ಅಕ್ರಮ ವಾಸ: ಇರಾನ್ ಪ್ರಜೆ ಬಂಧನ

7

ಅಕ್ರಮ ವಾಸ: ಇರಾನ್ ಪ್ರಜೆ ಬಂಧನ

Published:
Updated:

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಇರಾನ್ ದೇಶದ ಶಾಹೀದ್ ಸುಹೇಲ್ (34) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘2014ರಲ್ಲಿ ಪ್ರವಾಸ ವೀಸಾದಡಿ ಶಾಹೀದ್ ನಗರಕ್ಕೆ ಬಂದಿದ್ದ. ವೀಸಾ ಅವಧಿ ಮುಕ್ತಾಯವಾಗಿದ್ದರೂ ತನ್ನ ದೇಶಕ್ಕೆ ವಾಪಸ್‌ ಹೋಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಕೋರಮಂಗಲದ 6ನೇ ಹಂತದಲ್ಲಿರುವ ಗ್ರೇಪ್ ಗಾರ್ಡನ್ ಉದ್ಯಾನ ಬಳಿ ಫೆ. 6ರಂದು ಬೆಳಿಗ್ಗೆ ಶಾಹೀದ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಆತನನ್ನು ಗಮನಿಸಿದ್ದ ಗಸ್ತಿನಲ್ಲಿದ್ದ ಸಿಬ್ಬಂದಿ, ವಿಚಾರಣೆಗೆ ಒಳಪಡಿಸಿದ್ದರು. ವೀಸಾ ಹಾಗೂ ಪಾಸ್‌ಪೋರ್ಟ್‌ ದುಬೈನಲ್ಲಿರುವ ತಾಯಿ ಬಳಿ ಇರುವುದಾಗಿ ಆರೋಪಿ ಹೇಳಿದ್ದ.’

‘ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಯಿತು. ಹೆಚ್ಚಿನ ವಿಚಾರಣೆ ನಡೆಸಿದಾಗ, ಭಾರತದಲ್ಲಿ ತಾನು ಅಕ್ರಮವಾಗಿ ವಾಸವಿರುವುದಾಗಿ ತಪ್ಪೊಪ್ಪಿಕೊಂಡ. ವಿದೇಶಿಗರ ಕಾಯ್ದೆ ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !