ಐಐಎಸ್‌ಸಿ ಎಂಜಿನಿಯರ್‌ ಉಪ ಮುಖ್ಯಮಂತ್ರಿ ಚರ್ಚೆ

ಶನಿವಾರ, ಮೇ 25, 2019
32 °C

ಐಐಎಸ್‌ಸಿ ಎಂಜಿನಿಯರ್‌ ಉಪ ಮುಖ್ಯಮಂತ್ರಿ ಚರ್ಚೆ

Published:
Updated:
Prajavani

ಬೆಂಗಳೂರು: ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ಆಶೀಷ್ ವರ್ಮಾ ಬುಧವಾರ ಭೇಟಿ ಮಾಡಿ, ನಗರದ ಸಾರಿಗೆ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ತಾವು ಅಧ್ಯಯನ ನಡೆಸಿ, ಸಿದ್ಧಪಡಿಸಿದ ವರದಿಯನ್ನು ಸಲ್ಲಿಸಿದರು.

‘ಬೆಂಗಳೂರು ನಗರದಲ್ಲಿ ಪ್ರಸ್ತಾವಿತ ಎಲಿವೇಟೆಡ್‌ ಕಾರಿಡಾರ್‌ನ ಸುಸ್ಥಿರತೆ– ಮೆಟ್ರೊ ರೈಲು ವ್ಯವಸ್ಥೆಯ ಜೊತೆ ತುಲಾನಾತ್ಮಕ ವಿಶ್ಲೇಷಣೆ‘, ‘ಸಾರಿಗೆ ವ್ಯವಸ್ಥೆಯ ಬದಲಾದ ಮುಖ– ಸ್ಥಳಾಂತರ ಕೇಂದ್ರೀಕರಿಸಿ ಪೂರೈಕೆ ಮತ್ತು ಬೇಡಿಕೆ’, ‘ಇಂಡೊ–ನಾರ್ವೆ ಯೋಜನಾ ವರದಿ– ಬೆಂಗಳೂರಿನ ಜೀವಂತಿಕೆಗೆ ಪೂರಕವಾದ ಸುಸ್ಥಿರ ಸಾರಿಗೆ ಉಪಕ್ರಮ’ ಎಂಬ ಮೂರು ಅಧ್ಯಯನ ವರದಿಗಳ ಕುರಿತು ಪರಮೇಶ್ವರ ಜೊತೆ ವರ್ಮಾ ಚರ್ಚೆ ನಡೆಸಿದರು.

‘ಅಧ್ಯಯನ ವರದಿಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ವರದಿಗಳಲ್ಲಿರುವ ಅಂಶಗಳ ಬಗ್ಗೆ ಮತ್ತೊಮ್ಮೆ ವಿವರವಾಗಿ ಮಾತುಕತೆ ನಡೆಸಿ, ಅನುಷ್ಠಾನ ಬಗ್ಗೆ ತೀರ್ಮಾನಿಸೋಣ’ ಎಂದು ವರ್ಮಾ ಅವರಿಗೆ ಪರಮೇಶ್ವರ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !