ಭಾನುವಾರ, ಡಿಸೆಂಬರ್ 8, 2019
25 °C

ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್‌.ಡಬ್ಲ್ಯು.ಬುಷ್‌ ನಿಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್‌.ಡಬ್ಲ್ಯು.ಬುಷ್‌(94) ಶುಕ್ರವಾರ ರಾತ್ರಿ ನಿಧನರಾದರು. 

ಶುಕ್ರವಾರ ರಾತ್ರಿ 10 ಗಂಟೆ ಎಚ್‌.ಡಬ್ಲ್ಯು.ಬುಷ್‌ ನಿಧರಾಗಿದ್ದಾಗಿ ಅವರ ಕುಟುಂಬದ ವಕ್ತಾರ ಜಿಮ್‌ ಮೆಗ್ರಾತ್‌ ತಿಳಿಸಿದರು. ಎಂಟು ತಿಂಗಳ ಹಿಂದೆಯಷ್ಟೇ ಪತ್ನಿ ಬಾರ್ಬರಾ ಬುಷ್‌ ನಿಧನರಾದರು. 

94 ವರ್ಷಗಳ ಮರೆಯಲಾಗದ ಕ್ಷಣಗಳನ್ನು ನನ್ನ ತಂದೆ ಬಿಟ್ಟು ಹೋಗಿದ್ದಾರೆ. ಈ ವಿಷಯನ್ನು ತಿಳಿಸಲು ಜೆಬ್‌, ನೀಲ್‌, ಮಾರ್ವಿನ್‌, ಡೋರೊ ಹಾಗೂ ನನಗೆ ಅತೀವ ದುಃಖವಾಗಿದೆ’ ಎಂದು ಬುಷ್‌ ಪುತ್ರ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನು ಕುಟುಂಬದ ವಕ್ತಾರರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. 

ಬುಷ್‌ 1989 ರಿಂದ 1993ರ ವರೆಗೆ ಅಮೆರಿಕದ 41ನೇ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದರು. ಎಂಟು ವರ್ಷಗಳ ಬಳಿಕ ಅವರ ಪುತ್ರ ಜಾರ್ಜ್‌ ಡಬ್ಲ್ಯು ಬುಷ್‌ 43ನೇ ಅಧ್ಯಕ್ಷರಾಗಿ ಆಯ್ಕೆಯಾದರು. 

1991ರ ಗಲ್ಫ್ ಯುದ್ಧದ ಬಳಿಕ ಹಿರಿಯ ಬುಷ್‌ ಖ್ಯಾತಿ ಅಮೆರಿಕದಲ್ಲಿ ಏರಿತ್ತಾದರೂ ಯುದ್ಧಾನಂತರದಲ್ಲಿ ಉಂಟಾದ ಆರ್ಥಿಕ ಕುಸಿತ, ಮುಂದಿನ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಸಡಿಲಿಸಿತು. 1993ರಲ್ಲಿ ಡೆಮೊಕ್ರಾಟ್‌ನ ಬಿಲ್‌ ಕ್ಲಿಂಟನ್‌ ವಿರುದ್ಧ ಸೋಲು ಕಂಡರು. 

ಎರಡನೇ ಮಹಾಯುದ್ಧದಲ್ಲಿ ನೌಕಾದಳದಲ್ಲಿ ಹೋರಾಡಿದವರು, ಪರಮಾಣು ಬಳಕೆಗೆ ಸಂಬಂಧಿಸಿದಂತೆ ಅಮೆರಿಕ ಎದುರಿಸುತ್ತಿದ್ದ 4 ದಶಕಗಳ ಶೀತ ಸಮರ ಶಮನಕ್ಕೆ ಶ್ರಮಿಸಿದರು. ಟೆಕ್ಸಾಸ್‌ ಕಾಂಗ್ರೆಸ್‌ಮನ್‌, ಸಿಐಎ ನಿರ್ದೇಶಕ ಹಾಗೂ ರೊಲಾಂಡ್‌ ರೀಗನ್‌ ಅವಧಿಯಲ್ಲಿ ಉಪಾಧ್ಯಕ್ಷರಾಗಿಯೂ ಬುಷ್‌ ಗುರುತಿಸಿಕೊಂಡಿದ್ದರು. 

(ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು