ಸಾಲಬಾಧೆ: ಇಂಗಳಗಿ ರೈತ ಆತ್ಮಹತ್ಯೆ

ಮಂಗಳವಾರ, ಏಪ್ರಿಲ್ 23, 2019
31 °C

ಸಾಲಬಾಧೆ: ಇಂಗಳಗಿ ರೈತ ಆತ್ಮಹತ್ಯೆ

Published:
Updated:
Prajavani

ದೇವರಹಿಪ್ಪರಗಿ: ಸೋಮವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಲ್ಲೂಕಿನ ಇಂಗಳಗಿ ಗ್ರಾಮದ ರೈತ ಬಸನಗೌಡ ಸಿದ್ಧನಗೌಡ ಬಿರಾದಾರ(45) ಮಂಗಳವಾರ ಮೃತಪಟ್ಟಿದ್ದಾರೆ.

ತನ್ನ ತೋಟದ ಮನೆಯಲ್ಲಿ ದ್ರಾಕ್ಷಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ್ದ ಬಸನಗೌಡ ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾರೆ. ಈ ಸಂಬಂಧ ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 ಎಕರೆ ತೋಟದಲ್ಲಿ ನಿಂಬೆ ಹಾಗೂ ದ್ರಾಕ್ಷಿ ಬೆಳೆದಿದ್ದ ಬಸನಗೌಡ ಅವರು, ಡಿಸಿಸಿ ಬ್ಯಾಂಕ್‌ನಲ್ಲಿ ₹ 6 ಲಕ್ಷ ಸಾಲ ಪಡೆದಿದ್ದರು. ಅದರಲ್ಲಿ ₹ 2 ಲಕ್ಷ ಮರು ಪಾವತಿಸಿದ್ದರು. ಉಳಿದ ₹ 4 ಲಕ್ಷದೊಂದಿಗೆ, ₹ 3 ಲಕ್ಷ ಕೈಸಾಲವೂ ಇತ್ತು. 

ಈ ವರ್ಷ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ದ್ರಾಕ್ಷಿ ಹಾಗೂ ನಿಂಬೆಯ ಫಸಲು ಕೈಕೊಟ್ಟಿದ್ದು ಚಿಂತೆಗೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !