ಗುರುವಾರ , ನವೆಂಬರ್ 21, 2019
23 °C

ನೀರುಗುಳ್ಳೆ ನಿರ್ಮೂಲನೆ ಯಶಸ್ವಿ ಶಸ್ತ್ರಚಿಕಿತ್ಸೆ

Published:
Updated:

ಬೆಂಗಳೂರು: ಇರಾಕ್‌ನ 12 ವರ್ಷದ ಬಾಲಕನ ಹೃದಯದಲ್ಲಿದ್ದ 160 ಸಣ್ಣ ಗಾತ್ರದ ನೀರಿನ ಗುಳ್ಳೆಗಳ ಚೀಲಗಳನ್ನು ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದಿದ್ದಾರೆ. 

ಈ ನೀರಿನ ಗುಳ್ಳೆಗಳಿಂದ ಶ್ವಾಸಕೋಶ ಮತ್ತು ಪಿತ್ತಜನಕಾಂಗಕ್ಕೆ ಅಪಾಯವಿತ್ತು. ಡಾ. ವಿವೇಕ್ ಜವಳಿ ಹಾಗೂ ಡಾ. ನಿಶ್ಚಲ್ ರಾಜೇಂದ್ರ ಪಾಂಡ್ಯ ನೇತೃತ್ವದ ತಜ್ಞ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.

ಪ್ರತಿಕ್ರಿಯಿಸಿ (+)