ಗುರುವಾರ , ನವೆಂಬರ್ 14, 2019
19 °C

ಸೆಸ್ಕ್‌ ಬಿಲ್‌ನಲ್ಲಿ ಮೋಸ: ಆರೋಪ

Published:
Updated:
Prajavani

ಕೊಳ್ಳೇಗಾಲ: ಸೆಸ್ಕ್ ಬಿಲ್‌ ನೀಡುವಿಕೆಯಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ನಗರದ ದತ್ತ ಮೆಡಿಕಲ್ ಮಾಲೀಕ ವಿನಯ್ ಆರೋಪಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಪ್ರತಿ ತಿಂಗಳು ವಿದ್ಯುತ್ ಹಣ ಪಾವತಿ ಮಾಡಿದ್ದರೂ ಸಹ, ಸೆಸ್ಕ್‌ ನಿಮ್ಮ ಮನೆಯ ವಿದ್ಯುತ್ ಬಿಲ್ ₹ 11000 ಬಾಕಿಯಿದೆ ಎಂದು ಬಿಲ್‌ ಕೊಟ್ಟಿದ್ದಾರೆ.

‘ನಾವು ಯಾವುದೇ ಬಾಕಿಯನ್ನು ಉಳಿಸಿಕೊಂಡಿಲ್ಲ ಎಂದು ಹೇಳಿದರೂ ಸಹ ನೀವು ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ನಮ್ಮ ವಿದ್ಯುತ್ ಬಿಲ್ ಬಾಕಿ ಇದ್ದರೆ ಅದಕ್ಕೆ ಸೂಕ್ತ ದಾಖಲಾತಿಗಳನ್ನು ನೀಡಿ ಎಂದು ಕೇಳಿದರೂ ಸಹ ಯಾರು ನೀಡುತ್ತಿಲ್ಲ. ಸೆಸ್ಕ್‌ ಹಗಲು ದರೋಡೆ ನಡೆಸಿದೆ’ ಎಂದು ಅವರು ಆರೋಪಿಸಿದರು.

‘ಈ ಕುರಿತು ಸಂಬಂಧ ಪಟ್ಟ ಎಇಇ ಅವರಿಗೆ ಕೇಳಿದರೆ ಇದು ನನಗೆ ತಿಳಿದಿಲ್ಲ, ಇದು ನನಗೆ ಗೊತ್ತಿಲ್ಲ ಎಂದು ಬೇಜವಾಬ್ದಾರಿ ಉತ್ತರವನ್ನು ನೀಡುತ್ತಿದ್ದಾರೆ. ಇಲಾಖೆ ಈ ಬಗ್ಗೆ ಎಚ್ಚರವಹಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)