ಶುಕ್ರವಾರ, ಮೇ 14, 2021
27 °C

ಯುಗಾದಿ ಸಂಭ್ರಮ: ಹೊಸ ತೊಡಕಿಗೆ ಮಟನ್ ಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುಗಾದಿ ಹಬ್ಬ ಎಂದಾಕ್ಷಣ ನೆನಪಾಗುವುದು ಬೇವು–ಬೆಲ್ಲದೊಂದಿಗೆ ಸಿಹಿ ಒಬ್ಬಟ್ಟು. ಯುಗಾದಿ ದಿನ ಸಿಹಿಯೂಟ ಮಾಡುವ ಹಳೇ ಮೈಸೂರು ಭಾಗದ ಜನ ಮರುದಿನ ಹೊಸ ತೊಡಕು ಆಚರಿಸುತ್ತಾರೆ. ಅಂದು ಬಗೆ ಬಗೆಯ ಮಾಂಸದ ಅಡುಗೆ ಮಾಡಿ ಬಾಡೂಟ ಮಾಡುತ್ತಾರೆ. ಇದು ಹಿಂದಿನಿಂದಲೂ ಈ ಭಾಗದಲ್ಲಿ ಆಚರಿಸಿಕೊಂಡು ಬಂದ ಆಚರಣೆಯಾಗಿದ್ದು ಈಗಲೂ ಮುಂದುವರಿದಿದೆ.

ಮಟನ್ ಕರಿ
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ – 2 ದೊಡ್ಡದು ಹೆಚ್ಚಿದ್ದು, ಟೊಮೆಟೊ – 2 ದೊಡ್ಡದು ಹೆಚ್ಚಿದ್ದು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 3 ಚಮಚ, ಗರಂಮಸಾಲೆ – 2 ಚಮಚ, ಕೊತ್ತಂಬರಿ ಪುಡಿ – 2 ಚಮಚ, ಜೀರಿಗೆ ಪುಡಿ – 2 ಚಮಚ, ಅರಿಸಿನ – ಅರ್ಧ ಚಮಚ, ಖಾರದಪುಡಿ – ಅರ್ಧ ಚಮಚ, ಕುರಿ ಮಾಂಸ – ಅರ್ಧ ಕೆ.ಜಿ, ಉಪ್ಪು – ರುಚಿಗೆ, ಎಣ್ಣೆ– ಸ್ವಲ್ಪ, ಕೊತ್ತಂಬರಿ ಸೊಪ್ಪು – ಹೆಚ್ಚಿದ್ದು 2 ಚಮಚ.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಈರುಳ್ಳಿಯನ್ನು ತೆಗೆದಿರಿಸಿ. ತಣ್ಣದಾಗ ಮೇಲೆ ಮಿಕ್ಸಿಗೆ ಈರುಳ್ಳಿ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ತೆಗೆದಿರಿಸಿ ಮಿಕ್ಸಿ ಜಾರಿಗೆ ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಿ. ಮತ್ತೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಪೇಸ್ಟ್ ಹಾಕಿ 2 ರಿಂದ 3 ನಿಮಿಷ ಹುರಿದುಕೊಳ್ಳಿ.

ಅದಕ್ಕೆ ಟೊಮೆಟೊ ಪೇಸ್ಟ್, ಗರಂಮಸಾಲೆ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಸಿನ ಪುಡಿ, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆ ಬಿಡುವವರೆಗೂ ಕುದಿಸಿ. ಕುರಿ ಮಾಂಸವನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆ ಹೋಳುಗಳಿಗೆ ಹಿಡಿಯುವವರೆಗೆ ಕೈಯಾಡಿಸಿ. ನಂತರ ಅರ್ಧ ಕಪ್ ನೀರು ಹಾಕಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಕುರಿ ಮಾಂಸ ಬೇಯುವವರೆಗೆ ಬೇಯಿಸಿ. ಚೆನ್ನಾಗಿ ಕುದಿದು, ಮಾಂಸ ಬೆಂದು ಮಂದ ಆಗುವವರೆಗೂ ಕುದಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು