ಫೆ.11ಕ್ಕೆ ಭವಿಷ್ಯ ನಿಧಿ ಅದಾಲತ್‌

7

ಫೆ.11ಕ್ಕೆ ಭವಿಷ್ಯ ನಿಧಿ ಅದಾಲತ್‌

Published:
Updated:

ಬೆಂಗಳೂರು: ಭವಿಷ್ಯ ನಿಧಿಯ ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯು ಫೆ.11ರಂದು ‘ನಿಧಿ ಆಪ್‌ ಕೆ ನಿಕಟ್‌’ ಅದಾಲತ್‌ ಆಯೋಜಿಸಿದೆ.

ರಾಜಾರಾಮ್‌ ಮೋಹನ್‌ ರಾಯ್‌ ರಸ್ತೆಯ ಪ್ರಾದೇಶಿಕ ಕಚೇರಿ–2ರ ವ್ಯಾಪ್ತಿಗೆ ಒಳಪಡುವ ನೋಂದಣಿದಾರರು, ಉದ್ಯೋಗದಾತರು ಮತ್ತು ವಿನಾಯಿತಿ ಪಡೆದ ಸಂಸ್ಥೆಗಳು, ಕಂಪನಿಗಳು ಭವಿಷ್ಯ ನಿಧಿ ಮತ್ತು ಪಿಂಚಣಿಯ ಕುರಿತು ದೀರ್ಘಕಾಲದಿಂದ ಎದುರಿಸುತ್ತಿರುವ ಕುಂದುಕೊರತೆಗಳನ್ನು ಆಯುಕ್ತರ ಗಮನಕ್ಕೆ ತರಬಹುದು.

ಹೆಸರು, ಭವಿಷ್ಯ ನಿಧಿ ಸಂಖ್ಯೆ, ಖಾತೆ ಸಂಖ್ಯೆ, ಉದ್ಯೋಗದಾತರ ವಿವರದೊಂದಿಗೆ ಕುಂದುಕೊರತೆಗಳನ್ನು ಫೆ.7ರ ಒಳಗೆ ಕಚೇರಿಗೆ ಸಲ್ಲಿಸಬೇಕು. ಅಗತ್ಯ ಎನಿಸಿದರೆ, ಆಯುಕ್ತರ ಎದುರು ಫೆ.11ರಂದು ಹಾಜರಾಗಿ ಪರಿಹಾರ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಾಜರಾಗುವ ಸಮಯ: ನೋಂದಣಿದಾರರು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1, ಉದ್ಯೋಗದಾತರು ಮಧ್ಯಾಹ್ನ 3ರಿಂದ 4, ವಿನಾಯಿತಿ ಪಡೆದ ಸಂಸ್ಥೆಗಳು, ಕಂಪನಿಗಳು ಸಂಜೆ 4 ರಿಂದ 5. ಮಾಹಿತಿಗೆ: 080 22230118, ro.bangalore@epfindia.gov.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !