ಬಾವಿಯಲ್ಲಿ ನೀರು ಬಂದದ್ದಕ್ಕೆ 10 ಜೋಡಿ ಮದುವೆ ಮಾಡಿಸಿ ಹರಕೆ ತೀರಿಸಿದರು

ಸೋಮವಾರ, ಮೇ 27, 2019
24 °C

ಬಾವಿಯಲ್ಲಿ ನೀರು ಬಂದದ್ದಕ್ಕೆ 10 ಜೋಡಿ ಮದುವೆ ಮಾಡಿಸಿ ಹರಕೆ ತೀರಿಸಿದರು

Published:
Updated:
Prajavani

ನಾಲತವಾಡ: ಬಾವಿಯಲ್ಲಿ ನೀರು ಬಂದರೆ ಸಾಮೂಹಿಕ ಮದುವೆ ಮಾಡುವುದಾಗಿ ಹರಕೆ ಹೊತ್ತಿದ್ದ, ಇಲ್ಲಿಗೆ ಸಮೀಪದ ಬಂಗಾರಗುಂಡ ಗ್ರಾಮದ ಬಸವರಾಜ ಕುರೇಕನಾಳ ಎಂಬುವರು ಮಂಗಳವಾರ 10 ಜೋಡಿ ಮದುವೆ ಮಾಡಿ ಹರಕೆ ತೀರಿಸಿದರು.

ಬಾವಿ ಇದ್ದ ಸ್ಥಳದಲ್ಲೇ ಟೆಂಟ್ ಹೊಡೆದು ಅಂಕಲಿಮಠದ ವೀರಭದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಯರಝರಿಯ ಮಲ್ಲಾಲಿಂಗ ಮಹಾರಾಜರು ಹಾಗೂ ಸ್ಥಳಿಯ ನಿಂಗಣ್ಣ ಅಜ್ಜನ ಸಾನ್ನಿಧ್ಯದಲ್ಲಿ, ಸರೂರಿನ ಕಾಡಯ್ಯ ಗುರುವಿನ ಮಾಂಗಲ್ಯ ಧಾರಣೆ ಮಾಡಿಸಿದರು.

ರಕ್ಕಸಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಾಂತಲಿಂಗ ಭೂಪಾಲ ನಾಡಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕುರೇಕನಾಳ ಹಾಗೂ ಅನಸೂಯಾ ದಂಪತಿ ಇದ್ದರು. ಶಿಕ್ಷಕ ಪಿ.ವೈ.ಸಾಗರ ನಿರೂಪಿಸಿದರು, ಜಗದೀಶ ಗುರಿಕಾರ ಸ್ವಾಗತಿಸಿದರು. ಬಸವರಾಜ ಬಿರಾದಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !