ಗ್ಯಾಸ್‌ ಪೈಪ್‌ ಅಳವಡಿಕೆ: ಕಾರ್ಮಿಕ ಸಾವು

ಗುರುವಾರ , ಮೇ 23, 2019
30 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಗ್ಯಾಸ್‌ ಪೈಪ್‌ ಅಳವಡಿಕೆ: ಕಾರ್ಮಿಕ ಸಾವು

Published:
Updated:

ಬೆಂಗಳೂರು: ಮುನೇಕೊಳಾಲದಲ್ಲಿ ನೈಸರ್ಗಿಕ ಅನಿಲದ ಪೈಪ್‌ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಅಸ್ಲೇವುದ್ದಿನ್ (57) ಎಂಬುವರು ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಅಸ್ಲೇವುದ್ದೀನ್, ಕೆಲಸ ಅರಸಿ ನಗರಕ್ಕೆ ಬಂದಿದ್ದರು. ಗೇಲ್ ಇಂಡಿಯಾ ಕಂಪನಿ ಅಧೀನದ ಪಟೇಲ್ ಎಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆ ಮನೆಗೆ ಅನಿಲದ ಪೈಪ್‌ ಅಳವಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.

‘ಫೆ. 15ರಂದು ಬೆಳಿಗ್ಗೆ ಮುನೇಕೊಳಾಲದ ಚಂದ್ರಶೇಖರ್ ಎಂಬುವರ ಎಂಎನ್‌ಆರ್‌ ಕಟ್ಟಡದ ಎರಡನೇ ಮಹಡಿಯಲ್ಲಿ ಪೈಪ್‌ ಅಳವಡಿಸಲಾಗುತ್ತಿತ್ತು. ಪಕ್ಕದ ಮನೆಯ ಸ್ಯಾನಿಟರಿ ಪೈಪ್‌ ಮೇಲೆ ನಿಂತು ಅಸ್ಲೇವುದ್ದೀನ್, ಪೈಪ್‌ಗೆ ಪ್ಲಾಸ್ಟರಿಂಗ್ ಮಾಡುತ್ತಿದ್ದರು. ಅದೇ ವೇಳೆ ಸ್ಯಾನಿಟರಿ ಪೈಪ್‌ ಮುರಿದು ಅವರು ಕೆಳಗೆ ಬಿದ್ದಿದ್ದರು’ ಎಂದು ಪೊಲೀಸರು ಹೇಳಿದರು.

‘ತಲೆಗೆ ಪೆಟ್ಟಾಗಿ ನರಳಾಡುತ್ತಿದ್ದ ಅಸ್ಲೇವುದ್ದೀನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಅವರು ತಿಳಿಸಿದರು.

‘ಪಟೇಲ್ ಎಂಜಿನಿಯರಿಂಗ್ ಕಂಪನಿ ಹಾಗೂ ಕಟ್ಟಡದ ಮಾಲೀಕರ ನಿರ್ಲಕ್ಷ್ಯದಿಂದ ಅಸ್ಲೇವುದ್ದೀನ್ ಮೃತಪಟ್ಟಿರುವುದಾಗಿ ಸಂಬಂಧಿಕರು ದೂರು ನೀಡಿದ್ದಾರೆ. ಕಂಪನಿಯ ಸಂದೀಪ್, ನೇತಾರಾಮ ಹಾಗೂ ಕಟ್ಟಡದ ಮಾಲೀಕ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !