ಬದನೆಕಾಯಿ ಇಲ್ಲದ ತೊಂಡೆಕಾಯಿ ವಾಂಗಿಭಾತ್‌!

7

ಬದನೆಕಾಯಿ ಇಲ್ಲದ ತೊಂಡೆಕಾಯಿ ವಾಂಗಿಭಾತ್‌!

Published:
Updated:

ತೊಂಡೆಕಾಯಿ ವಾಂಗಿಭಾತ್‌
ಬೇಕಾಗುವ
ಸಾಮಗ್ರಿಗಳು: ಅಕ್ಕಿ – 1ಕಪ್‌, ಒಣಕೊಬ್ಬರಿ ತುರಿ – 2ಚಮಚ, ಉಪ್ಪು – ರುಚಿಗೆ, ಒಣಮೆಣಸಿನಕಾಯಿ – 5, ಉದ್ದಿನ ಬೇಳೆ – 1ಚಮಚ, ಕಡ್ಲೆಬೇಳೆ – 1ಚಮಚ, ದನಿಯಾ –1ಚಮಚ, ಗರಂಮಸಾಲೆಪುಡಿ – 1/2ಚಮಚ, ನಿಂಬೆರಸ – 1ಚಮಚ, ಸಾಸಿವೆ – 1/4ಚಮಚ, ಕರೀಬೇವು – 1ಕಡ್ಡಿ, ಎಣ್ಣೆ – 5ರಿಂದ 6ಚಮಚ, ತೊಂಡೆಕಾಯಿ ಉದ್ದಕ್ಕೆ ಹೆಚ್ಚಿದ ಹೋಳುಗಳು – 3/4ಕಪ್‌.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ಅನ್ನ ಮಾಡಿಕೊಳ್ಳಬೇಕು. ಅನ್ನದ ಪಾತ್ರೆಯ ಮುಚ್ಚಳದ ಮೇಲೆ ತೊಂಡೆಕಾಯಿಯನ್ನು ಇಟ್ಟು ಬೇಯಿಸಿಟ್ಟುಕೊಳ್ಳಬೇಕು. ಕಡ್ಲೆಬೇಳೆ, ಉದ್ದಿನಬೇಳೆಯನ್ನು ಚಿಟಿಕೆ ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಬೇಕು ಮತ್ತು ದನಿಯಾ, ಕೆಂಪುಮೆಣಸನ್ನು ಸಹ ಚಿಟಿಕೆ ಎಣ್ಣೆಯಲ್ಲಿ ಹುರಿದು ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಬೇಕು. ತೊಗರಿಬೇಳೆ ಹಾಗೂ ಉದ್ದಿನ ಬೇಳೆಯನ್ನು ಸ್ಪಲ್ಪ ತರಿಯಾಗಿ ಪುಡಿ ಮಾಡಬೇಕು. ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಕರೀಬೇವನ್ನು ಸಿಡಿಸಿ ಬೆಂದ ತೊಂಡೆಹೋಳುಗಳನ್ನು ಸೇರಿಸಿ ಚೆನ್ನಾಗಿ ಹುರಿದು ತಯಾರಾದ ಪುಡಿಗಳನ್ನು ಒಂದರ ನಂತರ ಒಂದನ್ನು ಸೇರಿಸಿ ಕೆದಕಿ ಮಸಾಲೆ ಪೌಡರ್ ಹಾಗೂ ಒಣಕೊಬ್ಬರಿ ತುರಿಯನ್ನು ಹಾಕಿ ಕೆದಕಿ ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಕಲೆಸಿ ತಣಿದ ಅನ್ನದೊಂದಿಗೆ ಕಲೆಸಿದರೆ ರುಚಿಯಾದ ವಾಂಗಿಭಾತ್ ಸವಿಯಲು ಸಿದ್ಧ.

*

ಮಜ್ಜಿಗೆಹುಳಿ
ಬೇಕಾಗುವ ಸಾಮಗ್ರಿಗಳು:
ಬೆಂದ ತೊಂಡೆಕಾಯಿ ಹೋಳುಗಳು – 3/4ಕಪ್‌, ಮಜ್ಜಿಗೆ – ಸಾಕಷ್ಟು, ರುಚಿಗೆ – ಉಪ್ಪು, ಹುರಿಗಡಲೆ – 1, 1/4ಚಮಚ, ಇಂಗು – ಚಿಟಿಕೆ, ಒಣಮೆಣಸು – 2, ಕಾಳುಮೆಣಸು – 5ರಿಂದ 6, ಜೀರಿಗೆ – 1/4ಚಮಚ, ತೆಂಗಿನ ತುರಿ – 1/4ಕಪ್‌, ಅರಿಸಿನಪುಡಿ – ಚಿಟಿಕೆ, ಕರೀಬೇವು – 1ಕಡ್ಡಿ, ಸಾಸಿವೆ – 1/4ಚಮಚ, ಎಣ್ಣೆ – 1/4ಚಮಚ ಹಾಗೂ ಕೊತ್ತಂಬರಿ ಸೊಪ್ಪು – 1ಕಡ್ಡಿ

ತಯಾರಿಸುವ ವಿಧಾನ: ಒಣಮೆಣಸು, ಹುರಿಗಡಲೆ, ಕಾಯಿತುರಿ, ಅರಿಸಿನಪುಡಿ, ಇಂಗು, ಜೀರಿಗೆ, ಕಾಳುಮೆಣಸು, ಕೊತ್ತಂಬರಿಸೊಪ್ಪು, ರುಬ್ಬಿ ಬೆಂದ ಹೋಳಿಗೆ ಸೇರಿಸಿ ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಮಜ್ಜಿಗೆ ಕರೀಬೇವು ಹಾಗೂ ಸಾಸಿವೆಯನ್ನು ಒಗ್ಗರಿಸಿ ಸೇರಿಸಿ ಒಂದು ಕುದಿ ಕುದಿಸಿದರೆ ಮಜ್ಜಿಗೆಹುಳಿಯನ್ನು ಸವಿಯಲು ಸಿದ್ಧ.

*

ತೊಂಡೆಕಾಯಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿಗಳು: ತೊಂಡೆಕಾಯಿಯ ಹೋಳುಗಳು – 3/4ಕಪ್‌, ರುಚಿಗೆ – ಉಪ್ಪು, ಒಣಮೆಣಸಿನ ಪುಡಿ – 1, 1/2ಚಮಚ, ಇಂಗು – ಸ್ವಲ್ಪ, ಮೆಂತ್ಯ – 1/4ಚಮಚ, ಸಾಸಿವೆ – ಸ್ವಲ್ಪ

ತಯಾರಿಸುವ ವಿಧಾನ: ತೊಂಡೆಕಾಯಿಯ ಹೋಳುಗಳನ್ನು ಚೆನ್ನಾಗಿ ತೊಳೆದು ಬಟ್ಟೆಯ ಮೇಲೆ ಹಾಕಿ ನೀರಿನಂಶ ಹೋದ ಮೇಲೆ ಹೋಳುಗಳಿಗೆ ಉಪ್ಪು ಮೆಣಸಿನ ಪುಡಿ ಹಾಕಿ ಚಮಚದಲ್ಲಿ ಬೆರೆಸಿ. ಸಾಸಿವೆ ಮೆಂತ್ಯವನ್ನು ಹುರಿದು ನುಣ್ಣಗೆ ಪುಡಿ ಮಾಡಿ ಹೋಳುಗಳಿಗೆ ಸೇರಿಸಿ ಹಾಗೂ ಇಂಗನ್ನು ಸೇರಿಸಿ ಚೆನ್ನಾಗಿ ಬೇರೆಸಿ ಕೊನೆಗೆ ಎಣ್ಣೆಯಲ್ಲಿ ಸಾಸಿವೆಯನ್ನು ಒಗ್ಗರಿಸಿ ತಣಿದ ನಂತರ ಸೇರಿಸಿ ಬೆರೆಸಿದರೆ ಉಪ್ಪಿನಕಾಯಿ ಸಿದ್ಧ.

*

ತೊಂಡೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1ಕಪ್‌, ಉದ್ದಿನಬೇಳೆ – 1, 1/2ಚಮಚ, ಮೆಂತ್ಯ – 1/4ಚಮಚ, ರುಚಿಗೆ – ಉಪ್ಪು, ಎಣ್ಣೆ – 1ಚಮಚ, ತೊಂಡೆಕಾಯಿ – 5

ತಯಾರಿಸುವ ವಿಧಾನ: ಅಕ್ಕಿಯನ್ನು ನಾಲ್ಕು ಗಂಟೆ ನೆನೆಡಿಸಿ, ಮೆಂತ್ಯ, ಉದ್ದಿನಬೇಳೆಯನ್ನು ಬೇರೆ ನೆನೆಸಬೇಕು. ಮೂರನ್ನು ಒಟ್ಟಿಗೆ ಸೇರಿಸಿ ನುಣ್ಣಗೆ ದೋಸೆಯ ಹಿಟ್ಟಿನ ಹದಕ್ಕೆ ರುಬ್ಬಿ ಕೊನೆಗೆ ಚೂರು ಮಾಡಿದ ತೊಂಡೆಕಾಯಿ ಹಾಗೂ ಉಪ್ಪನ್ನು ಸೇರಿಸಿ ಎರಡು ಸಲ ಮಿಕ್ಸಿಯನ್ನು ತಿರುಗಿಸಿ ಮೂರನೇ ದಿನ ದೋಸೆ ಹಂಚಿನ ಮೇಲೆ ಹಾಕಿ ಎರಡೂ ಬದಿ ತುಪ್ಪ, ಎಣ್ಣೆ ಹಾಕಿ ಕಾಯಿಸಿದರೆ ಸವಿಯಲು ಸಿದ್ಧ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !