ಈಗ ಬೇಸಿಗೆ ರಜೆ. ಮಕ್ಕಳು ಮನೆಯಲ್ಲೇ ಇರುವುದರಿಂದ ತಿನ್ನಲು ರುಚಿರುಚಿಯಾದ ಸ್ನ್ಯಾಕ್ಸ್ ಕೇಳುತ್ತಾರೆ. ದಿನವೂ ಹೊರಗಿನ ಆಹಾರ ಕೊಡುವುದು ಒಳ್ಳೆಯದಲ್ಲ. ಆದರೆ, ಅವರಿಗಾಗಿ ತರಕಾರಿ ಬಳಸಿ ಮನೆಯಲ್ಲೇ ಸುಲಭವಾಗಿ ಪೌಷ್ಟಿಕಾಂಶಭರಿತವಾದ ಸಂಜೆಯ ಸ್ನ್ಯಾಕ್ಸ್ ಮಾಡಿಕೊಟ್ಟರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು ಹಾಗೂ ಹೆಚ್ಚಿನ ಖರ್ಚೂ ಇರದು.

ನನ್ನ ಮಕ್ಕಳು ಚಿಕ್ಕವರಿದ್ದಾಗ ಇಂತಹವೇ ಹಲವು ಬಗೆಯ ತಿಂಡಿಗಳನ್ನು ಮಾಡಿಕೊಡುತ್ತಿದ್ದೆ. ಮಾಡುವ ಮುಂಚೆ ಇದು ಯಾವುದರಿಂದ ಮಾಡಿದ್ದು ಎಂದು ಹೇಳದೆ, ತಿಂದಾದ ಮೇಲೆ ಅದನ್ನು ಹೇಳಿದಾಗ ಮಕ್ಕಳಿಗೆ ಅಚ್ಚರಿ. ಈಗ ದೊಡ್ಡವರಾಗಿರುವ ಅವರು ಸ್ವತಃ ಅವುಗಳನ್ನು ಮಾಡಿಕೊಳ್ಳುತ್ತಾರೆ.

ಆದರೂ ಒಮ್ಮೊಮ್ಮೆ ನಾನು ಏನಾದರೂ ತಿಂಡಿ ಮಾಡಿದರೆ, ತಿಂದಾದ ಮೇಲೆ, ‘ಇದ್ಯಾವ ಗೆಡ್ಡೆಗೆಣಸು? ಯಾವ ಕಾಡು ತರಕಾರಿ ಬಳಸಿ ಮಾಡಿದ್ದು? ನೀನು ಯಾವುದರಲ್ಲಾದರೂ ಏನೋ ಒಂದು ರುಚಿಯಾಗಿ ಮಾಡಿ ನಾವು ಬೇಡ ಎನ್ನುವುದನ್ನೂ ತಿನ್ನಿಸಿಬಿಡುತ್ತೀಯ’ ಎಂದು ರೇಗಿಸುತ್ತಾರೆ. ಅಂತಹ ಒಂದು ರೆಸಿಪಿಯೇ ಹಲಸಿನಕಾಯಿ ಪಕೋಡ.

ಬೇಸಿಗೆಯಲ್ಲಿ ದೊರೆಯುವ ಹಲಸು ಆರೋಗ್ಯದ ದೃಷ್ಟಿಯಿಂದ ಬಹು ಪ್ರಯೋಜನಕಾರಿ. ಹಲಸಿನಕಾಯಿ ಪೋಷಕಾಂಶಭರಿತ, ವಿಶಿಷ್ಟ ರುಚಿ ಮತ್ತು ಆರೋಗ್ಯಕರ ಗುಣಗಳಿಂದ ಜನಪ್ರಿಯ. ಕಾರ್ಬೊಹೈಡ್ರೇಟ್ ಮತ್ತು ನಾರಿನಂಶ ಹೊಂದಿದ ಸತ್ವಭರಿತ ತರಕಾರಿ ಇದು.

ವಿಶೇಷ ರುಚಿ ಹೊಂದಿರುವ ಈ ಹಲಸಿನಕಾಯಿ ಮತ್ತು ಹಣ್ಣಿನಲ್ಲಿ ನಾವು ಮಲೆನಾಡಿನ ಮಂದಿ ಹಲವಾರು ಬಗೆಯ ಪದಾರ್ಥಗಳನ್ನು ಮಾಡಿ ಸವಿಯುತ್ತೇವೆ. ಅದರಲ್ಲೂ ಹಲಸಿನಕಾಯಿಯನ್ನು ವಿವಿಧ ರೀತಿಯಲ್ಲಿ ಬಳಸಿ ರುಚಿರುಚಿಯಾದ ಖಾದ್ಯಗಳನ್ನು ಮಾಡುತ್ತೇವೆ. ಹಲಸಿನಕಾಯಿಯಲ್ಲಿ ಮಾಡಿದ ರುಚಿಯಾದ ಪಕೋಡವನ್ನು ಕಾಫಿಯೊಟ್ಟಿಗೆ ಸವಿಯುತ್ತಿದ್ದರೆ ಆಹಾ... ಅದರ ಗಮ್ಮತ್ತೇ ಬೇರೆ.

ಹಸಿ ಹಲಸಿನಕಾಯಿ, ಕಡಲೆಹಿಟ್ಟು, ಅಕ್ಕಿಹಿಟ್ಟು ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ, ಎಣ್ಣೆಯಲ್ಲಿ ಕರಿದು ಇದನ್ನು ತಯಾರಿಸಲಾಗುತ್ತದೆ. ಇದು ಹೊರಗೆ ಗರಿಗರಿಯಾಗಿಯೂ ಒಳಗೆ ಮೃದುವಾಗಿಯೂ ಇರುತ್ತದೆ. ಮುಖ್ಯವಾಗಿ ಸಂಜೆಯ ಚಹಾ ಸಮಯಕ್ಕೆ ಹೇಳಿ ಮಾಡಿಸಿದ ತಿನಿಸು.

ಹೀಗೆ ಮಾಡಿ

ಎಳೆಯ ಹಲಸಿನಕಾಯಿಯ ತಿರುಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಕುಕ್ಕರ್ಗೆ ಹಾಕಿ. ಅದಕ್ಕೆ ಸ್ವಲ್ಪ ಉಪ್ಪು, ಅರಸಿನ ಮತ್ತು ನೀರು ಹಾಕಿ ಬೇಯಲು ಇಡಿ. 2 ವಿಷಲ್ ಕೂಗಿಸಿ ಆರಲು ಬಿಡಿ.

ಅಷ್ಟರೊಳಗೆ ಒಂದು ಪಾತ್ರೆಯಲ್ಲಿ ಪಕೋಡಕ್ಕೆ ಹೆಚ್ಚುವ ರೀತಿಯಲ್ಲಿ ಸಣ್ಣಗೆ ಹೆಚ್ಚಿದ
2 ಈರುಳ್ಳಿ, ಒಂದೂವರೆ ಕಪ್ ಕಡಲೆಹಿಟ್ಟು, ಅರ್ಧ ಕಪ್ ಅಕ್ಕಿಹಿಟ್ಟು, ಒಂದು ಚಮಚ ಜೀರಿಗೆ, ಖಾರದ ಪುಡಿ, ಅರಸಿನ, ಗರಂ ಮಸಾಲ ಸ್ವಲ್ಪ, ಸಣ್ಣಗೆ ಹೆಚ್ಚಿದ ಎರಡು ಹಸಿಮೆಣಸಿನಕಾಯಿ, ಕರಿಬೇವು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಮಾಮೂಲಿ ಬೋಂಡಾ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿ. ಕೊನೆಯಲ್ಲಿ ಈ ಹಿಟ್ಟಿಗೆ ಬೆಂದ ಹಲಸಿನಕಾಯಿಯ ತುಂಡುಗಳನ್ನು ಹಾಕಿ ಹಗುರವಾಗಿ ಕಲಸಿ.

ಎಣ್ಣೆಯನ್ನು ಬಿಸಿ ಮಾಡಿ, ಕಲಸಿದ ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಗರಿಗರಿಯಾಗುವವರೆಗೆ ಕರಿಯಿರಿ.

ನಂತರ ತಾಜಾ ಕರಿಬೇವಿನ ಸೊಪ್ಪನ್ನು ಅದೇ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು, ಈಗಾಗಲೇ ಕರಿದಿಟ್ಟ ಹಲಸಿನ ಪಕೋಡ ಮೇಲೆ ಹಾಕಿ. ಬಿಸಿ ಬಿಸಿಯಾದ ಪಕೋಡದೊಟ್ಟಿಗೆ ಹಬೆಯಾಡುವ ಸ್ಟ್ರಾಂಗ್ ಕಾಫಿ ಇದ್ದಲ್ಲಿ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.