ಎಚ್‌–1ಬಿ ವೀಸಾ: ಕಠಿಣ ನಿರ್ಬಂಧ

7
ಅಮೆರಿಕದಲ್ಲಿ ವಿದೇಶಿ ಉದ್ಯೋಗಿಗಳಿಗೆ ಕೆಲಸ

ಎಚ್‌–1ಬಿ ವೀಸಾ: ಕಠಿಣ ನಿರ್ಬಂಧ

Published:
Updated:
Deccan Herald

ವಾಷಿಂಗ್ಟನ್‌: ಎಚ್‌–1ಬಿ ಉದ್ಯೋಗಿಗಳ ಅರ್ಜಿ ಪ್ರಕ್ರಿಯೆಗೆ ಅಮೆರಿಕ ಹೊಸ ಕಠಿಣ ನಿರ್ಬಂಧಗಳನ್ನು ಪರಿಚಯಿಸಿದೆ. ಇದರ ಅನ್ವಯ, ಅಮೆರಿಕದ ಉದ್ಯೋಗದಾತ ಕಂಪನಿ ತಾನು ನೇಮಿಸಿಕೊಂಡಿರುವ ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ಬಹಿರಂಗ ಮಾಡಬೇಕು. ಇದರಿಂದ, ಅಮೆರಿಕದಲ್ಲಿ ಹೊಸದಾಗಿ ಉದ್ಯೋಗ ಪಡೆಯುವುದು ಕಷ್ಟವಾಗಲಿದೆ.

ಎಚ್–1ಬಿ ವೀಸಾದಡಿ ಭಾರತದ ಐ.ಟಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ವಲಸೆಯೇತರ ವೀಸಾವಾಗಿದ್ದು, ಪ್ರಾಯೋಗಿಕ ಇಲ್ಲವೇ ತಾಂತ್ರಿಕ ಪರಿಣತಿ ಹೊಂದಿದ ವಿದೇಶಿ ಕಾರ್ಮಿಕರನ್ನು ಅಮೆರಿಕದ ಕಂಪನಿಯು ನೇಮಿಸಿಕೊಳ್ಳಬಹುದು.

ಜಪಾನ್‌ ಮಣೆ– ಟೋಕಿಯೊ (ಎಎಫ್‌ಪಿ): ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಯಲ್ಲಿ, ವಿದೇಶಿ ಉದ್ಯೋಗಿಗಳಿಗೆ ಅವಕಾಶ ನೀಡುವ ಕರಡು ಮಸೂದೆಗೆ ಜಪಾನ್‌ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಇದರಿಂದ, ಸಣ್ಣ ಸಣ್ಣ ಕೆಲಸಗಳಿಗೆ ಹೆಚ್ಚಿನ ವಿದೇಶಿಗರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ದೇಶದಲ್ಲಿನ ಕಾರ್ಮಿಕರ ಕೊರತೆ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಈ ಕ್ರಮ ವಿವಾದಕ್ಕೆ ಕಾರಣವಾಗಿದೆ.

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !