾಮಿ–ಗುಲಾಬಿ ಖೀರ್

(ನಾಲ್ಕರಿಂದ  ಐದು ಜನರಿಗಾಗುವಷ್ಟು)‌

ಬೇಕಾಗುವ ಸಾಮಾಗ್ರಿ: ಕೊಬ್ಬುಭರಿತ ಹಾಲು– 2 ಲೀಟರ್, ಅಕ್ಕಿ–120 ಗ್ರಾಂ, ಗ್ರೇನ್ ಸಕ್ಕರ್–40 ಗ್ರಾಂ, ಗುಲಾಬಿ ಜಲ– 3ರಿಂದ 4 ಹನಿಗಳು, ಒಣಗಿದ ಗುಲಾಬಿ ದಳಗಳು–10 ಗ್ರಾಂ,  ಬಾದಾಮಿ–100 ಗ್ರಾಂ, ಸ್ಲೈಸ್ ಮಾಡಿದ ಬಾದಾಮಿ ಚೂರುಗಳು–25 ಗ್ರಾಂ.

ವಿಧಾನ: ಅಕ್ಕಿಯನ್ನು ನೀರಿನಲ್ಲಿ 20 ನಿಮಿಷ ಕಾಲ ನೆನೆಸಿಡಿ. ದಪ್ಪ ತಳದ ಪ್ಯಾನ್‌ನಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ. ಹಾಲು ಅರ್ಧಭಾಗಕ್ಕೆ ಇಳಿಯುವ ತನಕ ಸಿಮ್ಮರ್‌ನಲ್ಲಿಡಿ. ನಂತರ ಇದಕ್ಕೆ ನೆನೆಸಿದ ಅಕ್ಕಿಯನ್ನು ಬೆರೆಸಿ, ನೀರು ಹಾಕಿ ಕಡಿಮೆ ಉರಿಯಲ್ಲಿ ಈ ಮಿಶ್ರಣ ದಪ್ಪವಾಗುವ ತನಕ ಬೇಯಿಸಿ.

ಸ್ಲೈಸ್ ಮಾಡಿದ ಬಾದಾಮಿ ತುಣುಕುಗಳನ್ನು ಹಾಕಿ 15 ನಿಮಿಷಗಳ ತನಕ ಖೀರ್ ಗಟ್ಟಿ ಮತ್ತು ಕ್ರಿಮಿಯಾಗುವ ತನಕ ಕುದಿಸಿ. ನಂತರ ಇದಕ್ಕೆ ಸಕ್ಕರೆಯನ್ನು ಹಾಕಿ ಕಲಸಿ. ಈ ಮಿಶ್ರಣ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಇದಕ್ಕೆ ನಾಲ್ಕೈದು ಹನಿ ಗುಲಾಬಿ ಜಲ ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿಟ್ಟು ನಂತರ ತಿನ್ನಲು ಕೊಡಿ.  

----

ಬಾದಾಮಿ–ಕ್ಯಾರೆಟ್ ಹಲ್ವಾ ಕ್ರಂಬಲ್

(ಆರು ಜನರಿಗಾಗುವಷ್ಟು)

ಕ್ಯಾರೆಟ್–ಅರ್ಧ ಕೆಜಿ, ಕ್ರೀಮ್ ಹಾಲು– ಅರ್ಧ ಲೀಟರ್, ಸಕ್ಕರೆ–ಅರ್ಧ ಕಪ್, ತುಪ್ಪ–2 ಟೇಬಲ್ ಸ್ಪೂನ್, ಬಾದಾಮಿ–ಕಾಲು ಕಪ್. ಪುಡಿ ಮಾಡಿದ ಏಲಕ್ಕಿ (4)

ಕ್ರಂಬಲ್‌ಗಾಗಿ: ಯಾವುದಾದರೂ ಹಿಟ್ಟು ಕಾಲು ಕಪ್, ಬೆಣ್ಣೆ– ಅರ್ಧ ಕಪ್, ಸಕ್ಕರೆ–ಅರ್ಧ ಕಪ್, ಬಾದಾಮಿ– ಅರ್ಧ ಕಪ್.

ವಿಧಾನ: ಪ್ಯಾನ್‌ವೊಂದರಲ್ಲಿ ಹಾಲು ಮತ್ತು ತುರಿದ ಕ್ಯಾರೆಟ್‌ ಅನ್ನು ಹಾಕಿ ಹಾಲು ಕಾಲು ಲೀಟರ್ ಆಗುವ ತನಕ ಚೆನ್ನಾಗಿ ಕುದಿಸಿ. ಇದಕ್ಕೆ ಏಲಕ್ಕಿ ಪುಡಿ, ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸ್ಲೈಸ್ ಮಾಡಿದ ಬಾದಾಮಿ ತುಣುಕುಗಳನ್ನು ಹಾಕಿ ಮಿಶ್ರಣ ಮಾಡಿ.

ಕ್ರಂಬಲ್‌ಗಾಗಿ: ಹಿಟ್ಟು, ಬೆಣ್ಣೆ, ಸಕ್ಕರೆ ಮತ್ತು ಬಾದಾಮಿಯನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಹೊಂಬಣ್ಣ ಬರುವವರೆಗೆ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಓವನ್‌ನಲ್ಲಿಡಿ. ಹೊಂಬಣ್ಣ ಬಂದ ನಂತರ ಕ್ರಂಬಲ್ ಅನ್ನು ತೆಗೆದು ಅದರ ಮೇಲೆ ಕ್ಯಾರೆಟ್ ಹಲ್ವಾ ಹರಡಿ, ಹುರಿದ ಬಾದಾಮಿಗಳಿಂದ ಅಲಂಕರಿಸಿ. ಈಗ ಬಾದಾಮಿ–ಕ್ಯಾರೆಟ್ ಕ್ರಂಬಲ್ ಹಲ್ವಾ ತಿನ್ನಲು ಸಿದ್ಧ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !