ಫ್ರಾನ್ಸ್: ತುರ್ತು ಪರಿಸ್ಥಿತಿ ಇಲ್ಲ

7

ಫ್ರಾನ್ಸ್: ತುರ್ತು ಪರಿಸ್ಥಿತಿ ಇಲ್ಲ

Published:
Updated:

ಪ್ಯಾರಿಸ್: ತೀವ್ರ ಪ್ರತಿಭಟನೆ ಹಾಗೂ ಗಲಭೆಗೆ ಕಳೆದೊಂದು ವಾರದಿಂದ ಸಾಕ್ಷಿಯಾಗಿದ್ದ ಫ್ರಾನ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡುವುದಿಲ್ಲ ಎಂದು ಕಿರಿಯ ಆಂತರಿಕ ಸಚಿವ ಲೌರೆಂಟ್ ನನ್ಜೆನ್ ಸೋಮವಾರ ಹೇಳಿದ್ದಾರೆ.

‘ತುರ್ತು ಪರಿಸ್ಥಿತಿ ಹೇರಿಕೆಯು ಒಂದು ಆಯ್ಕೆಯಷ್ಟೇ. ಸದ್ಯ ಈ ವಿಚಾರ ನಮ್ಮ ಮುಂದಿಲ್ಲ’ ಎಂದು ಅವರು ಆರ್‌ಟಿಎಲ್ ರೇಡಿಯೊಗೆ ಮಾಹಿತಿ ನೀಡಿದ್ದಾರೆ.

ಗುರುತಿನ ಚೀಟಿಗಳ ಪರಿಶೀಲನೆ, ಸಾರ್ವಜನಿಕ ಸಭೆಗಳಿಗೆ ನಿರ್ಬಂಧ ಮೊದಲಾದ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಈ ಮಧ್ಯೆ ಶನಿವಾರ ಮೂರನೇ ಸುತ್ತಿನ ಪ್ರತಿಭಟನೆಗೆ ಕರೆ ನೀಡಲಾಗಿದೆ. ಪ್ರತಿಭಟನಾಕಾರರನ್ನು ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

2005 ಮತ್ತು 2015ರಲ್ಲಿ ಫ್ರಾನ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !