ಶುಕ್ರವಾರ, 9–8–1968/ ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್

7
Friday 50 years

ಶುಕ್ರವಾರ, 9–8–1968/ ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್

Published:
Updated:

500 ಹಳ್ಳಿಗೆ, ಇಪ್ಪತ್ತು ಸಾವಿರ ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್

ಬೆಂಗಳೂರು, ಆ. 8– ಪ್ರಸಕ್ತ ಸಾಲಿನಲ್ಲಿ ಸುಮಾರು 20,000 ನೀರಾವರಿ ಪಂಪ್‌ಸೆಟ್‌ಗಳಿಗೆ ಅಂದರೆ ಈಗ ಉದ್ದೇಶಿಸಿರುವ ಗುರಿಯ ಎರಡೂವರೆಯಷ್ಟು ವಿದ್ಯುತ್ ಪೂರೈಸಲು ಸರಕಾರ ಪರಿಶೀಲಿಸುತ್ತಿದೆಯೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಪ್ರಕಟಿಸಿದರು.

 

ಜಪಾನಿನಲ್ಲಿ ಬದಲಿ ಹೃದಯ ಜೋಡಣೆ

ಟೋಕಿಯೊ, ಆ. 8– ಜಪಾನಿನ ಉತ್ತರ ಹೊಕೈಡೊನಲ್ಲಿರುವ ಸಪ್ಪೊರೊ ಮೆಡಿಕಲ್ ಕಾಲೇಜಿನ ಶಸ್ತ್ರ ಚಿಕಿತ್ಸಕರ ತಂಡವೊಂದು ಪ್ರಪಂಚದ ಹದಿಮೂರನೆ ಬದಲಿ ಹೃದಯ ಚಿಕಿತ್ಸೆಯನ್ನು ಇಂದು ನಡೆಸಿದರು.

ಬದಲಿ ಹೃದಯ ಪಡೆದ 15 ವರ್ಷದ ಹುಡುಗ ‘ಈಗ ಚೆನ್ನಾಗಿದ್ದಾನೆ’ ಎಂದು ಪ್ರಧಾನ ಶಸ್ತ್ರ ಚಿಕಿತ್ಸಕ ಪ್ರೊ. ಜ್ಯೂರೊವಾಡ ಅವರು ಚಿಕಿತ್ಸೆ ನಡೆಸಿದ ಒಂಭತ್ತು ದಿನಗಳ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

 

ನಾಲ್ಕನೆ ಯೋಜನೆಯಲ್ಲಿ ಹಲವು ಹಳ್ಳಿಗಳಿಗೆ ಬಹುತೇಕ ಸೌಲಭ್ಯ

ಬೆಂಗಳೂರು, ಆ. 8– ನಾಲ್ಕನೇ ಯೋಜನೆಯಲ್ಲಿ ರಾಷ್ಟ್ರದ ಹಲವು ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ದೊರಕುವ ಬಹುತೇಕ ಸೌಲಭ್ಯಗಳನ್ನು ದೊರಕಿಸಲು ಕೇಂದ್ರ ಸರಕಾರ ಯೋಚಿಸಿದೆ.

 

ಸಮಾಜವಾದಕ್ಕೆ ಹೋರಾಡಲು ಯುವಕರಿಗೆ ಪ್ರಧಾನಿ ಕರೆ

ನವದೆಹಲಿ, ಆ. 8– ಜಾತ್ಯತೀತವಾಗಿ ಸಮಾಜವಾದಕ್ಕಾಗಿ ಹೋರಾಟ ಮುಂದುವರೆಸಲು ರಾಷ್ಟ್ರದ ಯುವಕರಿಗೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಕರೆಯಿತ್ತಿದ್ದಾರೆ.

 

‘ಮುರಾರಜಿ ಅಧಿಕಾರದಲ್ಲಿ ಉಳಿಯಲು ಪ್ರಧಾನಿಗೆ ತೀನ್‌ಮೂರ್ತಿ ಭವನ ಕೊಡುಗೆ’

ನವದೆಹಲಿ, ಆ. 8– ತೀನ್‌ಮೂರ್ತಿ ನೆಹರೂ ಸ್ಮಾರಕ ಭವನವನ್ನು ಪ್ರಧಾನಿಯ ಕಾಯಂ ನಿವಾಸವನ್ನಾಗಿ ಮಾಡಲು ನಡೆಯುತ್ತಿರುವ ಸನ್ನಾಹಗಳನ್ನು ಟೀಕಿಸಿ ಸಂಯುಕ್ತ ಸೋಷಲಿಸ್ಟ್ ನಾಯಕ ಮಧು ಲಿಮೆಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಮುರಾರಜಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಈ ನಿರ್ಧಾರವನ್ನು ಕೈಗೊಂಡಿದೆಯೆಂಬ ವರದಿಯನ್ನು ಪ್ರಸ್ತಾಪಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಪ್ರಧಾನಿ ಕೆಲವು ವಿಷಯಗಳನ್ನು ಪರಿಶೀಲಿಸಬೇಕೆಂದು ಅವರು ಕೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !