ಮುಂಗಾರು ಬಿತ್ತನೆ ಶೇ 15 ರಷ್ಟು ಇಳಿಕೆ

7

ಮುಂಗಾರು ಬಿತ್ತನೆ ಶೇ 15 ರಷ್ಟು ಇಳಿಕೆ

Published:
Updated:

ನವದೆಹಲಿ: 2018–19ನೇ ಮುಂಗಾರು ಬೆಳೆ ವರ್ಷದಲ್ಲಿ ದೇಶದಾದ್ಯಂತ 3.33 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಆಹಾರಧಾನ್ಯಗಳ ಬಿತ್ತನೆ ಕಾರ್ಯ ನಡೆದಿದೆ.

2017–18ನೇ ಮುಂಗಾರು ವರ್ಷದಲ್ಲಿ 3.88 ಕೋಟಿ ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರದೇಶದಲ್ಲಿ ಶೇ 15 ರಷ್ಟು ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಮುಂಗಾರಿನ ಪ್ರಮುಖ ಬೆಳೆಯಾದ ಭತ್ತ ಬಿತ್ತನೆ 79.08 ಲಕ್ಷ ಹೆಕ್ಟೇರ್‌ಗಳಿಂದ 67.25 ಲಕ್ಷ ಹೆಕ್ಟೇರ್‌ಗಳಿಗೆ ಇಳಿಕೆಯಾಗಿದೆ.

ದೇಶದಾದ್ಯಂತ ಒಂದೇ ಸಮನಾಗಿ ಮಳೆ ಸುರಿಯುತ್ತಿಲ್ಲ. ಹೀಗಾಗಿ ಭತ್ತ, ಒರಟು ಧಾನ್ಯ, ಬೇಳೆಕಾಳು, ಎಣ್ಣೆಕಾಳು ಮತ್ತು ಹತ್ತಿ ಬಿತ್ತನೆಯಲ್ಲಿ ಇಳಿಕೆಯಾಗಿದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಮತ್ತು ಮಣಿಪುರದಲ್ಲಿ ಭತ್ತ ಬಿತ್ತನೆ ಪ್ರಮಾಣ ಕಡಿಮೆ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

‘ದೇಶದೆಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿಲ್ಲ. ಹೀಗಾಗಿ  ಬಹಳಷ್ಟು ರಾಜ್ಯಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಉತ್ಪಾದನೆ ಕಡಿಮೆ ಆಗಲಿದೆ ಎನ್ನುವ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಸಂಶೋಧನಾ ಸಂಸ್ಥೆ ‘ಇಕ್ರಾ’ದ ಪ್ರಧಾನ ನಿರ್ದೇಶಕ ತ್ರಿಲೋಚನಾ ಮಹಾಪಾತ್ರಾ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !