ವೈದೇಹಿ ಆಸ್ಪತ್ರೆಯಲ್ಲಿ ಗಾಯ ಚಿಕಿತ್ಸಾ ಕೇಂದ್ರ

ಶನಿವಾರ, ಮೇ 25, 2019
25 °C

ವೈದೇಹಿ ಆಸ್ಪತ್ರೆಯಲ್ಲಿ ಗಾಯ ಚಿಕಿತ್ಸಾ ಕೇಂದ್ರ

Published:
Updated:
Prajavani

ಸ್ಟ್ರೋಕ್‌, ಮಧುಮೇಹ, ಸರ್ಜರಿಯ ನಂತರದ ಮಾರಣಾಂತಿಕ ಗಾಯಗಳಿಗೆ, ವಿಶೇಷವಾದ ಆರೈಕೆ ನೀಡುವ ಉದ್ದೇಶದಿಂದ ವೈದೇಹಿ ಆಸ್ಪತ್ರೆಯಲ್ಲಿ ‘ಡಾಲ್ವಕೋಟ್‌ ವೂಂಡ್‌ ಕೇರ್‌’ (ಡಿಡಬ್ಲ್ಯುಸಿ) ಕೇಂದ್ರವನ್ನು ತೆರೆಯಲಾಗಿದೆ. 

‘ತಿಂಗಳುಗಟ್ಟಲೆ ಹಾಸಿಗೆ ಹಿಡಿದ ವ್ಯಕ್ತಿಯ ಬೆನ್ನಿನಲ್ಲಿ ಆಗುವ ಆಳವಾದ ಗಾಯ, ಮೂಳೆ ಮುರಿತದಿಂದ ಉಂಟಾದ ಗಾಯ, ಮಧುಮೇಹಿಗಳ ಗ್ಯಾಂಗ್ರಿನ್‌, ಇವೆಲ್ಲವನ್ನೂ ಆಸ್ಪತ್ರೆಯಲ್ಲಿರುವ ಕೆಲವೇ ತಂತ್ರಜ್ಞಾನದಿಂದ ವಾಸಿ ಮಾಡಲು ಸಾಧ್ಯವಿಲ್ಲ. ಇದಕ್ಕೆ ವಿಶೇಷ ತಜ್ಞರ ತಂಡ ಹಾಗೂ ಯಂತ್ರಗಳು ಕೂಡ ಬೇಕಾಗುತ್ತದೆ. ವಾಸಿಯಾಗುವ ಗಾಯಗಳಿಗೂ ಕೈ, ಕಾಲು ತೆಗೆಯುವಂತಹ ಸ್ಥಿತಿಯಿಂದ ರೋಗಿಗಳನ್ನು ಬಚಾವು ಮಾಡಲು ವೂಂಡ್ ಕೇರ್‌ ನೆರವಾಗಲಿದೆ’ ಎಂದು ಡಾ.ಮಹೇಶ್‌ ಕೊಟಪಲ್ಲಿ ಅವರು ಹೇಳಿದರು. 

‘ಅಮೆರಿಕದಲ್ಲಿ ನಾನು ವೂಂಡ್‌ ಕೇರ್‌ ಕುರಿತು ಅಧ್ಯಯನ ಮಾಡಿದ್ದೇನೆ. ಉಪನ್ಯಾಸ ನೀಡುವಂತೆ ವೈದೇಹಿ ಆಸ್ಪತ್ರೆಯಿಂದ ಆಹ್ವಾನ ಸಿಕ್ಕಿತ್ತು. ಇಲ್ಲಿ ಅತ್ಯುತ್ತಮ ವೈದ್ಯರು ಇದ್ದರೂ ತಂತ್ರಜ್ಞಾನ ಹಾಗೂ ಜ್ಞಾನದ ಕೊರತೆ ಇದೆ. ವಾಸಿಯಾಗದ ಗಾಯಗಳಿಗೆ ಚಿಕಿತ್ಸೆ ನೀಡುವ ರೀತಿಯಲ್ಲಿ ಬದಲಾವಣೆಗಳು ಆಗಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟೆ. ಈಗ ಇಲ್ಲಿಯೇ ಕೇಂದ್ರ ಸ್ಥಾಪಿಸಲು ನೆರವಾಗಿದ್ದೇನೆ’ ಎಂದು ಅವರು ಹೇಳಿದರು. 

‘ಒಂದೊಂದು ಗಾಯಗಳೂ ವಿಭಿನ್ನ ಸ್ವರೂಪದ್ದಾಗಿರುತ್ತವೆ. ಪ್ರತ್ಯೇಕ ಚಿಕಿತ್ಸೆ ನೀಡಿದರೆ ಮಾತ್ರ ವಾಸಿಮಾಡಲು ಸಾಧ್ಯ. ಗ್ಯಾಂಗ್ರಿನ್‌ನಂತಹ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಕಂಡುಬಂದರೆ ವಾಸಿ ಮಾಡಬಹುದು’ ಎಂದು ಅವರು ಅಭಿಪ್ರಾಯಪಟ್ಟರು. 

 **

ನೂತನ ಕೇಂದ್ರದಲ್ಲಿರುವ ಸೌಕರ್ಯಗಳು

1. (ಎವಾಸಿವ್‌ ಫಾರ್ಮ್ ಆಫ್‌ ಟ್ರೀಟ್‌ಮೆಂಟ್‌) ಎಚ್‌ಬಿಒಟಿ, ಪ್ರಶರ್‌ ಕುಕ್ಕರ್ ಮಾದರಿಯಲ್ಲಿ ರೋಗಿಗಳನ್ನು ಯಂತ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ.

2. ಡಯಾಬಿಟಿಕ್‌ ಫೂಟ್‌ಕೇರ್‌, ಫಿಸಿಯೋಥೆರಪಿ

3 ವ್ಯೂಂಡ್‌ ವ್ಯಾಕ್‌  4. ಪುನರ್ವಸತಿ

5. ಲೇಸರ್ ಥೆರಪಿ 6. ಕೌನ್ಸಲಿಂಗ್‌

7. ಸರ್ಜರಿ ನಂತರದ ಗಾಯಗಳಿಗೆ ವಿಶೇಷ ಚಿಕಿತ್ಸೆ

8 ಹೃದಯ ಚಿಕಿತ್ಸಕರು, ಗಾಯದ ಆರೈಕೆ ತಂಡ, 50 ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !