ವಿದ್ಯಾರ್ಥಿಗಳಿಗೆ ತಪ್ಪಿನ ಅರಿವಾಗಿದೆ: ಅಮೆರಿಕ

7

ವಿದ್ಯಾರ್ಥಿಗಳಿಗೆ ತಪ್ಪಿನ ಅರಿವಾಗಿದೆ: ಅಮೆರಿಕ

Published:
Updated:

ವಾಷಿಂಗ್ಟನ್‌: ನಕಲಿ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡಿಸಿಕೊಂಡು ದೇಶದಲ್ಲಿ ಅಕ್ರಮವಾಗಿ ಉಳಿದುಕೊಳ್ಳಲು ಯತ್ನಿಸಿ ಬಂಧಿತರಾಗಿರುವ 130 ಜನ ವಿದೇಶಿ ವಿದ್ಯಾರ್ಥಿಗಳಿಗೆ ತಾವು ಮಾಡಿರುವ ತಪ್ಪಿನ ಅರಿವಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಹೇಳಿದೆ.

129 ಜನ ಭಾರತೀಯರು ಸೇರಿದಂತೆ 130 ವಿದೇಶಿ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಬಂಧಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಅಮೆರಿಕ ಈ ಹೇಳಿಕೆ ಬಿಡುಗಡೆ ಮಾಡಿದೆ.

ಯುನಿವರ್ಸಿಟಿ ಆಫ್‌ ಫಾರ್ಮಿಂಗ್ಟನ್‌ ಎಂಬುದು ನಕಲಿ ವಿಶ್ವವಿದ್ಯಾಲಯವಾಗಿದ್ದು, ಇಲ್ಲಿ ನೋಂದಣಿ ಮಾಡಿಸಿಕೊಂಡಿ
ರುವ ವಿದ್ಯಾರ್ಥಿಗಳಿಂದ ಹಣ ಪಡೆದು, ಅಕ್ರಮವಾಗಿ ನೆಲೆಸಲು ಅನುವು ಮಾಡಿಕೊಡುವ ಜಾಲವನ್ನು ಭೇದಿಸಿರುವುದಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆ (ಡಿಎಚ್‌ಎಸ್‌) ಹೇಳಿತ್ತು. ಈ ಸಂಬಂಧ ಭಾರತೀಯರು ಅಥವಾ ಭಾರತ ಮೂಲದ 8 ಜನ ಅಮೆರಿಕನ್ನರನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !