ಈ ಬಾರಿ ರಾಮನವಮಿ ಮಾರ್ಚ್ 17ರಂದು ಆಚರಿಸಲಾಗುತ್ತಿದೆ. ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಭಕ್ತರು ದೇವಸ್ಥಾನಕ್ಕೆ ಹೋಗಿ ರಾಮನ ದರ್ಶನ ಮಾಡಿ ಪಾವನರಾಗುತ್ತಾರೆ. ಶ್ರೀ ರಾಮನವಮಿಯ ದಿನದಂದು ಮನೆಯಲ್ಲೇ ಕರ್ಬೂಜ ಪಾನಕವನ್ನು ಮಾಡುವುದು ಹೇಗೆ ಎಂದು ತಿಳಿಯೋಣ.
.‘ಧುರಂಧರ್ 2’ ವಿಶೇಷ: ಹತ್ತೇ ನಿಮಿಷದಲ್ಲಿ ದೂಧ್ ಸೋಡಾ ಪಾನೀಯ ಹೀಗೆ ತಯಾರಿಸಿ.ಯುಗಾದಿ ಹಬ್ಬ: ಉತ್ತರ ಕರ್ನಾಟಕದ ವಿಶೇಷ ಪಾನಕ ಹೀಗೆ ಮಾಡಿ.
ಕರ್ಬೂಜ ಹಣ್ಣಿನ ಪಾನಕ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

ಕರ್ಬೂಜ ಹಣ್ಣು, ಬೆಲ್ಲ, ಒಣ ಶುಂಠಿ, ಏಲಕ್ಕಿ

ಮಾಡುವ ವಿಧಾನ:

ಮೊದಲು ಕರ್ಬೂಜ ಹಣ್ಣಿನ ಬೀಜವನ್ನು ತೆಗೆಯಿರಿ. ಬಳಿಕ ಕರ್ಬೂಜ ಹಣ್ಣನ್ನು ತುಂಡಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಕತ್ತರಿಸಿಕೊಂಡ ಕರ್ಬೂಜ ಹಣ್ಣಿನ ತುಂಡುಗಳನ್ನು ಸಣ್ಣದಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ಬೆಲ್ಲ ಹಾಗೂ ನೀರು ಸೇರಿಸಿ. ಇದಾದ ಬಳಿಕ ಬೆಲ್ಲ, ಒಣ ಶುಂಠಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಅದಕ್ಕೆ ಕರ್ಬೂಜ ಹಣ್ಣಿನ ತುಂಡುಗಳು ಹಾಕಿದರೆ ಈಗ ಕರ್ಬೂಜ ಹಣ್ಣಿನ ಪಾನಕ ಸವಿಯಲು ಸಿದ್ಧ.

ಈ ಕರ್ಬೂಜ ಹಣ್ಣನ್ನು ಪ್ರತಿದಿನ ತಿನ್ನುವುದರಿಂದ ದೇಹಕ್ಕೆ ಹಲವು ಲಾಭಗಳು ದೊರೆಯುತ್ತವೆ. ಇದೊಂದು ರಸಭರಿತವಾದ ಹಣ್ಣಾಗಿದ್ದು, ಬೇಸಿಗೆಯಲ್ಲಿ ಸೇವಿಸಲು ಸೂಕ್ತವಾಗಿದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಒಳಗೊಂಡಿರುತ್ತದೆ. ಇದು ವಿವಿಧ ಪೋಷಕಾಂಶಗಳನ್ನು ಹೊಂದಿದೆ. ಫೈಬರ್, ಪ್ರೋಟೀನ್, ವಿಟಮಿನ್ ಎ, ಫೋಲೇಟ್ ಮತ್ತು ವಿಟಮಿನ್ ಸಿ ಇದೆ. ನಿಯಮಿತವಾಗಿ ಈ ಹಣ್ಣಿನ ಸೇವನೆಯಿಂದ ರಕ್ತದೊತ್ತಡ, ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬುದಾಗಿದೆ. ಜೊತೆಗೆ ತೂಕ ಇಳಿಕೆ, ಚರ್ಮ ಮತ್ತು ಕೇಶ ಸೌಂದರ್ಯವನ್ನು ಉತ್ತೇಜಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.