ಅಮೆರಿಕ ಮಧ್ಯಂತರ ಚುನಾವಣೆ: ಭಾರತೀಯ ಮೂಲದ ನಾಲ್ವರು ಮರು ಆಯ್ಕೆ

7

ಅಮೆರಿಕ ಮಧ್ಯಂತರ ಚುನಾವಣೆ: ಭಾರತೀಯ ಮೂಲದ ನಾಲ್ವರು ಮರು ಆಯ್ಕೆ

Published:
Updated:

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ನಾಲ್ವರು ಡೆಮಾಕ್ರಟಿಕ್‌ ಪಕ್ಷದಿಂದ ಮರು ಆಯ್ಕೆಯಾಗಿದ್ದಾರೆ.

ಈ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆದು ಜನಪ್ರತಿನಿಧಿಗಳ ಸಭೆಯನ್ನು ನಿಯಂತ್ರಣಕ್ಕೆ ತೆಗದುಕೊಂಡಿದೆ. 12ಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್ನರು ಸ್ಟೇಟ್‌ ಆಸೆಂಬ್ಲಿಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ.

ಇಲಿನಿಯೆನ್ಸ್‌ ಜಿಲ್ಲೆಯಿಂದ ರಾಜ ಕೃಷ್ಣಮೂರ್ತಿ, ಕ್ಯಾಲಿಪೋರ್ನಿಯಾದ 7ನೇ ಸಂಸತ್‌ ಜಿಲ್ಲೆಯಿಂದ ಡಾ. ಅಮ್ಮಿ ಬೇರ ಹಾಗೂ 17ನೇ ಸಂಸತ್‌ ಜಿಲ್ಲೆಯಿಂದ ರಾವ್‌ ಖನ್ನಾ ಮತ್ತು ಪರಿಮಳ ಜಯಪಾಲ್‌ ಮರು ಆಯ್ಕೆಯಾಗಿದ್ದಾರೆ. 

ಸ್ಟೇಟ್‌ ಅಸೆಂಬ್ಲಿಗೆ 12ಕ್ಕೂ ಹೆಚ್ಚು ಭಾರತೀಯ ಮೂಲದವರು ಆಯ್ಕೆಯಾಗಿದ್ದಾರೆ. ವಿಸ್ಕನ್ಸಿನ್‌ ಜಿಲ್ಲೆಯಿಂದ ಜೋಶ್‌ ಕೌಲ್, ಕೆಂಟುಕಿಯಿಂದ ನೀಮಾ ಕುಲಕರ್ಣಿ, ಅರಿಜೋನಾದಿಂದ ಅಮಿಶ್‌ ಶಾ, ಉತ್ತರ ಕೆರೋಲಿನಾದಿಂದ ಮುಜ್‌ತಾಬಾ ಮೊಹಮ್ಮದ್‌ (ಜಿಲ್ಲೆ 38), ಜಯಾ ಚೌಧರಿ (ಜಿಲ್ಲೆ 15), ಓಇಹೋ ಜಿಲ್ಲೆಯಿಂದ ನೀರಜ್‌ ಅಟಾಣಿ, ವಾಷಿಂಗ್ಟನ್‌ ಜಿಲ್ಲೆಯಿಂದ ಮಂಕಾ ದಿಂಗ್ರಾ, ವಂದನಾ ಶೆಟ್ಟರ್ ಸೇರಿದಂತೆ ಸಬಿ ಕುಮಾರ್‌, ಆಶ್‌ ಕರ್ಲಾ ಮತ್ತು ಕುಮಾರ್‌ ಭರ್ವೆ ಆಯ್ಕೆಯಾಗಿದ್ದಾರೆ. 

ಇದನ್ನೂ ಓದಿ: ಡೆಮಾಕ್ರಟಿಕ್‌ ಪ್ರಾಬಲ್ಯ: ಟ್ರಂಪ್‌ಗೆ ಹಿನ್ನಡೆ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !