ಶಾಂಗ್ರಿಲಾದಲ್ಲಿ ಮಂಗಳೂರು ಆಹಾರ ಮೇಳ

ಶನಿವಾರ, ಮಾರ್ಚ್ 23, 2019
34 °C

ಶಾಂಗ್ರಿಲಾದಲ್ಲಿ ಮಂಗಳೂರು ಆಹಾರ ಮೇಳ

Published:
Updated:
Prajavani

ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಈಗ ಆಹಾರ ಮೇಳದ ಸಮಯ. 

ಮಂಗಳೂರಿನ ಭಿನ್ನವಾದ ಆಹಾರ ಪದಾರ್ಥಗಳನ್ನು ತಮ್ಮ ಗ್ರಾಹಕರಿಗೆ ಪರಿಚಯಿಸಲು ಹೋಟೆಲ್‌ ಸಿದ್ಧತೆ ನಡೆಸಿದೆ. ಒಂದು ವಾರ  ಈ ಆಹಾರ ಮೇಳ ನಡೆಯಲಿದೆ. ಮಾರ್ಚ್‌ 10ರಂದು ಆರಂಭವಾಗಿ 17 ರವರೆಗೆ ನಡೆಯಲಿದೆ.

ದಕ್ಷಿಣ ಹಾಗೂ ಪಶ್ಚಿಮ ಭಾರತದ ಆಹಾರ ತಿನಿಸುಗಳು ಈ ಮೇಳದಲ್ಲಿ ಸಿಗಲಿವೆ.  ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಪರಿಚಯಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ. ತುಳು, ಗೌಡ ಸಾರಸ್ವತ ಬ್ರಾಹ್ಮಣ, ಕ್ಯಾಥೋಲಿಕ್‌, ಬ್ಯಾರಿ ಸಮುದಾಯದವರ ಆಹಾರ ಪದ್ಧತಿಯ ಪರಿಚಯ ಸಿಗಲಿದೆ.

ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳು ಎಲ್ಲರೂ ಇಷ್ಟಪಡುವಂತಹ ಖಾದ್ಯಗಳು ಇರಲಿವೆ. ಸಾಂಪ್ರದಾಯಿಕ ಪಾನೀಯಗಳು ಹಾಗೂ ಚಿಕನ್‌ ಗೀ ರೋಸ್ಟ್‌, ನೀರು ದೋಸೆ, ಚಿಕನ್‌ ಸುಕ್ಕಾ, ಫಿಶ್‌ ಪುಲಿಮುಂಚಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೂ ಇರಲಿದೆ. 

ಹೋಟೆಲ್‌ ಕುರಿತು: ಹಾಂಕಾಂಗ್ ಮೂಲದ ಹೋಟೆಲ್ ಹಾಗೂ ರೆಸಾರ್ಟ್‌ ಇದಾಗಿದೆ. ಜಗತ್ತಿನ ಬೇರೆ ಬೇರೆ ಕಡೆ ಈ ಹೋಟೆಲ್‌ಗಳು ಇವೆ. ಆಸ್ಟ್ರೇಲಿಯಾ, ಕೆನಡಾ, ಚೀನಾ, ಫಿಜಿ, ಫ್ರಾನ್ಸ್‌, ಹಾಂಕಾಂಗ್‌, ಇಂಡೊನೇಷ್ಯಾ, ಜಪಾನ್‌, ಮಲೇಷ್ಯಾ, ಮಾಲ್ಡೀವ್ಸ್‌, ಮಾರಿಷಸ್‌, ಮಂಗೋಲಿಯಾ, ಮ್ಯಾನ್ಮಾರ್‌, ಫಿಲಿಪ್ಪೀನ್ಸ್‌, ಕತಾರ್‌, ಸಿಂಗಪುರ, ಶ್ರೀಲಂಕಾ, ಒಮನ್‌, ತೈವಾನ್‌, ಥೈಲ್ಯಾಂಡ್‌, ಟರ್ಕಿ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಯುಕೆ ದೇಶಗಳಲ್ಲಿವೆ.  5 ಸ್ಟಾರ್‌ ಡೀಲಕ್ಸ್‌ ಸೌಲಭ್ಯಗಳನ್ನು ಈ ಹೋಟೆಲ್‌ ನೀಡಲಿದೆ. 

ಟೇಬಲ್‌ ಕಾಯ್ದಿರಿಸಲು:  (91 80) 4512 6420.

ಮೇಳ ನಡೆಯುವ ದಿನಾಂಕ: ಮಾರ್ಚ್‌ 17ರವರೆಗೆ

ಸ್ಥಳ–ಬಿ ಕೆಫೆ, ಶಾಂಗ್ರಿಲಾ ಹೋಟೆಲ್‌

ಮಧ್ಯಾಹ್ನದ ಊಟ: 12.30ರಿಂದ 3.30, ರಾತ್ರಿಯ ಊಟ–7ರಿಂದ 11

ಭಾನುವಾರ 12.30ರಿಂದ 3.30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !