ಪೈಪ್ಲೈನ್ ಸ್ಫೋಟ: ಸಾವಿನ ಸಂಖ್ಯೆ 73ಕ್ಕೆ ಏರಿಕೆ

ತ್ಲಹ್ಯುಯೆಲಿಲ್ಪನ್, ಮೆಕ್ಸಿಕೊ: ಅಕ್ರಮವಾಗಿ ಅಳವಡಿಸಿದ್ದ ಇಂಧನ ಪೈಪ್ಲೈನ್ನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿ ಸಾವನ್ನಪ್ಪಿದವರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಮತ್ತೆ ಐದು ಮೃತದೇಹ ಪತ್ತೆಯಾಗಿದೆ ಎಂದು ಹಿಡಾಲ್ಗೊ ಗವರ್ನರ್ ಒಮರ್ ಪಯದ್ ತಿಳಿಸಿದ್ದಾರೆ. ಸ್ಫೋಟದಿಂದ 74 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಕೆಲವೊಂದು ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯಲು ವಿಧಿವಿಜ್ಞಾಜ ತಜ್ಞರ ನೆರವು ಪಡೆಯಲಾಗುತ್ತಿದೆ.
₹21,300 ಕೋಟಿಗಳಷ್ಟು ಮೊತ್ತದಷ್ಟು ವಾರ್ಷಿಕ ತೈಲ ಕಳ್ಳತನವಾಗುತ್ತಿದ್ದು, ಇದನ್ನು ತಡೆಯುವುದು ಮೆಕ್ಸಿಕೊ ಸರ್ಕಾರದ ಪಾಲಿಗೆ ಅತೀ ದೊಡ್ಡ ಸವಾಲಾಗಿದೆ.
ಬರಹ ಇಷ್ಟವಾಯಿತೆ?
2
0
2
0
0
0 comments
View All