ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಿಪಿ: ಹೊಸ ರುಚಿಯ ಮೊಟ್ಟೆ ಖಾದ್ಯಗಳು

Last Updated 24 ಡಿಸೆಂಬರ್ 2022, 2:49 IST
ಅಕ್ಷರ ಗಾತ್ರ

ಮೊಟ್ಟೆಯಿಂದ ಆಮ್ಲೆಟ್‌, ಎಗ್‌ಬುರ್ಜಿ, ಎಗ್‌ರೈಸ್‌ನಂತಹ ಖಾದ್ಯಗಳ ಬಗ್ಗೆ ಗೊತ್ತೇ ಇರುತ್ತದೆ. ಆದರೆ, ಮೊಟ್ಟೆಯಿಂದ ದೋಸೆ, ಮ್ಯಾಗಿ, ಒಂದಷ್ಟು ಕುರುಕಲು ತಿಂಡಿ ಮಾಡಬಹುದು ಗೊತ್ತಾ ? ಅಂಥ ವಿಶೇಷವಾದ ಮೊಟ್ಟೆ ಖಾದ್ಯದ ರೆಸಿಪಿಗಳನ್ನು ಇಲ್ಲಿ ತಿಳಿಸಿದ್ದಾರೆ ದೀಪಕ್‌ ಎನ್‌.

ದೋಸೆ

ಬೇಕಾಗುವ ಸಾಮಗ್ರಿಗಳು: 1 ಕಪ್ ದೋಸೆ ಹಿಟ್ಟು, 2 ಮೊಟ್ಟೆ, ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಮೆಣಸು ಪುಡಿ, ಹೆಚ್ಚಿಕೊಂಡ ಈರುಳ್ಳಿ, ಅರ್ಧ ಕಪ್ ಕೊತ್ತಂಬರಿ ಸೊಪ್ಪು, 3 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ಎಣ್ಣೆ.

ಮಾಡುವ ವಿಧಾನ: ಹಂಚನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ದೋಸೆ ಹಿಟ್ಟನ್ನು ಹಂಚಿನ ಮೇಲೆ ಹಾಕುವ ಮುನ್ನ ಉರಿಯನ್ನು ಕಡಿಮೆ ಇಟ್ಟುಕೊಳ್ಳಬೇಕು. ಬಳಿಕ ಬೇಕಾದ ಗಾತ್ರದಲ್ಲಿ ದೋಸೆ ಹಾಕಿ. ಅದರ ಮೇಲೆ ಹೆಚ್ಚಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ ಒಂದು ಮೊಟ್ಟೆ ಹೊಡೆದು ಚೆನ್ನಾಗಿ ಮಿಶ್ರಣ ಮಾಡಿ. ಬೆಣ್ಣೆ ಅಥವಾ ಎಣ್ಣೆ ಹಾಕಿ ಗರಿಗರಿಯಾಗಿ ಬೇಯಿಸಿ. ಎರಡೂ ಕಡೆ ಚೆನ್ನಾಗಿ ಬೆಂದ ಮೇಲೆ ತೆಗೆಯಿರಿ. ಇದು ಚಟ್ನಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

ಸ್ನ್ಯಾಕ್ಸ್‌

ಬೇಕಾದ ಸಾಮಗ್ರಿಗಳು: ಎರಡು ತುರಿದ ಆಲೂಗಡ್ಡೆ, ಒಂದು ಮೊಟ್ಟೆ, ಎರಡು ಚಮಚ ಗೋಧಿ ಹಿಟ್ಟು, ಅರ್ಧ ಚಮಚ ಮೆಣಸಿನ ಪುಡಿ, ಕಾಲು ಚಮಚ ಖಾರದಪುಡಿ, ಕಾಲು ಚಮಚ ಅರಿಶಿಣ ಪುಡಿ, ಅರ್ಧ ಚಮಚ ಗರಂ ಮಸಾಲ, ಕೊತ್ತಂಬರಿ ಸೊಪ್ಪು, ಬೇಕೆನಿಸಿದರೆ ಈರುಳ್ಳಿ, ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಪಾತ್ರೆಯಲ್ಲಿ ತುರಿದ ಆಲೂಗಡ್ಡೆ, ಒಂದು ಮೊಟ್ಟೆ, ಗೋಧಿ ಇಟ್ಟು, ಮೆಣಸಿನ ಪುಡಿ, ಖಾರದಪುಡಿ, ಗರಂ ಮಸಾಲಾ, ಅರಿಶಿನ ಪುಡಿ, ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಬೇಕು ಇದಕ್ಕೆ ನೀರಿನ ಅಗತ್ಯ ಇರುವುದಿಲ್ಲ ರುಚಿಗೆ ತಕ್ಕಷ್ಟು ಉಪ್ಪು –ಖಾರ ಸೇರಿಸಿ ಮಿಶ್ರಣ ಮಾಡಬೇಕು. ವಡೆ ತರ ಪ್ರೆಸ್ ಮಾಡಿಕೊಂಡು ದೋಸೆ ತಾವಾದ ಮೇಲೆ ಎಣ್ಣೆಯೊಂದಿಗೆ ಫ್ರೈ ಮಾಡಬೇಕು. ಕೆಂಪು ಬಣ್ಣಕ್ಕೆ ತಿರುಗದ ತಕ್ಷಣ ತೆಗೆದುಕೊಳ್ಳಬೇಕು. ಇಲ್ಲಿಗೆ ಮೊಟ್ಟೆ ಸ್ನ್ಯಾಕ್ಸ್ ಸಿದ್ದವಾಗಿದೆ. ಟಮೊಟೊ ಕೆಚಪ್ ಜೊತೆ ಮೊಟ್ಟೆ ಸ್ನ್ಯಾಕ್ ತಿನ್ನುವುದಕ್ಕೆ ಬಲು ರುಚಿಕರ.

ಮ್ಯಾಗಿ

ಬೇಕಾದ ಸಾಮಗ್ರಿಗಳು: ಒಂದು ಮ್ಯಾಗಿ ಪ್ಯಾಕೆಟ್, ಎರಡು ಮೊಟ್ಟೆ, ಹೆಚ್ಚಿದ ಟೊಮೆಟೊ, ಈರುಳ್ಳಿ, ಕ್ಯಾರೆಟ್, ಕರಿಬೇವು, ಮ್ಯಾಗಿ ಮಸಾಲ ಪೌಡರ್, ಕೊತ್ತಂಬರಿ ಸೊಪ್ಪು, ಅರ್ಧ ಕಪ್ ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚ ಅರಿಶಿಣ, ಒಂದು ಚಮಚ ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಗ್ಗರಣೆಗೆ ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಪಾತ್ರ ಎಲ್ಲಿ ನೀರನ್ನು ಕಾಯಿಸಿಕೊಳ್ಳಬೇಕು ನೀರು ಚೆನ್ನಾಗಿ ಬಿಸಿಯಾದ ಬಳಿಕ ಮ್ಯಾಗಿಯನ್ನು ಪುಡಿ ಮಾಡಿಕೊಂಡು ಹಾಕಿಕೊಳ್ಳಬೇಕು. ಮ್ಯಾಗಿ ಅರ್ಧ ಭಾಗ ಬೆಂದ ಮೇಲೆ ಅರ್ಧ ಪ್ಯಾಕೆಟ್ ಮ್ಯಾಗಿ ಪೌಡರ್ ಹಾಕಿಕೊಂಡು ಚೆನ್ನಾಗಿ ಬೇಯುವಂತೆ ನೋಡಿಕೊಳ್ಳಬೇಕು. ಜತೆಗೆ ಪಕ್ಕದಲ್ಲಿ ಮತ್ತೊಂದು ಪಾತ್ರೆಯಲ್ಲಿ ಒಗ್ಗರಣೆ ತಯಾರಿ ಮಾಡಿಕೊಳ್ಳಬೇಕು. ಎರಡು ಚಮಚ ಎಣ್ಣೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಕ್ಯಾರೆಟ್, ಬೀನ್ಸ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವು ಬೇಕೆನಿಸಿದರೆ ಕ್ಯಾಪ್ಸಿಕಂ, ಬಟಾಣಿ ಹಾಕಿಕೊಳ್ಳಬಹುದು. ಜತೆಗೆ ರುಚಿಗೆ ತಕ್ಕಷ್ಟು ಉಪ್ಪು ಅದೇ ಬನಾಲಿಯಲ್ಲಿ ಮೊಟ್ಟೆಯನ್ನು ಹುರಿದುಕೊಳ್ಳಬೇಕು. ಬಳಿಕ ಒಗ್ಗರಣೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಬೇಯಿಸಿದ ಮ್ಯಾಗಿಯನ್ನು ಒಗ್ಗರಣೆಯೊಂದಿಗೆ ಸೇರಿಸಿ ಮಿಶ್ರಣ ಮಾಡಬೇಕು ಈಗ ಮೊಟ್ಟೆ ಮ್ಯಾಗಿ ತಿನ್ನಲು ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT