ಹಸಿಮೆಣಸಿನ ಚಪಾತಿ ಪ್ರಿಯೆ

7

ಹಸಿಮೆಣಸಿನ ಚಪಾತಿ ಪ್ರಿಯೆ

Published:
Updated:
Deccan Herald

ಅಡುಗೆ ಮಾಡುವುದು ಒಂದು ಕಲೆ. ಆ ಕಲೆ ಒಮ್ಮೆ ಸಿದ್ಧಿಸಿದರೆ ಸಾಕು, ಕ್ಷಣಮಾತ್ರದಲ್ಲಿ ರುಚಿರುಚಿಯಾದ ಅಡುಗೆಗಳನ್ನು ಮಾಡುವಷ್ಟು ನಾವು ನಿಪುಣರಾಗುತ್ತೇವೆ. ನಾನು ಅಡುಗೆಪ್ರಿಯೆ. ಚಿಕ್ಕ ವಯಸ್ಸಿನಲ್ಲೇ ನಾನು ಅಡುಗೆ ಮಾಡುವುದನ್ನು ಕಲಿತಿದ್ದೆ. ನಮ್ಮ ಕಡೆ ಚಿಕ್ಕ ವಯಸ್ಸಿನಿಂದಲೇ ಹೆಣ್ಣುಮಕ್ಕಳಿಗೆ ಮನೆಕೆಲಸಗಳನ್ನು ಮಾಡಲು ಕಲಿಸುತ್ತಾರೆ. ಅಡುಗೆ ಮಾಡುವುದೆಂದರೆ ನನಗೆ ಮೊದಲಿನಿಂದಲೂ ಇಷ್ಟ. ತಮ್ಮ ಹುಟ್ಟಿದಾಗ ನನಗೆ ಅಡುಗೆ ಕಲಿಯವುದು ಅನಿವಾರ್ಯವಾಯ್ತು. ಅದಕ್ಕೂ ಮೊದಲು ಮನೆಕೆಲಸಗಳಲ್ಲಿ ಅಮ್ಮನಿಗೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದೆ. ತರಕಾರಿ ಹೆಚ್ಚುವುದು, ಕಾಯಿತುರಿಯುವುದು ಮಾಡುತ್ತಿದ್ದೆ. ಆಗಿನಿಂದಲೇ ನನಗೆ ಅಡುಗೆಮನೆಯ ನಂಟು ಅಂಟಿಕೊಂಡಿತ್ತು.

ನಾನು ಮಾಡಿದ ಮೊದಲ ಅಡುಗೆ ಅಂದರೆ ದೋಸೆ. ಅದು ಪೂರ್ತಿ ನಾನೇ ಮಾಡಿರಲಿಲ್ಲ. ಅಮ್ಮ ರೆಡಿ ಮಾಡಿಕೊಟ್ಟ ಹಿಟ್ಟಿನಿಂದ ದೋಸೆ ಹುಯ್ದಿದ್ದಷ್ಟೇ ನಾನು. ಅದು ಒಂದೇ ಒಂದು ದೋಸೆ ಮಾಡಿದ್ದೆ. ಆ ದೋಸೆ ತುಂಬಾ ಚೆನ್ನಾಗೇ ಬಂದಿತ್ತು. 

ಅಡುಗೆಮನೆಯೊಂದಿಗೆ ನಡೆದ ತಮಾಷೆಯ ಸನ್ನಿವೇಶಗಳಲ್ಲಿ ಮೊದಲು ನೆನಪಾಗುವುದು ಸ್ವೀಟ್ ಮಾಡಿದ್ದು. ಒಂದಿನ ನಮ್ಮ ಅಮ್ಮ ಊರಿಗೆ ಹೋಗಿದ್ದರು. ಅವರ ಬರುವ ಮೊದಲು ಏನಾದರೂ ಸ್ವೀಟ್ ಮಾಡಬೇಕು ಎಂದುಕೊಂಡೆ. ಆ ಹೊಳೆದಿದ್ದು ‘7ಕಪ್‌’ ಸ್ವೀಟ್‌. ಅದನ್ನು ಅಮ್ಮ ಮಾಡುವುದನ್ನು ನೋಡಿದ್ದೆ. ಹಾಗೇ ಮಾಡಲು ಹೋದೆ. ಆದರೆ ಅದು ಪೂರ್ತಿ ಗಟ್ಟಿಯಾಗಿತ್ತು. ಅಮ್ಮನಿಗೆ ನಾನೇ ಮಾಡಿದ ಸ್ವೀಟ್ ತಿನ್ನಿಸಬೇಕು ಎಂದುಕೊಂಡಿದ್ದ ನನಗೆ ನಿರಾಸೆ ಕಾಡಿತ್ತು, ನಾನು ಮಾಡಿದ ಸ್ವೀಟ್‌ನ ರೂಪ ಹಾಗೂ ಆಕಾರ ನೋಡಿ ಎಲ್ಲರೂ ನಕ್ಕಿದ್ದೆವು. ಆ ದಿನ ಏನೋ ಸಾಹಸ ಮಾಡಲು ಹೋಗಿ ಏನೋ ಆದ ಘಟನೆ ಇಂದಿಗೂ ನನ್ನ ಮನದಲ್ಲಿ ಹಸಿರಾಗಿದೆ. 

ನನ್ನ ಮನೆಯಲ್ಲಿ ನಾನು ಮಾಡುವ ಅಡುಗೆ ಎಂದರೆ ಎಲ್ಲರಿಗೂ ಇಷ್ಟ. ನನ್ನ ತಮ್ಮ ನನ್ನ ಅಡುಗೆಯ ಅಭಿಮಾನಿ. ಅವನಿಗೆ ನಾನು ಮಾಡುವ ಬೇಸನ್ ಉಂಡೆ, ಆಲೂ ಪರೋಟ, ಬಿಸಿಬೇಳೆ ಬಾತ್ ಎಂದರೆ ತುಂಬಾ ಇಷ್ಟ. ‌ನಾನೇ ಮಾಡುವ ಅಡುಗೆಗಳಲ್ಲಿ ನನಗೆ ಹಸಿಮೆಣಸಿನಕಾಯಿ ಚಪಾತಿ ನೆಚ್ಚಿನ ತಿನಿಸು. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !