‘ಒಮ್ಮೆ ಈ ಗ್ರೇವಿ ಮಾಡಿ ನೋಡಿ; ಎರಡು ಚಪಾತಿ ತಿನ್ನೋರು ಎಂಟು ತಿಂತಾರೆ’, ‘ಕಾಲು ಕೆ.ಜಿ ಚಿಕನ್ ಇದ್ರೆ ಸಾಕು ಶೀತ, ನೆಗಡಿ, ಕೆಮ್ಮು ಮಾಯ’, ‘ಸಾವಿರಾರು ರೂಪಾಯಿ ಕೊಟ್ಟು ಪಿಜ್ಜಾ- ಬರ್ಗರ್ ಆರ್ಡರ್ ಮಾಡಬೇಡಿ; ಮನೆಯಲ್ಲೇ ಹೀಗೆ ಮಾಡಿ’, ‘ಒವೆನ್ ಇಲ್ಲದೇ ಸಾಫ್ಟ್ ಹಾಗೂ ಕ್ರೀಮಿ ಬ್ರೆಡ್ ಪುಡ್ಡಿಂಗ್ ಮಾಡೋಣ ಬನ್ನಿ’... ಹೀಗೆ ಆಕರ್ಷಕ ಟ್ಯಾಗ್ಲೈನ್ಗಳಿಂದಲೇ ಪಾಕಪ್ರಿಯರನ್ನು ತಮ್ಮ ಯೂಟ್ಯೂಬ್ ಚಾನೆಲ್ಗೆ ಆಹ್ವಾನವೀಯುವವರು ‘ತನು ಸ್ವಯಂ ಅಡುಗೆ’ ಯ ಒಡತಿ ವೀಣಾ ಎಂ. ಗಡ್ಡಿ.

ಸಸ್ಯಾಹಾರ, ಮಾಂಸಾಹಾರದ ಖಾದ್ಯಗಳು, ಸಿಹಿ ಖಾದ್ಯಗಳು, ತಂಪು ಪಾನೀಯಗಳು, ಬೇಕರಿ ಖಾದ್ಯಗಳು, ಐಸ್ಕ್ರೀಂ... ಹೀಗೆ ಎಲ್ಲ ಬಗೆಯ ಖಾದ್ಯಗಳನ್ನೂ ಸುಲಭವಾಗಿ, ಲಗುಬಗೆಯಲ್ಲಿ ತಯಾರಿಸುವ ವಿಧಾನವನ್ನು ಮನಮುಟ್ಟುವಂತೆ ಹೇಳಿಕೊಡುತ್ತಾರೆ ವೀಣಾ. ಸಾಂಪ್ರದಾಯಿಕ ಅಡುಗೆಗಳಿಂದ ಹಿಡಿದು ಸುಲಭದ ಸ್ಕ್ಯಾಕ್ಸ್ ರೆಸಿಪಿಗಳ ತನಕ ಎಲ್ಲವೂ ಬಾಯಲ್ಲಿ ನೀರೂರಿಸುತ್ತವೆ.

2018ರಲ್ಲಿ ಯೂಟ್ಯೂಬ್ಗೆ ಅಡಿ ಇಟ್ಟ ವೀಣಾ ಈವರೆಗೆ 2,000 ಖಾದ್ಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಪ್ರತಿ ರೆಸಿಪಿಯಲ್ಲೂ ಹೊಸತನ ಹುಡುಕುತ್ತ, ರೆಸಿಪಿ ತಯಾರಿಸುವಾಗ ಎದುರಾಗುವ ತೊಡಕುಗಳನ್ನು ನಿವಾರಿಸುವ ಬಗೆಯನ್ನು ಹೇಳಿಕೊಡುತ್ತ, ನಮ್ಮನ್ನು ಅಡುಗೆಗೆ ಅಣಿಗೊಳಿಸುತ್ತಾರೆ. ಹೊಸದಾಗಿ ಅಡುಗೆ ಕಲಿಯುವವರೂ ವೀಣಾ ಅವರ ವಿಧಾನದಲ್ಲಿ ಮಾಡಿದರೆ ಪರ್ಫೆಕ್ಟ್ ಸ್ವಾದ ಪಡೆಯಬಹುದು.

ಅವರು ಹೇಳಿಕೊಟ್ಟಿರುವ ಚಿಕನ್ ಗ್ರೇವಿ 75 ಲಕ್ಷ ವೀಕ್ಷಣೆ ಪಡೆದಿದೆ. ಹಳ್ಳಿ ಶೈಲಿಯಲ್ಲಿ ಚಿಕನ್ ಸಾಂಬಾರ್, ಮಂಗಳೂರು ಚಿಕನ್ ಸುಕ್ಕಾ, ಮಟನ್ ಕಲೊಂಜಿ, ಕೈಮಾ ಉಂಡೆ ಸಾರು, ಹೈದರಾಬಾದಿ ಚಿಕನ್ ಸಿಕ್ಸ್ಟಿಫೈ, ಚಟ್ಪಟ್ ಚಿಕನ್, ಚಿಕನ್ ಚಾಪ್ಸ್, ಚಿಕನ್ ಲಾಲಿಪಾಪ್, ತರಹೇವಾರಿ ಮೀನಿನ ಖಾದ್ಯಗಳು ಸೇರಿದಂತೆ ನೂರಾರು ಬಗೆಯ ನಾನ್ವೆಜ್ ರೆಸಿಪಿಗಳನ್ನು ಸುಲಭದಲ್ಲಿ ಮಾಡಿ ತೋರಿಸಿ ಮಾಂಸಾಹಾರ ಪ್ರಿಯರ ಜಿಹ್ವಾ ಚಾಪಲ್ಯ ಹೆಚ್ಚಿಸಿದ್ದಾರೆ. ತಯಾರಿಕೆಗೆ ಹೆಚ್ಚು ಸಮಯ ಬೇಡುವ, ಹೆಚ್ಚು ಮಸಾಲೆ ಪದಾರ್ಥ ಆಕರಿಸುವ ಮಾಂಸಾಹಾರದ ಖಾದ್ಯಗಳನ್ನೂ ಅತಿ ಬೇಗ ಮಾಡಿ ಹುಬ್ಬೇರುವಂತೆ ಮಾಡುತ್ತಾರೆ ವೀಣಾ.

ಧಾರವಾಡ ಜಿಲ್ಲೆಯ ಹೆಬ್ಬರಿನವರಾದ ವೀಣಾ ಸದ್ಯ ಪತಿಯ ಉದ್ಯೋಗದ ನಿಮಿತ್ತ ಶಿವಮೊಗ್ಗದಲ್ಲಿ ನೆಲಸಿದ್ದಾರೆ. ತಂದೆಯ ಕೃಷಿ ಕಾರ್ಯಗಳನ್ನು ನೋಡುತ್ತಾ ಬೆಳೆದ ಅವರಿಗೆ ಅಮ್ಮನ ಕೈರುಚಿ ತಿಂದಷ್ಟೇ ಗೊತ್ತಿತ್ತು. ಅಡುಗೆ ತಯಾರಿಯ ಲವಲೇಶವನ್ನೂ ಅರಿಯದಿದ್ದ ವೀಣಾ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿದ್ದು ಅದೇ ಅಡುಗೆಯೇ! ಮನೆಯಲ್ಲೇ ಇದ್ದುಕೊಂಡು ಏನಾದರೂ ಉದ್ಯೋಗ ಮಾಡಬೇಕೆಂದು ಅರಸುತ್ತಿದ್ದ ಅವರಿಗೆ ನೆರವಾದದ್ದು ಯೂಟ್ಯೂಬ್ನ ಒಂದು ವಿಡಿಯೊ. ಹೀಗೂ ಹಣ ಗಳಿಸಬಹುದು ಎನ್ನುವುದನ್ನು ಅರಿತ ಅವರು ಅಡುಗೆಯ ರೆಸಿಪಿಗಳನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲು ಶುರುಮಾಡಿದರು.

ವೀಣಾ ಅವರ ಸರಳ ಹಾಗೂ ಸ್ಫುಟವಾದ ಭಾಷೆ, ಅಚ್ಚುಕಟ್ಟಾದ ಅಡುಗೆ ರೆಸಿಪಿಗಳು ಬಹುಬೇಗ ಹೆಚ್ಚು ಜನರನ್ನು ತಲುಪಿ, ಆರ್ಥಿಕವಾಗಿಯೂ ಸ್ವಾವಲಂಬಿ
ಯಾದರು. ‘ವೀಣಾ ದಿನಚರಿ’ ಎಂಬ ಬ್ಲಾಗ್ ಅನ್ನೂ ಅವರು ಶುರುಮಾಡಿದ್ದಾರೆ.

ನೆಗಡಿಗೆ ಮದ್ದು ಚಿಕನ್ ಶೋರ್ಬಾ

ನೆಗಡಿ, ಕೆಮ್ಮು, ಶೀತ ಆದವರು ಐದು ನಿಮಿಷದಲ್ಲೇ ರುಚಿಕರವಾದ ಚಿಕನ್ ಶೋರ್ಬಾ ಮಾಡಿ ಸವಿಯಿರಿ ಎನ್ನುತ್ತಾರೆ ವೀಣಾ.

ಹೀಗೆ ಮಾಡಿ: (1/4 ಕೆ.ಜಿ. ಚಿಕನ್ಗೆ ಬೇಕಾಗುವಷ್ಟು ಅಳತೆಯನ್ನು ಇಲ್ಲಿ ಹೇಳಲಾಗಿದೆ

ಸಾಂಬಾರ್ ಈರುಳ್ಳಿ 10– 15, ಬೆಳ್ಳುಳ್ಳಿ– 4–5 ಎಸಳು, ಶುಂಠಿ ಒಂದು ಇಂಚು, ಮೆಣಸು- ಒಂದು ಚಮಚ, ಜೀರಿಗೆ- ಒಂದು ಚಮಚ, ಹಸಿಮೆಣಸಿನ ಕಾಯಿ- ನಾಲ್ಕು, ಒಂದು ಹಿಡಿಯಷ್ಟು ಪುದಿನಾ, ಕೊತ್ತಂಬರಿ ಸೊಪ್ಪು. ಇವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು.
ಬಳಿಕ ಕುಕ್ಕರ್ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ನಾಲ್ಕು ಲವಂಗ, ಸ್ವಲ್ಪ ಚಕ್ಕೆ, ಒಂದು ಏಲಕ್ಕಿ ಹಾಕಬೇಕು. ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಬಾಡಿಸಿಕೊಂಡು, ತೊಳೆದಿಟ್ಟು
ಕೊಂಡಿರುವ ಚಿಕನ್ ಹಾಕಿ ಬೇಯಿಸಬೇಕು. ಬಳಿಕ ಅದಕ್ಕೆ ಒಂದು ಚಮಚ ಅರಸಿನ ಪುಡಿ, ರುಚಿಗೆ ಉಪ್ಪು, ಒಂದು ಚಮಚ ಚಿಕನ್ ಮಸಾಲ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, 2ರಿಂದ 3 ನಿಮಿಷ ಫ್ರೈ ಮಾಡಬೇಕು. ನಂತರ ರುಬ್ಬಿಟ್ಟುಕೊಂಡಿದ್ದ ಮಸಾಲೆ ಹಾಕಿ, ಎರಡು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಅದಕ್ಕೆ ಅರ್ಧ ಹೋಳು ನಿಂಬೆರಸ ಹಿಂಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಕುಕ್ಕರ್ ಮುಚ್ಚಿ ಎರಡು ವಿಶಲ್ ಬರಿಸಬೇಕು. ಕುಕ್ಕರ್ ತಣಿದಾದ ಬಳಿಕ ಚಿಕನ್ ಶೋರ್ಬಾ ಅಥವಾ ಚಿಕನ್ ಸೂಪ್ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.