’ಪ್ರನಾಳದಲ್ಲಿ ವಿಕಸನ ವಿಜ್ಞಾನ’ ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್‌

7

’ಪ್ರನಾಳದಲ್ಲಿ ವಿಕಸನ ವಿಜ್ಞಾನ’ ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್‌

Published:
Updated:
Deccan Herald

ಸ್ಟಾಕ್‌ಹೋಮ್‌: ಡಾರ್ವಿನ್‌ನ ವಿಕಸನ ಸಿದ್ಧಾಂತವನ್ನು ಪ್ರನಾಳ(ಟೆಸ್ಟ್‌ಟ್ಯೂಬ್‌)ದಲ್ಲಿ ಅನ್ವಯಿಸಿ, ಮಾನವಕುಲ ಎದುರಿಸುತ್ತಿರುವ ರಾಸಾಯನಿಕ ಸಮಸ್ಯೆಗಳ ನಿವಾರಣೆಗೆ ನಾಂದಿ ಹಾಡಿರುವ ಫ್ರಾನ್ಸೆಸ್‌ ಎಚ್‌ ಅರ್ನಾಲ್ಡ್‌, ಜಾರ್ಜ್‌ ಪಿ ಸ್ಮಿತ್‌ ಮತ್ತು ಗ್ರೆಗೊರಿ ಪಿ ವಿಂಟರ್ ಅವರನ್ನು 2018ರ ರಸಾಯನಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

1 ಮಿಲಿಯನ್‌ ಡಾಲರ್‌(₹7.3 ಕೋಟಿ) ಪ್ರಶಸ್ತಿ ನೊಬೆಲ್‌ ಪ್ರಶಸ್ತಿ ಮೊತ್ತದಲ್ಲಿ ಅರ್ಧದಷ್ಟು ಫ್ರಾನ್ಸೆಸ್‌ ಎಚ್‌.ಅರ್ನಾಲ್ಡ್‌ ಪಡೆಯಲಿದ್ದು, ಪ್ರಶಸ್ತಿಯ ಉಳಿದ ಅರ್ಧ ಮೊತ್ತವನ್ನು ಜಾರ್ಜ್‌ ಪಿ.ಸ್ಮಿತ್‌ ಮತ್ತು ಸರ್‌ ಗ್ರೆಗೊರಿ ಪಿ.ವಿಂಟರ್‌ ಹಂಚಿಕೊಳ್ಳಲಿದ್ದಾರೆ ಎಂದು ರಾಯಲ್‌ ಸ್ವೀಡಿಷ್‌ ಅಡಾಡೆಮಿ ಆಫ್‌ ಸೈನ್ಸಸ್‌ ಬುಧವಾರ ಪ್ರಕಟಿಸಿದೆ. 

ವಿಕಸನ ವಿಜ್ಞಾನದ ಅಧ್ಯಯನ ನಡೆಸಿರುವ ಈ ವಿಜ್ಞಾನಿಗಳು, ಅದೇ ನಿಯಮ–ನಿಯಂತ್ರಣ ಬಳಸಿಕೊಂಡು ಆನವಂಶಿಕ(ಜೆನೆಟಿಕ್‌) ಬದಲಾವಣೆ ಮತ್ತು ಗುರುತಿಸುವಿಕೆಯ ಮೂಲಕ ಅಗತ್ಯ ಪ್ರೋಟಿನ್‌ ಅಭಿವೃದ್ಧಿ ಪಡಿಸುವುದನ್ನು ಸಾಧಿಸಿದ್ದಾರೆ. ಇದರಿಂದಾಗಿ ಮಾನವಕುಲ ಎದುರಿಸುತ್ತಿರುವ ರಾಸಾಯನಿಕ ಮೂಲದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. 

ಪರಿಸರ ಸ್ನೇಹಿ ರಾಸಾಯನಿಕ ಉತ್ಪಾದನಾ ಕೈಗಾರಿಕೆಗಳು, ಹೊಸ ಬಗೆಯ ವಸ್ತುಗಳ ಉತ್ಪಾದನೆ, ಸುಸ್ಥಿರವಾದ ಜೈವಿಕ ಇಂಧನಗಳ ಉತ್ಪಾದನೆ ಮಾಡುವುದು ಹಾಗೂ ಕಾಯಿಲೆಗಳನ್ನು ಶಮನಗೊಳಿಸುವ ಮೂಲಕ ಬದುಕು ಉಳಿಸುವುದು ಇವರ ಸಂಶೋಧನೆಗಳಿಂದ ಸಾಧ್ಯವಾಗಲಿದೆ. 

ಚಾರ್ಲ್ಸ್‌ ಡಾರ್ವಿನ್‌ನ ’ಮಾನವ ವಿಕಾಸ’ ಸಿದ್ಧಾಂತವನ್ನು ವಿಜ್ಞಾನಿಗಳು ಪ್ರನಾಳದಲ್ಲಿ ಅನ್ವಯಿಸಿ ಮಾನವ ಕುಲಕ್ಕೆ ಅಗತ್ಯವಾದುದನ್ನು ಸಾಧಿಸಿರುವುದಾಗಿ ಸಮಿತಿಯ ಸದಸ್ಯರೊಬ್ಬರು ವಿವರಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !