ಮಣಿಪಾಲ್‌ ಗ್ರೂಪ್‌ಗೆ ವಂಚನೆ; ವ್ಯವಸ್ಥಾಪಕ ಬಂಧನ

7

ಮಣಿಪಾಲ್‌ ಗ್ರೂಪ್‌ಗೆ ವಂಚನೆ; ವ್ಯವಸ್ಥಾಪಕ ಬಂಧನ

Published:
Updated:

ಬೆಂಗಳೂರು: ಮಣಿಪಾಲ್ ಎಜ್ಯುಕೇಷನ್ ಹಾಗೂ ಮೆಡಿಕಲ್ ಗ್ರೂಪ್‌ಗೆ ₹62 ಕೋಟಿ ವಂಚನೆ ಮಾಡಿದ್ದ ಆರೋಪದಡಿ, ಅದೇ ಗ್ರೂಪ್‌ನ ಉಪ ಪ್ರಧಾನ ವ್ಯವಸ್ಥಾಪಕ ಸಂದೀಪ್ ಗುರುರಾಜ್ (38) ಸೇರಿದಂತೆ ನಾಲ್ವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಲಸಂದ್ರದ ಸಂದೀಪ್ ಗುರುರಾಜ್, ಹಲವು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ವಿರುದ್ಧ ಡಿ. 26ರಂದು ಪ್ರಕರಣ ದಾಖಲಾಗಿತ್ತು. ಸಂದೀಪ್ ಜೊತೆ, ಅವರ ಪತ್ನಿ ಪಿ.ಎನ್. ಚಾರುಸ್ಮಿತಾ (30), ಸ್ನೇಹಿತರಾದ ಮುಂಬೈನ ಅಮ್ರಿತಾ ಚೆಂಗಪ್ಪ (34) ಹಾಗೂ ಕೋರಮಂಗಲದ ಮೀರಾ ಚೆಂಗಪ್ಪ (59) ಅವರನ್ನೂ ಬಂಧಿಸಲಾಗಿದೆ ಎಂದು ಕಬ್ಬನ್‌ ಪಾರ್ಕ್ ಪೊಲೀಸರು ಹೇಳಿದರು.

‘ಕಂಪನಿಯ ನಿರ್ದೇಶಕರಾದ ರಂಜನ್ ಪೈ ಹಾಗೂ ಶ್ರುತಿ ಪೈ ಅವರ ಖಾತೆಗಳಿಂದ ಹಾಗೂ ಅವರಿಬ್ಬರ ವಿವಿಧ ಅಂತರರಾಷ್ಟ್ರೀಯ ಕಂಪನಿಗಳ ಹಣವನ್ನು ಆರೋಪಿ ಸಂದೀಪ್‌, ದುರ್ಬಳಕೆ ಮಾಡಿಕೊಂಡಿದ್ದರು. ₹62 ಕೋಟಿ ಹಣವನ್ನು ತಮ್ಮ ಖಾತೆಗೆ, ಪತ್ನಿ ಹಾಗೂ ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು’

‘ಅದೇ ಹಣದಲ್ಲೇ ಪತ್ನಿ, ಸಂಬಂಧಿಕರು ಮತ್ತು ವ್ಯವಹಾರಿಕ ಪಾಲುದಾರರ ಹೆಸರಿನಲ್ಲಿ ವಿವಿಧ ಸ್ಥಳಗಳಲ್ಲಿ ನಿವೇಶನ ಹಾಗೂ ಸ್ವತ್ತುಗಳನ್ನು ಖರೀದಿಸಿದ್ದರು. ಹಲವು ಕಂಪನಿಗಳನ್ನೂ ತೆರೆದಿದ್ದರು’ ಎಂದರು.

ಮನೆ ಮೇಲೆ ದಾಳಿ: ‘ದೂರು ದಾಖಲಾಗುತ್ತಿದ್ದಂತೆ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ಸಂದೀಪ್ ಮನೆ ಮೇಲೆ ದಾಳಿ ಮಾಡಿದ್ದ ತಂಡ, ₹1.81 ಕೋಟಿ ಹಣದ ಸಮೇತ ಹಲವು ದಾಖಲೆಗಳನ್ನು ಜಪ್ತಿ ಮಾಡಿದೆ. ಪ್ರಕರಣದ ಇನ್ನೊಬ್ಬ ಆರೋಪಿ ವಿಶಾಲ್ ಸೋಮಣ್ಣ ತಲೆಮರೆಸಿಕೊಂಡಿದ್ದಾನೆ’ ಎಂದು ಡಿಸಿಪಿ ಡಿ.ದೇವರಾಜ್  ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !