ಯುಗಾದಿಯು ಹೊಸ ವರುಷದ ಹೊಸ ಹರುಷದೊಂದಿಗೆ ಬರುವ ಮೊದಲ ಹಬ್ಬ. ಊರು ಬಿಟ್ಟು ಕೆಲಸಕ್ಕೆ ಬೇರೆಡೆ ಹೋಗಿರುವವರೆಲ್ಲಾ ಹಬ್ಬಕ್ಕೆ ಊರಿಗೆ ಬರುತ್ತಾರೆ. ಮಾರನೆಯ ದಿನ ವರ್ಷತೊಡಕಿನ ನೆಪದಲ್ಲಿ ಗುಂಡು– ತುಂಡಿನೊಂದಿಗೆ, ಜೂಜು, ಮೋಜು– ಮಸ್ತಿಯಲ್ಲಿ ತೇಲುತ್ತಾರೆ. ವರ್ಷದ ಮೊದಲ ದಿನ ಸಂತೋಷವಾಗಿ ಇದ್ದರೆ ವರ್ಷಪೂರ್ತಿ ಸಂತೋಷದಿಂದ ಇರುತ್ತೇವೆ ಎಂಬುದು ಹಳ್ಳಿಗರ ನಂಬಿಕೆ. ವರ್ಷತೊಡಕನ್ನು ವರ್ಷತೊಡಗು, ಹೊಸತೊಡಕು, ವರ್ಷತುಡುಕು ಎಂದೆಲ್ಲ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ.

ನಾನು ಚಿಕ್ಕವನಾಗಿದ್ದಾಗ ಗುಡ್ಡೆ ಬಾಡಿಗಾಗಿ ಬಕೆಟ್/ಟಿಫಿನ್ ಕ್ಯಾರಿಯರ್ ಹಿಡಿದುಕೊಂಡು ತಂದೆಯೊಡನೆ ಹೋಗುತ್ತಿದ್ದದ್ದು ನೆನಪಿದೆ. ಹಳ್ಳಿಗಳಲ್ಲಿ ಆಗ ಮಾಂಸದ ಅಂಗಡಿಗಳು ಇರುತ್ತಿರಲಿಲ್ಲ. ಹಳ್ಳಿಗರು ಒಟ್ಟಿಗೆ ಸೇರಿ ದುಡ್ಡು ಹಾಕಿ ಕುರಿ, ಮೇಕೆ ಅಥವಾ ಹಂದಿಯನ್ನು ಸಂತೆಯಿಂದ ಖರೀದಿಸಿ ತಂದು, ಬೆಳಗಿನ ಜಾವ ಕತ್ತರಿಸಿ, ಕಣ್ಣಿನ ಅಂದಾಜಿನಲ್ಲಿ, ಪ್ರಾಣಿಯ ತೂಕದ ಅನುಸಾರ ಪಾಲು ಹಾಕುತ್ತಿದ್ದರು. ಈಗಲೂ ಕೆಲವೆಡೆ ಗುಡ್ಡೆ ಮಾಂಸ ಖರೀದಿಯ ಪದ್ಧತಿ ಇದೆ. ಇಂತಲ್ಲಿ ಪ್ರತಿ ಗುಡ್ಡೆಗೂ ಮಾಂಸದ ಎಲ್ಲಾ ಭಾಗಗಳು, ಅಂದರೆ ತಲೆಭಾಗ, ಕೀಲುಮೂಳೆ, ಯಕೃತ್ತು, ಹೃದಯ, ತೊಡೆಮಾಂಸ, ಪಕ್ಕೆಲುಬು ಇತ್ಯಾದಿಗಳನ್ನು ತುಂಡುಗಳಾಗಿ ಕತ್ತರಿಸಿ ಸೇರಿಸುತ್ತಾರೆ. ಆದ್ದರಿಂದಲೇ ಗುಡ್ಡೆಮಾಂಸದ ಖಾದ್ಯಗಳು ಬಲು ರುಚಿ. ಅಂತಹ ಮಾಂಸದಿಂದ
ತಯಾರಿಸಬಹುದಾದ ಕೆಲವು ಖಾದ್ಯಗಳ ರೆಸಿಪಿ ಇಲ್ಲಿದೆ:

ಕೋಳಿ ಬೆರಕೆ ಮಾಂಸದ ಗೊಜ್ಜು

ಬೇಕಾಗುವ ಸಾಮಗ್ರಿ: ಕೋಳಿ ಬೆರಕೆ ಮಾಂಸ (ಜಠರ/ ಗಿಝರ್ಡ್, ಲಿವರ್, ಎಳೆ ಮೊಟ್ಟೆ, ಮೊಟ್ಟೆ ಚೀಲ) 1 ಕೆ.ಜಿ, ಕಡಲೆಕಾಳು 100 ಗ್ರಾಂ, ಆಲೂಗಡ್ಡೆ 100 ಗ್ರಾಂ, ಶುಂಠಿ 2 ಇಂಚು, ಬೆಳ್ಳುಳ್ಳಿ 1 ಉಂಡೆ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಸ್ವಲ್ಪ, ಈರುಳ್ಳಿ 2, ಟೊಮೆಟೊ 1, ಗರಂ ಮಸಾಲೆ 1 ಚಮಚ, ದನಿಯಾ ಪುಡಿ 2 ಚಮಚ, ಮೆಣಸಿನಕಾಯಿ ಪುಡಿ 2 ಚಮಚ, ಅರಸಿನ ಸ್ವಲ್ಪ, ತೆಂಗಿನಕಾಯಿ 1/2 ಹೋಳು, ಎಣ್ಣೆ, ಸಾಸಿವೆ, ಉಪ್ಪು.

ತಯಾರಿಸುವ ವಿಧಾನ–ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದೀನ, ಅರಸಿನ ಪುಡಿ, ಶುಂಠಿ- ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ.

ಕಾಯಿ ಮಸಾಲೆಗೆ: ಕಾಯಿ, ಗರಂ ಮಸಾಲೆ, ಟೊಮೆಟೊ, ದನಿಯಾ, ಮೆಣಸಿನಕಾಯಿ ಪುಡಿ ಹಾಕಿ ರುಬ್ಬಿಕೊಳ್ಳಿ.

ಕುಕ್ಕರ್ಗೆ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಸಿಡಿಸಿ, ಚೆನ್ನಾಗಿ ತೊಳೆದ ಬೆರಕೆ ಮಾಂಸ, ಈರುಳ್ಳಿ ಖಾರ ಮತ್ತು ಉಪ್ಪನ್ನು ಹಾಕಿ ಸ್ವಲ್ಪ ಫ್ರೈ ಮಾಡಿ, 2 ವಿಷಲ್ ಕೂಗಿಸಿ. ಆರಿದ ನಂತರ ಮುಚ್ಚಳ ತೆಗೆದು, ನೆನೆಸಿದ ಕಡಲೆಕಾಳು, ಕತ್ತರಿಸಿದ ಆಲೂಗಡ್ಡೆ, ಕಾಯಿಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ.

ಚಿಕನ್ ಗಿಝರ್ಡ್ ಡ್ರೈ

ಬೇಕಾಗುವ ಸಾಮಗ್ರಿ: ಚಿಕನ್ ಗಿಝರ್ಡ್ 1 ಕೆ.ಜಿ, ಈರುಳ್ಳಿ 3, ಟೊಮೆಟೊ 2, ಹಸಿಮೆಣಸಿನಕಾಯಿ 8, ಕರಿಬೇವು 1 ಕಡ್ಡಿ, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ಸ್ವಲ್ಪ, ಶುಂಠಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ 3 ಉಂಡೆ, ದನಿಯಾ ಪುಡಿ 6 ಚಮಚ, ಮೆಣಸಿನಕಾಯಿ ಪುಡಿ 1 ಚಮಚ, ಅರಸಿನ ಸ್ವಲ್ಪ, ಪೆಪ್ಪರ್ ಪುಡಿ 1 ಚಮಚ, ಗರಂ ಮಸಾಲೆ ಸ್ವಲ್ಪ, ಎಣ್ಣೆ, ಸಾಸಿವೆ, ಉಪ್ಪು.

ಮಾಡುವುದು ಹೇಗೆ? : ಚೆನ್ನಾಗಿ ತೊಳೆದ ಚಿಕನ್ ಗಿಝರ್ಡ್, ಸ್ವಲ್ಪ ಅರಸಿನ, ಮೆಣಸಿನಕಾಯಿ ಪುಡಿ ಮತ್ತು ಉಪ್ಪನ್ನು ಬೆರೆಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ದನಿಯಾ ಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿದ ಮೇಲೆ ಶುಂಠಿ ಪೇಸ್ಟ್, ಕತ್ತರಿಸಿದ ಟೊಮೆಟೊ, ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಹಾಕಿ, ಸ್ವಲ್ಪ ಬೆಂದ ನಂತರ, ಬೇಯಿಸಿರುವ ಚಿಕನ್ ಗಿಝರ್ಡ್ ಮಾತ್ರ ಹಾಕಿದ ಮೇಲೆ (ಬೆಂದ ನೀರನ್ನು ಹಾಕಬೇಡಿ) ಉಪ್ಪು, ಪೆಪ್ಪರ್ ಪುಡಿ, ಗರಂ ಮಸಾಲೆ ಹಾಕಿ ಬೇಯಲು ಬಿಡಿ. ನಂತರ ಸಣ್ಣ ಉರಿ ಮಾಡಿ, ಹುರಿದ ದನಿಯಾ ಪುಡಿ ಹಾಕಿ ಚೆನ್ನಾಗಿ ತಿರುಗಿಸಿ ಸ್ವಲ್ಪ ಬೇಯಿಸಿ.

ಚಿಕನ್ ತವಾ ಫ್ರೈ

ಬೇಕಾಗುವ ಪದಾರ್ಥ: ಬೋನ್ಲೆಸ್ ಚಿಕನ್ 1/2 ಕೆ.ಜಿ, ಮೆಣಸಿನಕಾಯಿ ಪುಡಿ 2 ಚಮಚ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಉಪ್ಪು, ಎಣ್ಣೆ, ಗರಂ ಮಸಾಲೆ ಸ್ವಲ್ಪ, ಅರಸಿನಪುಡಿ ಸ್ವಲ್ಪ, ನಿಂಬೆಹಣ್ಣು 1/2 ಹೋಳು.

ಮಾಡುವ ವಿಧಾನ: ಚೆನ್ನಾಗಿ ತೊಳೆದ ಚಿಕನ್ಗೆ ಮೆಣಸಿನಕಾಯಿ ಪುಡಿ, ನಿಂಬೆರಸ, ಗರಂ ಮಸಾಲೆ, ಅರಸಿನ, ಉಪ್ಪನ್ನು ಹಾಕಿ ಕಲಸಿ ಒಂದು ಗಂಟೆ ಫ್ರಿಜ್ನಲ್ಲಿಡಿ. ತವಾಗೆ ಎಣ್ಣೆ ಹಾಕಿ, ಕಲಸಿದ ಚಿಕನ್ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ.

ಎಳೆಮೊಟ್ಟೆ ಗೊಂಚಲು ಫ್ರೈ

ಬೇಕಾಗುವ ಸಾಮಗ್ರಿ: ಬೇಬಿ/ಎಳೆ ಮೊಟ್ಟೆ ಗೊಂಚಲು ಐದು, ಶುಂಠಿ ಮೂರು ಇಂಚು, ಬೆಳ್ಳುಳ್ಳಿ ಒಂದು ಉಂಡೆ, ಕರಿಬೇವು ಎರಡು ಕಡ್ಡಿ, ಕೊತ್ತಂಬರಿ
ಸೊಪ್ಪು, ಪುದೀನಾ ಸ್ವಲ್ಪ, ಗರಂ ಮಸಾಲೆ ಒಂದು ಚಮಚ, ದನಿಯಾ ಪುಡಿ ಒಂದು ಚಮಚ, ಮೆಣಸಿನಕಾಯಿ ಪುಡಿ ಎರಡು ಚಮಚ, ಅರಸಿನ ಸ್ವಲ್ಪ, ಈರುಳ್ಳಿ ಮೂರು, ಟೊಮೆಟೊ ಎರಡು, ತೆಂಗಿನಕಾಯಿ ಕಾಲು ಹೋಳು, ಎಣ್ಣೆ, ಉಪ್ಪು.

ತಯಾರಿಸುವ ವಿಧಾನ: ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ, ಕತ್ತರಿಸಿದ ಒಂದು ಈರುಳ್ಳಿ, ಒಂದು ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಪುದೀನಾ, ತೆಂಗಿನತುರಿ ಹಾಕಿ ಫ್ರೈ ಮಾಡಿ, ನಂತರ ದನಿಯಾ ಪುಡಿ, ಮೆಣಸಿನಕಾಯಿ ಪುಡಿ ಮತ್ತು ಗರಂ ಮಸಾಲೆ ಹಾಕಿ ಸ್ವಲ್ಪ ಫ್ರೈ ಮಾಡಿ, ಆರಿದ ನಂತರ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.
ತೆರೆದ ಪಾತ್ರೆಗೆ ಎಣ್ಣೆ ಹಾಕಿ, ಕಾದ ನಂತರ ಈರುಳ್ಳಿಯನ್ನು ಕಂದು ಬಣ್ಣ ಬರುವ ತನಕ ಫ್ರೈ ಮಾಡಿದ ಮೇಲೆ ಟೊಮೆಟೊ, ಅರಸಿನ, ಉಪ್ಪು, ರುಬ್ಬಿದ ಮಸಾಲೆ ಹಾಕಿ, ಎಣ್ಣೆ ಬಿಡುವ ತನಕ ಫ್ರೈ ಮಾಡಿ. ಆಮೇಲೆ ತೊಳೆದ ಬೇಬಿ ಮೊಟ್ಟೆ ಗೊಂಚಲು ಹಾಕಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವನ್ನು ಹಾಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.