ಮಾಜಿ ಸಚಿವರ ಕಾರಿನ ಗಾಜು ಒಡೆದರು

7

ಮಾಜಿ ಸಚಿವರ ಕಾರಿನ ಗಾಜು ಒಡೆದರು

Published:
Updated:
ಕಾರಿನ ಗಾಜು ಒಡೆದು ಸಿಸ್ಟಮ್ ಬಿಚ್ಚಿರುವುದು

ಬೆಂಗಳೂರು: ಕಾರಿನಲ್ಲಿ ಬಂದ ಕಿಡಿಗೇಡಿಗಳು ಮಾಜಿ ಸಚಿವ ಬಿ.ಸೋಮಶೇಖರ್ ಅವರ ಕಾರಿನ ಗಾಜು ಒಡೆದು, ಟಚ್‌ ಸ್ಕ್ರೀನ್ ಸಿಸ್ಟಮ್ ಬಿಚ್ಚಿಕೊಂಡು ಹೋಗಿದ್ದಾರೆ.

ಬಿಜೆಪಿಯ ಸೋಮಶೇಖರ್, ಕುಟುಂಬ ಸದಸ್ಯರ ಜತೆ ಸಂಜಯನಗರದ ಆರ್‌ಎಂವಿ 2ನೇ ಹಂತದಲ್ಲಿ ನೆಲೆಸಿದ್ದಾರೆ. ಜುಲೈ 5ರ ನಸುಕಿನಲ್ಲಿ (3.30ರ ಸುಮಾರಿಗೆ) ಝೆನ್ ಕಾರಿನಲ್ಲಿ ಬಂದಿದ್ದ ಮೂವರು, ಸಿಸ್ಟಮ್ ಕಳವು ಮಾಡಿಕೊಂಡು ಹೋಗಿರುವುದಾಗಿ ಅವರು ಸಂಜಯನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಸೋಮಶೇಖರ್, ‘ನಮ್ಮ ಪಕ್ಕದ ಮನೆಯಲ್ಲೇ ನಿವೃತ್ತ ಎಸಿಪಿಯೊಬ್ಬರ ಕುಟುಂಬ ನೆಲೆಸಿದೆ. ಅವರ ಮಗ ಓದಿಕೊಳ್ಳುತ್ತಿದ್ದಾಗ ಏನೋ ಶಬ್ದವಾಯಿತೆಂದು ಹೊರಗೆ ಬಂದಿದ್ದಾನೆ. ಮೂವರು ಯುವಕರು ನನ್ನ ಕಾರಿನ ಸಿಸ್ಟಮ್ ಬಿಚ್ಚುತ್ತಿರುವುದನ್ನು ನೋಡಿದ್ದಾನೆ. ಒಬ್ಬಾತ ಕೈಲಿ ರಾಡ್ ಇದ್ದುದರಿಂದ ಹೆದರಿರುವ ಆತ, ಮನೆಗೆ ವಾಪಸ್ ಹೋಗಿ ಪೊಲೀಸರಿಗೆ ಹಾಗೂ ನಮ್ಮ ಮನೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದ’ ಎಂದು ವಿವರಿಸಿದರು.

‘ನಾವು ಹೊರಗೆ ಬರುವಷ್ಟರಲ್ಲಿ ಸಿಸ್ಟಮ್ ಬಿಚ್ಚಿದ್ದ ಆರೋಪಿಗಳು, ರಸ್ತೆ ಬದಿ ನಿಲ್ಲಿಸಲಾಗಿದ್ದ ಇನ್ನೊಂದು ಕಾರಿನ ಗಾಜು ಒಡೆಯುವುದಕ್ಕೂ ಮುಂದಾಗಿದ್ದರು. ನಮ್ಮನ್ನು ನೋಡುತ್ತಿದ್ದಂತೆಯೇ ಕಾರಿನಲ್ಲಿ ಹೊರಟು ಹೋದರು. ಬಳಿಕ ಡಿಸಿಪಿ ಅವರೇ ಸ್ಥಳಕ್ಕೆ ಬಂದು ಹೇಳಿಕೆ ಪಡೆದುಕೊಂಡು ಹೋದರು’ ಎಂದು ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !