‍‘ಪೋಸ್ಟರ್ ಬಾಯ್ ಹೇಳಿಕೆ: ಮೋದಿ ಮಾತಿಂದ ದೃಢಪಟ್ಟಿದೆ’

ಭಾನುವಾರ, ಏಪ್ರಿಲ್ 21, 2019
32 °C

‍‘ಪೋಸ್ಟರ್ ಬಾಯ್ ಹೇಳಿಕೆ: ಮೋದಿ ಮಾತಿಂದ ದೃಢಪಟ್ಟಿದೆ’

Published:
Updated:
Prajavani

ಲಂಡನ್: ‘ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಾನು ಪೋಸ್ಟರ್ ಬಾಯ್ ಆಗಿದ್ದೇನೆ ಎನ್ನುವ ನನ್ನ ಮಾತು, ಪ್ರಧಾನಿ ಮೋದಿ ಅವರು ಈಚೆಗೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಯಿಂದಾಗಿ ಸಂಪೂರ್ಣ ಸಾಬೀತಾಗಿದೆ’ ಎಂದು ಉದ್ಯಮಿ ವಿಜಯ್ ಮಲ್ಯ ಭಾನುವಾರ ಟ್ವೀಟ್ ಮಾಡಿದ್ದಾರೆ. 

‘ನಾನು ಬ್ಯಾಂಕ್‌ಗೆ ವಂಚಿಸಿದ್ದೇನೆ ಎನ್ನಲಾದ ಮೊತ್ತಕ್ಕಿಂತ ಹೆಚ್ಚು ಮೌಲ್ಯದ ನನ್ನ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೋದಿ ಹೇಳಿದ್ದಾರೆ’ ಎಂದು ಟ್ವೀಟ್‌ನಲ್ಲಿ ಮಲ್ಯ ಉಲ್ಲೇಖಿಸಿದ್ದಾರೆ.

‘ನಾನು 1992ರಿಂದ ಬ್ರಿಟನ್ ಪ್ರಜೆ ಆಗಿದ್ದೇನೆ ಎನ್ನುವ ವಾಸ್ತವಾಂಶವನ್ನು ಅಲಕ್ಷಿಲಾಗಿದೆ. ನಾನು ಓಡಿಹೋಗಿದ್ದೇನೆ ಎಂದು ಬಿಜೆಪಿ ಹೇಳುತ್ತಿದೆ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. 

‘ಮಲ್ಯ ಬ್ಯಾಂಕ್‌ಗೆ ₹9,000 ಕೋಟಿ ವಂಚಿಸಿದ್ದಾರೆ. ಆದರೆ ವಿಶ್ವದೆಲ್ಲೆಡೆಯಿಂದ ಮಲ್ಯ ಅವರಿಗೆ ಸೇರಿದ ₹ 14 ಸಾವಿರ ಕೋಟಿ ಮೌಲ್ಯದ ಸ್ವತ್ತುಗಳನ್ನು ನಮ್ಮ ಸರ್ಕಾರ ವಶಪಡಿಸಿಕೊಂಡಿದೆ. ನಾವು ದುಪ್ಪಟ್ಟು ಹಣವನ್ನು ವಶಕ್ಕೆ ಪಡೆದಿರುವುದರಿಂದ ಮಲ್ಯ ಈಗ ಸಂಕಷ್ಟದಲ್ಲಿದ್ದಾರೆ’ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !